Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ವೈಜಿಗುಡ್ಡ ಸಂತ್ರಸ್ತರಿಗಿಲ್ಲ ನಿವೇಶನ

Wednesday, 11.07.2018, 3:23 AM       No Comments

ಮಾಗಡಿ: ಎತ್ತಿನ ಮನೆ ಗುರಗಂಜಿ ಗುಡ್ಡ ಜಲಾಶಯ ನಿರ್ವಣಕ್ಕಾಗಿ 1990ರಲ್ಲಿ ಮನೆ, ಜಮೀನು ಕಳೆದುಕೊಂಡ ನಾಗಬೋವಿದೊಡ್ಡಿಯ 43 ಕುಟುಂಬಗಳಿಗೆ ನಿವೇಶನ ಇನ್ನೂ ಸಿಕ್ಕಿಲ್ಲ. 28 ವರ್ಷಗಳಿಂದ ನೆತ್ತಿ ಮೇಲೊಂದು ಸೂರು ಹೊಂದಲು ಸಾಧ್ಯವಾಗದೆ ಈ ಕುಟುಂಬಗಳು ಪರದಾಡುತ್ತಿವೆ.

ನಾಗಬೋವಿದೊಡ್ಡಿ, ಕಪನಯ್ಯನದೊಡ್ಡಿ, ಬಾಳೇನಹಳ್ಳಿ, ಮಾನಗಲ್, ಏಳಿಗೆಹಳ್ಳಿ, ಸೊಣ್ಣೇನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳ ನೂರಾರು ಎಕರೆ ಜಮೀನುಗಳನ್ನು ಜಲಾಶಯ ನಿರ್ವಣಕ್ಕಾಗಿ ಸರ್ಕಾರ ವಶಕ್ಕೆ ಪಡೆದು ಮನೆಗೆ 80 ಸಾವಿರ ರೂಪಾಯಿ, ಎಕೆರೆ ಜಮೀನಿಗೆ 25 ಸಾವಿರ ರೂಪಾಯಿಯಂತೆ ಪರಿಹಾರ ನೀಡಿತ್ತು. ಜತೆಗೆ ಬೆಂಗಳೂರಿನ ಸೀಗೆಹಳ್ಳಿ, ಕೆಂಪಸಾಗರ, ಕನಕಪುರ, ಬಿಸ್ಕೂರು, ಕೊಂಡಹಳ್ಳಿಗಳಲ್ಲಿ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಅದರಂತೆ ಈ ಗ್ರಾಮಗಳ ಜನ ಸ್ಥಳಾಂತರಗೊಂಡರು. ನಾಗಬೋವಿದೊಡ್ಡಿ ನಿರಾಶ್ರಿತರಿಗೆ ಸೊಣ್ಣೇನಹಳ್ಳಿಯಲ್ಲಿ 3 ಎಕರೆ ಜಾಗ ಗುರುತಿಸಿ 2010ರಲ್ಲಿ ಕಾಲನಿ ನಿರ್ವಿುಸಲಾಯಿತು. ಆದರೆ ಇಲ್ಲಿಯವರೆಗೂ ಅವರಿಗೆ ಹಕ್ಕುಪತ್ರ ನೀಡಿಲ್ಲ. ಇದರಿಂದಾಗಿ ಕೆಲವರು ಮುಳುಗಡೆಯಾದ ಪ್ರದೇಶದಲ್ಲಿಯೇ ವಾಸ ಮಾಡಬೇಕಾದ ದುಸ್ಥಿತಿ ಎದುರಾಗಿದೆ.

ಭಯದಲ್ಲೇ ಬದುಕು: ಜಲಾಶಯದ ಪಕ್ಕ ನಾಗಬೋವಿದೊಡ್ಡಿ ಇದ್ದು, ಜಲಾಶಯ ತುಂಬಿದಾಗ ಅದರಲ್ಲಿನ ವಿಷ ಜಂತುಗಳು ಮನೆಯೊಳಗೆ ಬರುತ್ತಿವೆ. ಸುತ್ತಮುತ್ತ ಬೆಟ್ಟಗುಡ್ಡ ಇರುವುದರಿಂದ ಚಿರತೆಗಳು ಗ್ರಾಮಕ್ಕೆ ದಾಳಿ ಮಾಡುತ್ತವೆ. ಇದರಿಂದ ಭಯದ ವಾತಾವರಣದಲ್ಲೇ ಕಾಲ ಕಳೆಯುವಂತಾಗಿದೆ ಎಂದು ಗ್ರಾಮದ ಕೃಷ್ಣಪ್ಪ, ರಘು, ನಾರಾಯಣಪ್ಪ, ಹನುಮ, ಸುರೇಶ್, ಮುನಿರಾಜು, ಪುಟ್ಟಸ್ವಾಮಿ ಅಳಲು ತೋಡಿಕೊಂಡಿದ್ದಾರೆ.

ಸಣ್ಣ ನೀರಾವರಿ ಇಲಾಖೆ ವಿಳಂಬ: ನಾಗಬೋವಿದೊಡ್ಡಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡಲು ನಮ್ಮ ಇಲಾಖೆ ಮಾಡಬೇಕಾದ ಕೆಲಸಗಳನ್ನು ಮಾಡಿದೆ. ಆದರೆ ವಿಳಂಬ ಆಗುತ್ತಿರುವುದು ಸಣ್ಣ ನೀರಾವರಿ ಇಲಾಖೆಯಿಂದ. ರಾಜೀವ್ ಗಾಂಧಿ ವಸತಿ ಹೆಸರಿನಲ್ಲಿ ಖಾತೆ ಬರುವಂತೆ ಮಾಡಿದರೆ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಬಹುದು. ಸಣ್ಣ ನೀರವಾರಿ ಇಲಾಖೆ ಸಹಾಯಕ ಇಂಜಿನಿಯರ್ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮಾಗಡಿ ತಾಪಂ ಇಒ ಮುರಡಯ್ಯ ಹೇಳಿದ್ದಾರೆ.

 

Leave a Reply

Your email address will not be published. Required fields are marked *

Back To Top