Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ವೀಳ್ಯದೆಲೆಯ ವಿಶೇಷ ಗುಣಗಳು

Thursday, 07.09.2017, 3:00 AM       No Comments

| ಡಾ. ವೆಂಕಟ್ರಮಣ ಹೆಗಡೆ

ಪುರಾತನ ಕಾಲದಿಂದಲೂ ನಮ್ಮ ಭಾರತೀಯ ಪದ್ಧತಿಯಲ್ಲಿ ವೀಳ್ಯದೆಲೆ ಬಳಸುವ ರೂಢಿ ಇದೆ. ಇದು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ವೀಳ್ಯದೆಲೆಯು ಹೆಚ್ಚು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ಸ್, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಕ್ಯಾಲ್ಶಿಯಂ, ಕೆರೋಟಿನ್, ಥೈಮಿನ್, ರೈಬೋಪ್ಲೇವಿನ್, ನಿಯಾಸಿನ್, ವಿಟಮಿನ್ ‘ಸಿ’ ಜೀವಸತ್ವವನ್ನು ಹೊಂದಿದೆ. ವೀಳ್ಯದೆಲೆಯು ಕ್ಯಾನ್ಸರ್ ಬರದಂತೆ ಕಾಯಲು ಸಹಾಯ ಮಾಡುತ್ತದೆಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಜತೆಗೆ ಟ್ರೖೆವೆಲೆಂಟ್ ಕ್ರೋಮಿಯಂ ಎನ್ನುವ ರಾಸಾಯನಿಕವು ವೀಳ್ಯದೆಲೆಯಲ್ಲಿದ್ದು, ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಜೀರ್ಣಕಾರಿಯಾಗಿ ಕೆಲಸ ಮಾಡುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ಬಾಯಿಯ ದುರ್ಗಂಧ ಕಡಿಮೆ ಮಾಡುತ್ತದೆ. ಹಾಗಾಗಿ ಅಡಕೆ, ಎಲೆ, ಸುಣ್ಣವನ್ನು ಸೇರಿಸಿ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ ಇದರ ಜತೆ ತಂಬಾಕನ್ನು ಸೇರಿಸುವುದು ಕೆಟ್ಟದು. ಇದು ಕ್ಯಾನ್ಸರ್ ಹಾಗೂ ಇನ್ನೂ ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು.

# ನೀರನ್ನು ಬಿಸಿಗಿರಿಸಿ ಅದಕ್ಕೆ 7-8 ಕಾಳುಮೆಣಸು, ಎರಡು ಲವಂಗ, 7-8 ತುಳಸಿ ಎಲೆಗಳು, ವೀಳ್ಯದೆಲೆಯನ್ನು ಚೂರು ಮಾಡಿ ಹಾಕಬೇಕು. ಚೆನ್ನಾಗಿ ಕುದಿದ ನಂತರ – ಇಳಿಸುವ ಮೊದಲು ಒಂದು ಏಲಕ್ಕಿ ಹಾಕಿ, ಸ್ವಲ್ಪ ಕೆಂಪು ಕಲ್ಲುಸಕ್ಕರೆ ಹಾಕಿ ಕಷಾಯ ಸಿದ್ಧಪಡಿಸಬೇಕು. ಈ ಕಷಾಯದ ಸೇವನೆಯು ಶೀತ, ನೆಗಡಿ, ಮೂಗಿನಲ್ಲಿ ನೀರು ಸುರಿಸುವುದು, ಕೆಮ್ಮು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

# ವೀಳ್ಯದೆಲೆ ಹಾಗೂ ತುಳಸಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಇದನ್ನು ಸಣ್ಣ ಬಟ್ಟೆಯಲ್ಲಿ ಹಾಕಿ ಹಿಂಡಿ ರಸ ತೆಗೆದುಕೊಳ್ಳಬೇಕು. ಶುಂಠಿಯನ್ನು ಜಜ್ಜಿ ರಸ ತೆಗೆಯಬೇಕು. ಈ ಎರಡನ್ನೂ ಸೇರಿಸಿ 3-4 ಗಂಟೆಗೊಮ್ಮೆ ಸೇವಿಸುವುದರಿಂದ ಜ್ವರ ಕ್ರಮೇಣ ಕಡಿಮೆಯಾಗುತ್ತದೆ. ಶೇ. 80ರಷ್ಟು ಜ್ವರವು ಸುಲಭ ಮನೆಮದ್ದುಗಳಿಂದಲೇ ಕಡಿಮೆಯಾಗುತ್ತದೆ.

# ವೀಳ್ಯದೆಲೆಯು ವಿಷವನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಇದನ್ನು ಆಂಟಿ-ಡಾಟ್ ಆಗಿ ಉಪಯೋಗಿಸಬಹುದಾಗಿದೆ. ವಿಷಕಾರಿ ಕೀಟ ಕಡಿದಾಗ ವೈದ್ಯರಲ್ಲಿ ತೆರಳುವ ಮೊದಲು ತತ್ಕಾಲದಲ್ಲಿ ವೀಳ್ಯದೆಲೆ ಹಾಗೂ ಕಾಳುಮೆಣಸು ಸೇರಿಸಿ ಸೇವಿಸುವುದು. ಇದರಿಂದ ತಕ್ಷಣ ಬಾವು, ಉರಿ ಕಡಿಮೆಯಾಗಲು ಸಾಧ್ಯವಾಗುತ್ತದೆ. ವೀಳ್ಯದೆಲೆಯನ್ನು ಪೇಸ್ಟ್ ಮಾಡಿ ಅದಕ್ಕೆ ಸೈಂಧವಲವಣ ಸೇರಿಸಿ ಬಿಸಿನೀರಿನಲ್ಲಿ ಕುಡಿಯುತ್ತ ಬಂದರೆ ಊತ ಕಡಿಮೆಯಾಗುತ್ತ ಬರುತ್ತದೆ.

