Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಶಶಿಕಲಾ, ದಿನಕರನ್ ವಜಾ

Wednesday, 13.09.2017, 3:06 AM       No Comments

ಚೆನ್ನೆ: ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿ, ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿರುವ ವಿ.ಕೆ. ಶಶಿಕಲಾ ಹಾಗೂ ಅವರ ಸಂಬಂಧಿ ಮತ್ತು ಪಕ್ಷದ ಉಪಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಕೊನೆಗೂ ಪಕ್ಷದ ಉನ್ನತ ಸ್ಥಾನದಿಂದ ಪದಚ್ಯುತಗೊಳಿಸಲಾಗಿದೆ. ಚೆನ್ನೈನ ಹೊರ ವಲಯದ ವನಗರಂನಲ್ಲಿ ಮಂಗಳವಾರ ನಡೆದ ಪಕ್ಷದ ಕೌನ್ಸಿಲ್ ಸಭೆಯಲ್ಲಿ ಸಿಎಂ ಪಳನಿಸಾಮಿ ಹಾಗೂ ಡಿಸಿಎಂ ಪನ್ನೀರಸೆಲ್ವಂ ಬಣದ ಶಾಸಕರು, ಮುಖಂಡರು ಶಶಿಕಲಾ ತಲೆದಂಡಕ್ಕೆ ಒಕ್ಕೊರಲಿನ ನಿರ್ಧಾರ ಕೈಗೊಂಡರು.

ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರನ್ನು ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂದು ಘೊಷಣೆ ಮಾಡಲಾಗಿದ್ದು, ಪಕ್ಷವನ್ನು ಮುನ್ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಪಕ್ಷದ ಹಿರಿಯ ನಾಯಕ ಒ. ಪನ್ನೀರಸೆಲ್ವಂ ಸಮಿತಿಯ ಮುಖ್ಯ ಸಮನ್ವಯಕಾರಾಗಿದ್ದು, ಸಿಎಂ ಪಳನಿಸಾಮಿ ಜಂಟಿ ಸಮನ್ವಯಕಾರರಾಗಿ ಕೆಲಸ ಮಾಡಲಿದ್ದಾರೆ.

 ಸರ್ಕಾರ ಪತನ?

ಶಶಿಕಲಾ ವಜಾ ಬಳಿಕ ಎಐಎಡಿಎಂಕೆಯ ರಾಜಕೀಯ ಲೆಕ್ಕಾಚಾರದಲ್ಲಿ ಭಾರಿ ಬದಲಾವಣೆಯಾಗಿದ್ದು, ಈಗ ವಿಶ್ವಾಸಮತ ಯಾಚನೆ ನಡೆದರೆ ಪಳನಿಸಾಮಿ ಸರ್ಕಾರ ಪತನಹೊಂದುವ ಸಾಧ್ಯತೆಯಿದೆ. 234 ಸದಸ್ಯಬಲದ ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಪ್ರಸ್ತುತ 117 ಶಾಸಕರ ಬೆಂಬಲ ಬೇಕು (ಜಯಲಲಿತಾ ಸ್ಥಾನ ತೆರವಾಗಿದೆ.) ಆದರೆ ಎಐಎಡಿಎಂಕೆಯ 19 ಶಾಸಕರು ಈಗಾಗಲೇ ಕರ್ನಾಟಕದ ಕೊಡಗಿನ ರೆಸಾರ್ಟ್​ನಲ್ಲಿ ತಂಗಿದ್ದಾರೆ. ಆದರೂ 124 ಶಾಸಕರ ಬೆಂಬಲ ತಮಗಿದೆ ಎಂದು ಎಐಎಡಿಎಂಕೆ ಹೇಳಿಕೊಂಡಿದೆ. ವಿರೋಧ ಪಕ್ಷ ಡಿಎಂಕೆ ಮದ್ರಾಸ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿ ಪಳನಿಸಾಮಿಗೆ ಸೂಚನೆ ನೀಡುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.

