Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ವೈಶಾಲಿ ಗ್ರಾಂಡ್ ಮಾಸ್ಟರ್

Tuesday, 14.08.2018, 3:04 AM       No Comments

ಚೆನ್ನೈ: ತಮಿಳುನಾಡಿನ ಆರ್. ವೈಶಾಲಿ ಭಾರತದ 12ನೇ ಮಹಿಳಾ ಚೆಸ್ ಗ್ರಾಂಡ್ ಮಾಸ್ಟರ್ ಎನಿಸಿಕೊಂಡಿದ್ದಾರೆ. 17 ವರ್ಷದ ವೈಶಾಲಿ ಲಾಟ್ವಿಯಾದಲ್ಲಿ ಭಾನುವಾರ ಮುಕ್ತಾಯಗೊಂಡ 8ನೇ ರಿಗಾ ಟೆಕ್ನಿಕಲ್ ವಿವಿಯ ಮುಕ್ತ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ವೈಶಾಲಿ ಕಳೆದ ಜೂನ್​ನಲ್ಲಿ ವಿಶ್ವದ 2ನೇ ಕಿರಿಯ ಗ್ರಾಂಡ್ ಮಾಸ್ಟರ್ ಎಂಬ ಹೆಗ್ಗಳಿಕೆ ಪಡೆದಿದ್ದ ಆರ್. ಪ್ರಜ್ಞಾನಂದ ಅವರ ಹಿರಿಯ ಸಹೋದರಿಯಾಗಿದ್ದಾರೆ.

ವೈಶಾಲಿ ಇದೇ ತಿಂಗಳು ಇರಾನ್​ನಲ್ಲಿ ನಡೆದ ಏಷ್ಯನ್ ನೇಷನ್ಸ್ ಕಪ್ ಬ್ಲಿಟ್ಜ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದ ಭಾರತ ತಂಡದಲ್ಲಿದ್ದರು. ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಬ್ಲಿಟ್ಜ್ ಚಾಂಪಿಯನ್​ಷಿಪ್​ನಲ್ಲಿಯೂ ವೈಶಾಲಿ ಗಮನ ಸೆಳೆದಿದ್ದರು. ವೈಶಾಲಿ ಕೂಡ ಪ್ರಜ್ಞಾನಂದನಂತೆ ಪ್ರತಿಭಾವಂತೆ ಮತ್ತು ಕಠಿಣ ಪರಿಶ್ರಮಿ. ಕಳೆದ ಒಂದು ವರ್ಷದಿಂದ ಈಕೆ ಉತ್ತಮ ರೀತಿಯ ಪ್ರಯತ್ನ ಪಡುತ್ತಿದ್ದಾಳೆ. ಈ ಗೆಲುವು ಆಕೆಯ ಆತ್ಮವಿಶ್ವಾಸವನ್ನು ಖಂಡಿತಾ ಹೆಚ್ಚು ಮಾಡಿದ್ದು, ಇದು ಮುಂದಿನ ಗುರಿ ಈಡೇರಿಸಲು ನೆರವಾಗಲಿದೆ ಎಂದು ಕೋಚ್ ಆರ್​ಬಿ ರಮೇಶ್ ಹೇಳಿದ್ದಾರೆ.

12 ವರ್ಷದ ಪ್ರಜ್ಞಾನಂದ ಕಳೆದ ಜೂನ್​ನಲ್ಲಿ ರಷ್ಯಾದ ದಿಗ್ಗಜ ಸೆರ್ಗಿ ಕರ್ಜಾಕಿನ್ ಬಳಿಕ ವಿಶ್ವದ ಅತಿ ಕಿರಿಯ ಗ್ರಾಂಡ್ ಮಾಸ್ಟರ್ ಆಗಿದ್ದರು. ಅವರ ಈ ಸಾಧನೆಯ ಬಳಿಕ 50 ದಿನಗಳಲ್ಲೇ ಅವರ ಸಹೋದರಿ ಕೂಡ ಗ್ರಾಂಡ್ ಮಾಸ್ಟರ್ ಆಗಿರುವುದು ವಿಶೇಷವೆನಿಸಿದೆ.

Leave a Reply

Your email address will not be published. Required fields are marked *

Back To Top