# ಎಳ್ಳೆಣ್ಣೆ ಯನ್ನು ಬಿಸಿಗಿರಿಸಿ ಅದಕ್ಕೆ ಎರಡು ಪಚ್ಚ ಕರ್ಪರ ಹಾಕಬೇಕು. ನಂತರ ವೀಳ್ಯದೆಲೆಯನ್ನು ಎಣ್ಣೆಯಲ್ಲಿ ಅದ್ದಿ ಬೆನ್ನಿನ ಮೇಲೆ, ಶ್ವಾಸಕೋಶ ಇರುವ ಜಾಗದಲ್ಲಿ ಇಟ್ಟರೆ ಅಸ್ತಮಾ, ದಮ್ಮು, ಕಫ, ಕೆಮ್ಮು ಕಡಿಮೆಯಾಗುತ್ತ ಬರುತ್ತದೆ. ಪದೇಪದೆ ಬಿಸಿ ಮಾಡಿ ಹಚ್ಚುವುದು. ಹೃದಯ ಇರುವ ಜಾಗ ಬಿಟ್ಟು ಉಳಿದೆಡೆ ಇದರ ಪ್ರಯೋಗ ಮಾಡುವುದು ವೇಗವಾಗಿ ಪರಿಣಾಮ ಬೀರುತ್ತದೆ.

# ಮೂತ್ರ ಮಾಡುವ ಸಂದರ್ಭದಲ್ಲಿ ತೊಂದರೆಯಾದರೆ ವೀಳ್ಯದೆಲೆಯ ರಸ ಹಾಗೂ ಹಾಲು ಸೇರಿಸಿ ಕುಡಿಯುವುದು. ವೀಳ್ಯದೆಲೆ ರಸ ಹಾಗೂ ಈರುಳ್ಳಿಯ ರಸ ಸೇರಿಸಿ ಚರ್ಮದ ಮೇಲೆ ಹಚ್ಚುವುದರಿಂದ ಮುಖ ಅಥವಾ ಚರ್ಮದ ಯಾವುದೇ ಭಾಗಗಳಲ್ಲಿ ಬಿಳಿ ಕಲೆಗಳಾದರೆ ಕಡಿಮೆಯಾಗುತ್ತದೆ.

# ಧ್ವನಿ ಹಾಳಾದರೆ ವೀಳ್ಯದೆಲೆಗೆ ಗುಲ್ಕನ್ ಸವರಿ ಅದನ್ನು ಜಗಿಯುತ್ತಾ ಬಂದರೆ ಧ್ವನಿ ಸರಿಯಾಗುತ್ತದೆ. ಆದರೆ ಪದೇಪದೆ ಸೇವಿಸುವುದು ಒಳ್ಳೆಯದಲ್ಲ.

# ಜ್ವರ, ಶೀತ, ಕೆಮ್ಮು ಎಲ್ಲ ಬಂದಾಗ ಹೆಚ್ಚು ಬಾಯಾರಿಕೆಯ ಅನುಭವ ಉಂಟಾಗುತ್ತದೆ. ದೇಹವೆಲ್ಲ ಬಹಳ ಉಷ್ಣವೆಂದು ಕೆಲವೊಮ್ಮೆ ಅನ್ನಿಸುತ್ತದೆ. ಅಂತಹ ಸಂದರ್ಭದಲ್ಲಿ ಗುಲಾಬಿದಳ, ವೀಳ್ಯದೆಲೆ ಹಾಗೂ ಸೋಂಪುಕಾಳನ್ನು ಸೇರಿಸಿ ಜಜ್ಜಿ ಸೇವಿಸುವುದರಿಂದ ಬಾಯಾರಿಕೆ ಹೋಗುತ್ತದೆ. ಮಕ್ಕಳಿಗೆ ಈ ಪೇಸ್ಟ್​ಗೆ ನೀರು ಹಾಕಿ ಜ್ಯೂಸ್ ರೀತಿ ಮಾಡಿಕೊಡಬಹುದು. (ಪದೇಪದೆ ಬಾಯಾರಿಕೆ ಅಗುವುದು ಮಧುಮೇಹದ ಲಕ್ಷಣ. ಒಮ್ಮೆ ಪರೀಕ್ಷಿಸಿಕೊಳ್ಳುವುದು ಉತ್ತಮ.) ಕಾಳುಮೆಣಸನ್ನು ವೀಳ್ಯದೆಲೆಯೊಳಗೆ ಹಾಕಿ ಸೇವಿಸುತ್ತ ಬರುವುದರಿಂದ ತೂಕ ಕಡಿಮೆಯಾಗುತ್ತದೆ.

ಕೊನೇ ಹನಿ: 4 ಚಮಚ ಅರಿಶಿಣಪುಡಿ, 2 ಚಮಚ ಅಡುಗೆ ಸೋಡಾ, 2.5 ಚಮಚ ಕೊಬ್ಬರಿ ಎಣ್ಣೆ ಮಿಶ್ರಣ ಮಾಡಿ 2-3 ನಿಮಿಷಗಳ ಕಾಲ ಹಲ್ಲನ್ನು ಉಜ್ಜಿ ನಂತರ ತೊಳೆಯುವುದರಿಂದ ಬಾಯಿಯ ಸಮಸ್ಯೆಗಳು ದೂರವಾಗಿ ಹಲ್ಲು ಹೊಳೆಯುತ್ತದೆ.

Leave a Reply

Your email address will not be published. Required fields are marked *

Back To Top