Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಶಿವಮೊಗ್ಗದ ಹೃದಯ ಭಾಗದಲ್ಲೇ ಗಾಂಜಾ ಘಾಟು!

Thursday, 17.11.2016, 6:00 AM       No Comments
  • ಟಿಪ್ಪು ನಗರ ಚಾನೆಲ್ ಏರಿ ಮೇಲೆ ಪುಂಡರ ಹಾವಳಿ
  • ವ್ಯಸನಿಗಳನ್ನು ಪ್ರಶ್ನಿಸಿದವರಿಗೇ ಉಳಿಗಾಲವಿಲ್ಲ

ಶಿವಮೊಗ್ಗ: ಜಿಲ್ಲೆಯಲ್ಲಿ ಇತ್ತೀಚೆಗೆ ಗಾಂಜಾ ಹಾವಳಿ ಹೆಚ್ಚುತ್ತಿದೆ. ಕಾಲೇಜು ಬಳಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ ಘಟನೆಗಳೂ ನಡೆದಿವೆ. ಇದರ ಹಾವಳಿ ಎಷ್ಟೆಂದರೆ ಯುವಕರು ಸಾರ್ವಜನಿಕ ಸ್ಥಳದಲ್ಲಿ ಕುಳಿತು ಯಾವುದೆ ಆತಂಕವಿಲ್ಲದೇ ಗಾಂಜಾ ಸೇವನೆ ಮಾಡುತ್ತಿದ್ದಾರೆ. ಅದೂ ನಗರದ ಹೃದಯ ಭಾಗದಲ್ಲಿ!

ಈ ವಿಷಯ ಕೇಳಿದ ಯಾರೆ ಆದರೂ ಬೆಚ್ಚಿಬೀಳಬಹುದು. ಇದು ವಾಸ್ತವ, ಗುಂಪಾಗಿ ಕುಳಿತು ಗಾಂಜಾ ನಶೆಯೇರಿಸಿಕೊಳ್ಳುವ ಇವರನ್ನು ಯಾರಾದರೂ ಪ್ರಶ್ನಿಸಿದರೆ ಅವರ ಕತೆ ಮುಗಿದಂತೆಯೇ. ಹೀಗಾಗಿ ಯಾರೂ ಇವರ ತಂಟೆಗೆ ಹೋಗುತ್ತಿಲ್ಲ.

ಚಾನೆಲ್ ಏರಿ ಮೇಲೆ ಗಾಂಜಾ ನಶೆ:

ಟಿಪ್ಪು ನಗರದ ಚಾನೆಲ್ ಏರಿ ಗಾಂಜಾ ವ್ಯಸನಿಗಳಿಗೆ ನೆಚ್ಚಿನ ತಾಣವಾಗಿದೆ. ಬೇರೆ ಬಡಾವಣೆಗಳಿಂದ ಇಲ್ಲಿಗೆ ಬರುವ ಯುವಕರ ತಂಡ ಸಂಜೆಯಿಂದಲೇ ಗಾಂಜಾ ಬಳಕೆಯಲ್ಲಿ ಮಗ್ನವಾಗುತ್ತದೆ. ತಡರಾತ್ರಿವರೆಗೂ ಇಲ್ಲಿ ಕೇಕೆ, ಗಲಾಟೆ ತಪ್ಪಿದ್ದಲ್ಲ. ಕೆಲವೊಮ್ಮೆ ಅವರ ನಡುವೆಯೇ ಹೊಡೆದಾಟ, ಬಡಿದಾಟ ನಡೆಯುವುದೂ ಇದೆ.

ಹೀಗೆ ಹಾದಿ ತಪ್ಪಿದ ಮಂದಿಯನ್ನು ಯಾರಾದರೂ ಪ್ರಶ್ನಿಸಿದರೆ, ಈ ಹುಡುಗರು ಅವರ ಮೇಲೆ ಏರಿ ಹೋಗುತ್ತಾರೆ. ಕೆಟ್ಟ ಮಾತುಗಳಿಂದ ನಿಂದಿಸುತ್ತಾರೆ. ಹೀಗಾಗಿ ಅಲ್ಲಿನ ಜನರು ಕೂಡ ಗಾಂಜಾ ವ್ಯಸನಿಗಳ ತಂಟೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಇಲ್ಲಿ ಗಾಂಜಾ ಸೇವನೆ ಮಾಡಿದ ನಂತರ ಪರಸ್ಪರ ಕಿತ್ತಾಡಿಕೊಂಡಿದ್ದ ಕೆಲ ಮಂದಿ ನಂತರ ಬೇರೆ ಬಡಾವಣೆಗೆ ತೆರಳಿ ಮಚ್ಚು, ಲಾಂಗು ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡಿದ್ದರು. ಅಂತಿಮವಾಗಿ ಇವರನ್ನೆಲ್ಲ ಪೊಲೀಸರು ಬಂಧಿಸಿದ್ದರು. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಇನ್ನಷ್ಟು ಅನಾಹುತಗಳಿಗೆ ಕಾರಣವಾಗಲಿದೆ ಎಂಬ ಆತಂಕ ಸ್ಥಳೀಯರದ್ದು.

ನಲ್ಲಿ, ದೀಪಗಳು ಬಲಿ

ಗಾಂಜಾ ವ್ಯಸನಿಗಳ ಪುಂಡಾಟ ಒಂದೆರಡಲ್ಲ. ಟಿಪ್ಪು ನಗರ ಚಾನೆಲ್ ಏರಿ ಮೇಲೆ, ಅಲ್ಲಿಯೇ ಬಿದ್ದುಹೋಗಿರುವ ಪಾಳು ಮನೆಗಳೇ ಇವರ ಅನೈತಿಕ ಚಟುವಟಿಕೆಯ ತಾಣಗಳಾಗಿವೆ. ಗಾಂಜಾ ಬಳಸಿದ ಬಳಿಕ ಅಲ್ಲಿನ ಬೀದಿ ದೀಪಗಳಿಗೆ ಕಲ್ಲು ಹೊಡೆಯುವುದು, ನೀರಿನ ನಲ್ಲಿಗಳನ್ನು ಒಡೆದುಹಾಕಿ ವಿಕೃತ ಮನೋಭಾವ ಪ್ರದರ್ಶಿಸುತ್ತಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾಳು ಮಾಡುತ್ತಿರುವ ಇವರು ಮುಂದೆ ಇನ್ನಷ್ಟು ಆತಂಕ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

16-smg-ganja

Leave a Reply

Your email address will not be published. Required fields are marked *

Back To Top