Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಶಸ್ತ್ರಾಸ್ತ್ರ ಆಮದು ಭಾರತ ನಂ. 2

Thursday, 29.12.2016, 4:00 AM       No Comments

ವಾಷಿಂಗ್ಟನ್: ಶಸ್ತ್ರಾಸ್ತ್ರ ಆಮದು ರಾಷ್ಟ್ರಗಳ ಪೈಕಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಖರೀದಿಸಿದ್ದರೂ ದೇಶದ ಆಯಕಟ್ಟಿನ ಪ್ರದೇಶಗಳಲ್ಲಿ ಸೂಕ್ತ ಭದ್ರತೆ ಒದಗಿಸಲು 200-250 ರಫೆಲ್ ಯುದ್ಧ ವಿಮಾನಗಳ ಅವಶ್ಯಕತೆ ಇದೆ. 2008-15ರ ಅವಧಿಯಲ್ಲಿ ಭಾರತ 2.31 ಲಕ್ಷ ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಸಿದೆ. ಇದೇ ಅವಧಿಯಲ್ಲಿ ಸೌದಿ ಅರೇಬಿಯಾ 6.37 ಲಕ್ಷ ಕೋಟಿ ರೂ. ಶಸ್ತ್ರಾಸ್ತ್ರ ಖರೀದಿಸಿ ಮೊದಲ ಸ್ಥಾನದಲ್ಲಿದೆ ಎಂದು ಅಮೆರಿಕ ಮೂಲದ ಕಾಂಗ್ರೆಸ್ಸಿಯನಲ್ ರಿಸರ್ಚ್ ಸರ್ವಿಸ್ (ಸಿಆರ್​ಎಸ್ ) ತಿಳಿಸಿದೆ. ಈ ಮೊದಲು ಭಾರತ ಮಿತ್ರ ರಾಷ್ಟ್ರವಾದ ರಷ್ಯಾದಿಂದ ಮಾತ್ರ ಶಸ್ತ್ರಾಸ್ತ್ರ ಖರೀದಿ ಮಾಡುತ್ತಿತ್ತು. ಆದರೆ 2005ರ ನಂತರ ನಿಲುವನ್ನು ಭಾರತ ಬದಲಾಯಿಸಿಕೊಂಡಿದ್ದು, ಅಮೆರಿಕ, ಫ್ರಾನ್ಸ್ ಮತ್ತಿತರ ದೇಶಗಳಿಂದ ಶಸ್ತ್ರಾಸ್ತ್ರ ಖರೀದಿ ಮಾಡುತ್ತಿದೆ. -ಏಜೆನ್ಸೀಸ್

ಎಷ್ಟೆಷ್ಟು ಖರೀದಿ?

ಭಾರತ 2004ರಲ್ಲಿ ಫಾಲ್ಕೋನ್ ಮುನ್ನೆಚ್ಚರಿಕೆ ವ್ಯವಸ್ಥೆ ವಿಮಾನವನ್ನು ಇಸ್ರೇಲ್​ನಿಂದ ಖರೀದಿಸಿತ್ತು. 2008ರಲ್ಲಿ ಫ್ರಾನ್ಸ್​ನಿಂದ ವಿವಿಧ ಶಸ್ತ್ರಾಸ್ತ್ರಗಳನ್ನು ಹಾಗೂ ಆರು ಸಿ130ಜೆ ಕಾಗೋ ವಿಮಾನವನ್ನು ಅಮೆರಿಕದಿಂದ ಖರೀದಿಸಿತ್ತು. 2010ರಲ್ಲಿ ಇಂಗ್ಲೆಂಡ್ 57 ಹಾಕ್ ಜೆಟ್ ಟ್ರೇನರ್ ಹಾಗೂ ಇಟಲಿ 12 ಎಡಬ್ಲ್ಯು 101 ಹೆಲಿಕಾಪ್ಟರನ್ನು ಭಾರತಕ್ಕೆ ಮಾರಾಟ ಮಾಡಿತ್ತು ಎಂದು ವರದಿ ತಿಳಿಸಿದೆ.

ಯುದ್ಧ ವಿಮಾನಗಳ ಕೊರತೆ

ಹೊಸ 36 ರಫೆಲ್ ಯುದ್ಧ ವಿಮಾನ ಖರೀದಿಗೆ ಸಹಿ ಹಾಕಲಾಗಿದೆಯಾದರೂ ಭಾರತದಲ್ಲಿನ ಆಯಕಟ್ಟಿನ ಪ್ರದೇಶಗಳಲ್ಲಿ ರಕ್ಷಣೆ ನೀಡಲು 200-250 ರಫೆಲ್ ಯುದ್ಧ ವಿಮಾನಗಳ ಅವಶ್ಯಕತೆ ಇದೆ ಎಂದು ವಾಯುಪಡೆಯ ನಿರ್ಗಮಿತ ಮುಖ್ಯಸ್ಥ ಅರುಪ್ ರಹಾ ಹೇಳಿದ್ದಾರೆ. ಇದರ ಜತೆಗೆ ಭಾರತದಲ್ಲಿ 14 ಸಬ್​ವುರಿನ್​ಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 20 ಸಬ್​ವುರಿನ್​ಗಳ ಅವಶ್ಯಕತೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Back To Top