Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಶಾಲೆ ಉಳಿವಿಗೆ ಶಿಕ್ಷಕನೇ ಚಾಲಕ

Wednesday, 11.07.2018, 3:03 AM       No Comments

ಉಡುಪಿ: ನಮ್ಮ ಶಾಲೆ ಉಳಿಯಬೇಕು, ಮಕ್ಕಳು ಶಾಲೆಗೆ ಬರಬೇಕು ಎಂಬ ಉದ್ದೇಶದಿಂದ ಬ್ರಹ್ಮಾವರದ ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ರಾಜಾ ರಾಮ್ ಶಾಲಾ ವಾಹನದ ಚಾಲಕ ರಾಗಿಯೂ ಪಾಲ ಕರ ಗಮನ ಸೆಳೆಯುತ್ತಿದ್ದಾರೆ.

ಶಾಲೆಯಲ್ಲಿ ಮಕ್ಕಳ ದಾಖಲಾತಿ ತಗ್ಗುತ್ತಿದ್ದುದರಿಂದ ದಾನಿಗಳ ಮೂಲಕ ವಾಹನ ವ್ಯವಸ್ಥೆ ಮಾಡಲಾಗಿದೆ. ಈಗ ಶಾಲೆಯಲ್ಲಿ 90 ವಿದ್ಯಾರ್ಥಿಗಳಿದ್ದಾರೆ. ಅಂದಾಜು 60 ಮಕ್ಕಳನ್ನು ಶಾಲೆಗೆ ಕರೆತರಲು ಪ್ರತಿದಿನ 4 ಟ್ರಿಪ್ ಮಾಡಬೇಕು. ವಾಹನದ ಡೀಸೆಲ್, ನಿರ್ವಹಣೆ ಖರ್ಚನ್ನು ಹಳೇ ವಿದ್ಯಾರ್ಥಿ ಸಂಘ ನೋಡಿಕೊಳ್ಳುತ್ತದೆ. ರಾಜಾ ರಾಮ್ ರಜೆಯಲ್ಲಿದ್ದಾಗ ಸ್ಥಳೀಯ ರಿಕ್ಷಾ ಚಾಲಕರು ವಾಹನ ಟ್ರಿಪ್ ಮಾಡುತ್ತಾರೆ. ಅವರಿಗೆ ಶಿಕ್ಷಕರೇ ಭತ್ಯೆ ನೀಡುತ್ತಾರೆ.

ದಾಖಲಾತಿಯಲ್ಲಿ ಏರಿಕೆ

2017-18ರ ವರ್ಷಾರಂಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್ ಶೆಟ್ಟಿ, ನಿರ್ವಿುತಿ ಇಂಜಿನಿಯರ್ ಗಣೇಶ್ ಪ್ರಸಾದ್ ಶೆಟ್ಟಿ ಶ್ರಮದಿಂದ ಬೆಂಗಳೂರಿನ ಉದ್ಯಮಿ ವಿಜಯ ಹೆಗ್ಡೆ ಬಾರಾಳಿ ಅವರು ಟೆಂಪೊ ಟ್ರಾವೆಲರ್ ವಾಹನವನ್ನು ಶ್ರೀರಾಮ ಸೇವಾ ಸಮಿತಿ ಮೂಲಕ ಶಾಲೆಗೆ ಕೊಡುಗೆಯಾಗಿ ನೀಡಿದರು. ವಾಹನ ವ್ಯವಸ್ಥೆ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಶಾಲೆಗೆ ವಾಹನ ವ್ಯವಸ್ಥೆ ಆದ ಬಳಿಕ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಹಳೇ ವಿದ್ಯಾರ್ಥಿ ಸಂಘ, ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ, ಎಸ್​ಡಿಎಂಸಿ ತುಂಬು ಸಹಕಾರ ದಿಂದ ಇದು ಸಾಧ್ಯವಾಗಿದೆ. ಚಾಲಕನನ್ನು ಇಟ್ಟರೆ ಸಂಬಳ ಕೊಡಬೇಕು, ಆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ನಾನೇ ಚಾಲಕನಾಗಿದ್ದೇನೆ.

| ರಾಜಾರಾಮ್ ದೈಹಿಕಶಿಕ್ಷಣ ಶಿಕ್ಷಕ

Leave a Reply

Your email address will not be published. Required fields are marked *

Back To Top