Monday, 23rd October 2017  

Vijayavani

1. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 2. ಟಿಪ್ಪು ಜಯಂತಿ ವಿರುದ್ಧ ಹೋರಾಟ ತೀವ್ರ – ಮಂಡ್ಯದಲ್ಲಿ ಆಚರಣೆ ವಿರೋಧಿಗಳಿಂದ ರಕ್ತದಲ್ಲಿ ಪತ್ರ – ಬೆಂಗಳೂರಲ್ಲಿ ಸಿಎಂಗೆ ಮಾಸ್‌ ಕಿಲ್ಲರ್‌ ಪಟ್ಟ 3. ಸಾಲದ ಬೆಂಕಿಯಲ್ಲಿ ಬೆಂದ ರೈತ ಕುಟುಂಬ – ಡಿಸಿ ಕಚೇರಿ ಎದುರೇ ಐವರು ಅಗ್ನಿಗಾಹುತಿ – ಮೈಸೂರಿನಲ್ಲೂ ಬ್ಯಾಂಕ್‌ ಕಾಟಕ್ಕೆ ರೈತ ಆತ್ಮಹತ್ಯೆ ಯತ್ನ 4. ರಸ್ತೆಯಲ್ಲೇ ಕುಡುಕನ ನೀಚ ಕೃತ್ಯ – ಹಾಡಹಗಲೇ ಬುದ್ಧಿಮಾಂಧ್ಯೆ ಮೇಲೆ ಅತ್ಯಾಚಾರ – ರಸ್ತೆಬದಿ ನೋಡುತ್ತಾ ನಿಂತ ಜನಸಮೂಹ 5. ಗೋದಾಮಿನಲ್ಲಿ ಕೊಳೆಯುತ್ತಿದ್ದ ಗೋಧಿಗೆ ಮುಕ್ತಿ – ದಿಗ್ವಿಜಯ ನ್ಯೂಸ್‌ ವರದಿಗೆ ಎಚ್ಚೆತ್ತ ಅಧಿಕಾರಿಗಳು – ಶಿರಸಿ ಸಹಕಾರ ಗೋಡೌನ್‌ಗೆ ದೌಡು
Breaking News :

ಶಿವಶಂಕರಪ್ಪಗೆ ಚಿನ್ನ

Monday, 14.08.2017, 3:00 AM       No Comments

ಗುಂಡ್ಲುಪೇಟೆ: ಭಾರತೀಯ ಗಡಿ ಭದ್ರತಾ ಪಡೆಯ ಗುಂಡ್ಲುಪೇಟೆ ತಾಲೂಕಿನ ಯೋಧ ಎಚ್.ಎಂ.ಶಿವಶಂಕರಪ್ಪ ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ನಡೆದ ವಿಶ್ವ ಪೊಲೀಸ್ ಹಾಗೂ ಅಗ್ನಿಶಾಮಕದಳದ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 91 ಕೆ.ಜಿ. ಮೇಲ್ಪಟ್ಟ ವಿಭಾಗದ ಸ್ಪರ್ಧೆಯಲ್ಲಿ ದೆಹಲಿ ಪಡೆಯ ಶಿವಶಂಕರಪ್ಪ ಸ್ಪೇನ್​ನ ಇಂಗ್ಲಾನ್ ಆಲ್ಬರ್ಟ್ ಡೇ ವಿರುದ್ಧ ಫೈನಲ್​ನಲ್ಲಿ ಗೆಲುವು ದಾಖಲಿಸಿದರು. ಎರಡನೇ ಸುತ್ತಿನಲ್ಲಿ ಎದುರಾಳಿ ಗಾಯಗೊಂಡು ಸ್ಪರ್ಧಾ ಕಣದಿಂದ ಹಿಂದೆ ಸರಿದಿದ್ದರಿಂದ ಶಿವಶಂಕರಪ್ಪಗೆ ಸುಲಭವಾಗಿ ವಿಜಯಮಾಲೆ ಒಲಿಯಿತು.

ಪರಿಚಯ: ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಹೊನ್ನೇಗೌಡನಹಳ್ಳಿ ಗ್ರಾಮದ ಎಚ್.ವಿ.ಮಹದೇವಪ್ಪ ಹಾಗೂ ಮಲ್ಲಿಗಮ್ಮ ದಂಪತಿ ಪುತ್ರನಾದ ಎಚ್.ಎಂ.ಶಿವಶಂಕರಪ್ಪ 2003ರಲ್ಲಿ ಪೇದೆಯಾಗಿ ಸೇವೆಗೆ ಸೇರಿದರು. 2004-07ರಲ್ಲಿ ಬಾಕ್ಸಿಂಗ್ ತರಬೇತಿ ಪಡೆದು 2008-09ರಲ್ಲಿ ಅಖಿಲ ಭಾರತ ಪೊಲೀಸ್ ಅಕಾಡೆಮಿಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ, ನಂತರ 2010ರಿಂದ 15ರವರೆಗೆ ನಡೆದ ಎಲ್ಲ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 2012ರಲ್ಲಿ ಬ್ರೆಜಿಲ್​ನಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, 2016ರಲ್ಲಿ ಯುಎಸ್​ಎ ವರ್ಜೀನಿಯಾದ ವಾಷಿಂಗ್​ಟನ್​ನಲ್ಲಿ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದರು. ಶಿವಶಂಕರಪ್ಪ ಅವರ ಪತ್ನಿ ಸಂಧ್ಯಾರಾಣಿ ಹಾಗೂ ಮಗಳು ಲೇಖನಾ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ.

Leave a Reply

Your email address will not be published. Required fields are marked *

Back To Top