Friday, 15th December 2017  

Vijayavani

1. ಸನ್ನಿ ನೈಟ್​ಗೆ ವ್ಯಾಪಕ ವಿರೋಧ ಹಿನ್ನೆಲೆ- ಕಾರ್ಯಕ್ರಮ ರದ್ದುಗೊಳಿಸಿದ ರಾಜ್ಯ ಸರ್ಕಾರ- ಸಾವಿರಾರು ಅಭಿಮಾನಿಗಳಿಗೆ ನಿರಾಸೆ 2. ಆಟೋ ಮತ್ತು ಕಾರಿನ ಮೇಲೆ ಟಿಪ್ಪರ್ ಪಲ್ಟಿ- ಸ್ಥಳದಲ್ಲೇ ಮೂವರ ದುರ್ಮರಣ – ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ 3. ಶನಿಮುಖಿ ಸುನೀಲ್​ಗೆ ಸುಪಾರಿ ಕೇಡು- ವಾರದ ಅಚ್ಚರಿಯಲ್ಲಿ ಕ್ರೈಂ ವರದಿ ಕಿಂಗ್ ಲೇಖನ – ಇನ್ನೂ ಬರೆಯೋದು ಇದೆ ಎಂದ ಬೆಳಗೆರೆ 4. ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಟ್ಟು- ಜೆಡಿಎಸ್ ಸಭೆಯಲ್ಲಿ ಮಾರಾಮಾರಿ- ಬಾಗಲಕೋಟೆಯಲ್ಲಿ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು 5. ಗುಜರಾತ್ ವಿಧಾನಸಭೆಯಲ್ಲಿ ಯಾರು ಗೆಲ್ತಾರೆ- ನಾಯಿ ಬೊಗಳುತೈತೆ ಭವಿಷ್ಯ – ವೈರಲ್ ಆಯ್ತು ಬೌಬೌ ವಿಡಿಯೋ
Breaking News :

ವೀರಶೈವ ಲಿಂಗಾಯತ ವಿವಾದಕ್ಕೆ ಮಠಾಧೀಶರು ತೆರೆ ಎಳೆಯಲಿ

Friday, 11.08.2017, 3:00 AM       No Comments

ಮುರಗೋಡ (ಸವದತ್ತಿ): ರಾಜ್ಯದಲ್ಲಿ ಪ್ರಬಲರಾಗಿರುವ ವೀರಶೈವ ಲಿಂಗಾಯತರಲ್ಲಿ ಒಡಕನ್ನುಂಟು ಮಾಡುವ ಕುಟಿಲ ನೀತಿ ವಿರುದ್ಧ ವೀರಶೈವ ಮಠಾಧೀಶರು ಒಂದೆಡೆ ಸೇರಿ ಸಮಗ್ರ ಚರ್ಚೆ ಮೂಲಕ ವಿವಾದಕ್ಕೆ ತೆರೆ ಎಳೆಯಬೇಕಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸ್ವಾಮೀಜಿ ಕರೆ ನೀಡಿದರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡದ ಶ್ರೀ ಮಹಾಂತ ದುರುದುಂಡೇಶ್ವರ ಮಠದಲ್ಲಿ ಗುರುವಾರ ನಡೆದ ಗುರು ವಿರಕ್ತರ ಮಹತ್ವದ ಸಭೆಯಲ್ಲಿ ಮಾತನಾಡಿದರು. ಮಠಮಾನ್ಯಗಳು ಜಾತಿ, ಮತ ಭೇದ ಮರೆತು ಜನರಲ್ಲಿ ಧಾರ್ವಿುಕ, ಶೈಕ್ಷಣಿಕವಾಗಿ ಉತ್ತುಂಗಕ್ಕೇರಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ಮಠಾಧೀಶ ಒಂದಾಗಬೇಕು ಮುರಗೋಡದ ಶ್ರೀ ನೀಲಕಂಠ ಸ್ವಾಮೀಜಿ ಹಾಗೂ ಜ್ಯೋತಿ ಪ್ರಕಾಶ್ ಮಿರ್ಜಿ ಎಂದರು.

ಸವದತ್ತಿಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹರಪ್ಪ ಮತ್ತು ಮೆಹಂಜೋದಾರ ಕಾಲದಿಂದಲೂ ಧರ್ಮ ಆಚರಣೆಯಲ್ಲಿದೆ. ವೀರಶೈವ ಲಿಂಗಾಯತ ಬೇರೆ ಬೇರೆಯಾಗಲು ಸಾಧ್ಯವಿಲ್ಲ ಎಂದರು.