ಪದಚ್ಯುತಿ ನಿರ್ಣಯಕ್ಕೆ ದಿನಕರನ್ ಕಿಡಿ

ಶಶಿಕಲಾ ಪದಚ್ಯುತಿ ನಿರ್ಣಯಕ್ಕೆ ದಿನಕರನ್ ಕಿಡಿಕಾರಿದ್ದಾರೆ. ಮಂಗಳವಾರ ನಡೆದ ಸಭೆಗೆ ಯಾವುದೇ ಮಾನ್ಯತೆಯಿಲ್ಲ. ತಮ್ಮನ್ನು ಹುದ್ದೆಯಿಂದ ವಜಾಗೊಳಿಸುವ ಅಧಿಕಾರ ಯಾರಿಗೂ ಇಲ್ಲ. ಸರ್ಕಾರ ಶೀಘ್ರದಲ್ಲೇ ಪತನಹೊಂದಲಿದೆ ಎಂದಿದ್ದಾರೆ.

ಎರಡೆಲೆ ಚಿಹ್ನೆ ಕಥೆ ಏನು?

ಶಶಿಕಲಾರನ್ನು ಪಕ್ಷದಿಂದ ವಜಾ ಮಾಡಿರುವ ನಿರ್ಣಯವನ್ನು ಎಐಎಡಿಎಂಕೆ ಮುಖಂಡರು ಒಂದೆರಡು ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ. ಪಕ್ಷದ ‘ಎರಡೆಲೆ‘ ಚಿಹ್ನೆಗಾಗಿ ನಡೆದಿದ್ದ ಕಾನೂನು ಹೋರಾಟಕ್ಕೂ ಸದ್ಯದಲ್ಲೇ ತೆರೆಬೀಳುವ ಸಾಧ್ಯತೆ ಇದೆ. ಈ ಹಿಂದೆ ಪಳನಿಸಾಮಿ, ಪನ್ನೀರ್​ಸೆಲ್ವಂ ಬಣಗಳು ಪಕ್ಷದ ಚಿಹ್ನೆಗಾಗಿ ಕಿತ್ತಾಡಿದ ಕಾರಣ ಚುನಾವಣಾ ಆಯೋಗದ ಎರಡೆಲೆ ಚಿಹ್ನೆ ಮುಟ್ಟುಗೋಲು ಹಾಕಿಕೊಂಡಿತ್ತು. ಹಾಗಿದ್ದರೂ, ಟಿಟಿವಿ ದಿನಕರನ್ ಬಣದ ಅಭಿಪ್ರಾಯಗಳನ್ನೂ ಪರಿಗಣಿ ಸಿಯೇ, ಆಯೋಗ ಅಂತಿಮ ತೀರ್ಮಾನ ಪ್ರಕಟಿಸಬಹುದು ಎನ್ನಲಾಗಿದೆ.

ಮಹತ್ವದ ನಿಲುವಳಿಗಳು

ಡಿ. 30ರಿಂದ ಫೆ. 15ರ ವರೆಗೆ ಶಶಿಕಲಾ ಮತ್ತು ದಿನಕರನ್ ಮಾಡಿದ್ದ ಎಲ್ಲ ನೇಮಕಾತಿ, ಉಚ್ಚಾಟನೆ ಸಹಿತ ಎಲ್ಲ ಆದೇಶಗಳು ರದ್ದು. ?ಪಕ್ಷದ ಸಂವಿಧಾನದ ಪ್ರಕಾರ ಎಲ್ಲ ಅಧಿಕಾರ ಪ್ರಧಾನ ಕಾರ್ಯದರ್ಶಿ ಕೈಯಲ್ಲಿರುತ್ತದೆ. ಈಗ ಜಯಲಲಿತಾರನ್ನು ಶಾಶ್ವತ ಪ್ರಧಾನ ಕಾರ್ಯದರ್ಶಿ ಎಂದು ಆಯ್ಕೆ ಮಾಡಲಾಗಿದೆ. ಹೀಗಾಗಿ ಪಕ್ಷದ ಉನ್ನತ ಅಧಿಕಾರ ಸಮನ್ವಯ ಸಮಿತಿಗೆ ?ಜಯಲಲಿತಾ ನೇಮಕಾತಿ ಮಾಡಿದ್ದ ಪಕ್ಷದ ಪದಾಧಿಕಾರಿಗಳು ಅದೇ ಹುದ್ದೆಯಲ್ಲಿ ಮುಂದುವರಿಕೆ.

Leave a Reply

Your email address will not be published. Required fields are marked *

Back To Top