ಯಡಿಯೂರು ರೇಣುಕಾ ಶಿವಾಚಾರ್ಯರು, ಬೀಳಗಿಯ ರಾಚೋಟಿ ಶಿವಾಚಾರ್ಯರು, ಹಾರನಹಳ್ಳಿಯ ಶಿವಯೋಗೀಶ್ವರ ಶಿವಾಚಾರ್ಯರು, ಗೋಡಘೇರಿ ಕಾಶೀನಾಥ ಶ್ರೀಗಳು, ಕೇರಳ ಕುಮಾರಪಟ್ಟಣಂ ಜಗದೀಶ್ವರ ಶ್ರೀಗಳು, ರಾಮದುರ್ಗದ ಶಾಂತವೀರ ಶ್ರೀ, ಕಡಲಬಾಳು ಸೋಮಶಂಕರ ದೇವರು, ನಂದಿಪೂರದ ಮಹೇಶ್ವರ ಸ್ವಾಮೀಜಿ, ಬೈಲಹೊಂಗಲದ ಫ್ರಭು ನೀಲಕಂಠ ಸ್ವಾಮೀಜಿ, ಹಾವೇರಿಯ ಮಲ್ಲಿಕಾರ್ಜುನ ಸ್ವಾಮೀಜಿ, ಕುಂದರಗಿಯ ಅಮರಸಿದೇಶ್ವರ ಸ್ವಾಮೀಜಿ, ಖಾನಾಪುರದ ಸಿದೇಶ್ವರ ಶಿವಾಚಾರ್ಯ, ಮುನವಳ್ಳಿ ಮುರುಘರಾಜೇಂದ್ರ ಸ್ವಾಮೀಜಿ, ಬೆಂಡವಾಡದ ಗುರುಸಿದ್ದ ಸ್ವಾಮೀಜಿ, ಸಿಂಧನೂರು ಸೋಮನಾಥ ಶಿವಾಚಾರ್ಯರು, ಜಮಖಂಡಿಯ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಭೂತರಾಮನಹಟ್ಟಿ ಮುಕ್ತಿಮಠದ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯರು, ಆಂಧ್ರಪ್ರದೇಶ ಆದವಾನಿ ಮಠದ ಮರಿರಾಚೋಟಿ ಸ್ವಾಮೀಜಿ, ಲೋಕಾಪುರದ ಚಂದ್ರಶೇಖರ ಸ್ವಾಮೀಜಿ, ಚಿಕ್ಕೋಡಿಯ ಸಂಪಾದನ ಸ್ವಾಮೀಜಿ, ಹೊಸಳ್ಳಿಯ ಬೂದೇಶ್ವರ ಸ್ವಾಮೀಜಿ, ಬಳ್ಳಾರಿಯ ಅಭಿನವ ಸಿದ್ದಲಿಂಗ ಸ್ವಾಮೀಜಿ ಸೇರಿ ರಾಜ್ಯದ ವಿವಿಧ ಮಠಗಳ 100ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

 ಐದು ಪ್ರಮುಖ ನಿರ್ಣಯಗಳು

  •  ವೀರಶೈವ, ಲಿಂಗಾಯತ ಆಚಾರ ವಿಚಾರಗಳಲ್ಲಿ ಭೇದವಿಲ್ಲದಿರುವುದರಿಂದ ಎರಡೂ ಒಂದೇ.
  • ಗೊಂದಲ ನಿವಾರಣೆ ಮಾಡಲು ಎಲ್ಲ ಗುರು ವಿರಕ್ತ ಪರಂಪರೆಯ ಮಠಾಧೀಶರು ಸಮುದಾಯದಲ್ಲಿ ಏಕತೆ ಮೂಡಿಸಿ ಸಂಘಟಿಸುವುದು.
  • 1904ರಲ್ಲಿ ಹಾನಗಲ್ ಕುಮಾರ ಶ್ರೀಗಳು ಸ್ಥಾಪಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಮೂಲ ಆಶಯಗಳನ್ನು ಕಾರ್ಯಗತಗೊಳಿ ಸುವಲ್ಲಿ ಮಠಾಧೀಶರು ಸಂಘಟಿತ ಪ್ರಯತ್ನ ಮಾಡಬೇಕು.
  • ಪ್ರತಿ ವರ್ಷ ಸಮುದಾಯದ ಸಂಘಟನೆ ಮತ್ತು ಮಾರ್ಗದರ್ಶನ ಮಾಡುವುದಕ್ಕೆ ಗುರು ವಿರಕ್ತ ಮಠಾಧೀಶರ ಸಮಾವೇಶ ಹಮ್ಮಿಕೊಳ್ಳಬೇಕು.
  • ಸರ್ಕಾರ ವೀರಶೈವ ಲಿಂಗಾಯತ ಸಮುದಾಯಕ್ಕೆ ಒಳಿತು ಮಾಡುವ ಉದ್ದೇಶವಿದ್ದರೆ. ಲಿಂಗಾಯತ ವೀರಶೈವ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು.

 


ನನ್ನ ತಲೆಗೆ ಕಟ್ಟುತ್ತಿದ್ದಾರೆ

ಚಾಮರಾಜನಗರ: ವೀರಶೈವ- ಲಿಂಗಾಯತ ಧರ್ಮವನ್ನು ಪ್ರತ್ಯೇಕ ಮಾಡಬೇಕೆನ್ನುವ ವಿಚಾರವನ್ನು ನಾನು ಹುಟ್ಟು ಹಾಕಿಲ್ಲ. ಈ ಬಗ್ಗೆ ಗೊಂದಲ ಎಬ್ಬಿಸಿ, ಈಗ ಅದನ್ನು ನನ್ನ ತಲೆಗೆ ಕಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ತಾಲೂಕಿನ ಆಲೂರು ಬಳಿಯ ಹೆಲಿಪ್ಯಾಡ್​ನಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ನನ್ನನ್ನು ಸನ್ಮಾನಿಸುವ ವೇಳೆ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಬೇಕು ಎಂದು ಮಹಾಸಭಾದ ಶಾಮನೂರು ಶಿವಶಂಕರಪ್ಪ ಕೂಡ ಮನವಿ ಸಲ್ಲಿಸಿದ್ದರು. ಅಲ್ಲದೆ ಮಾತೆ ಮಹಾದೇವಿ ಪತ್ರ ಬರೆದು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಕೋರಿದ್ದರು ಎಂದರು. ಎಲ್ಲರೂ ಒಗ್ಗೂಡಿ ಬನ್ನಿ ಈ ಬಗ್ಗೆ ರ್ಚಚಿಸಿ ಕ್ರಮ ಕೈಗೊಳ್ಳುವೆ ಎಂದು ಹೇಳಿದ್ದೆ. ನನಗೂ ಆ ವಿಚಾರಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

Back To Top