Monday, 11th December 2017  

Vijayavani

1. ಜಮ್ಮುವಿನಲ್ಲಿ ಗುಂಡಿನ ಚಕಮಕಿ- ಯೋಧರ ಗುಂಡೇಟಿಗೆ ಮೂವರು ಉಗ್ರರು ಮಟಾಶ್​​​- ಒಬ್ಬ ಜೀವಂತವಾಗಿ ಸೆರೆ, ವಿಚಾರಣೆ 2. ರವಿ ಬೆಳಗೆರೆ ಕಸ್ಟಡಿ ಅವಧಿ ಇಂದಿಗೆ ಅಂತ್ಯ- ಮಧ್ಯಾಹ್ನ ನ್ಯಾಯಾಲಯಕ್ಕೆ ಪತ್ರಕರ್ತ ಹಾಜರು- ಜಾಮೀನು ಕೊಡ್ತಾರಾ ನ್ಯಾಯಾಧೀಶರು..? 3. ಮಕ್ಕಳ ಮೊಟ್ಟೆ ಗುತ್ತಿಗೆದಾರರ ಹೊಟ್ಟೆಗೆ- ಕೊಪ್ಪಳದಲ್ಲಿ ನಡೆದಿದೆ ಮೊಟ್ಟೆ ಗೋಲ್​​ಮಾಲ್​- ಡಿಸಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತಕ್ಕೆ ದೂರು 4. ಸರ್ಕಾರಿ ಜಾಗದ ಮೇಲೆ ಬಿಲ್ಡರ್​ ಕಣ್ಣು- ರಾತ್ರೋರಾತ್ರೊ ಮನೆ ಖಾಲಿಗೆ ಆವಾಜ್​​- ಹುಬ್ಬಳ್ಳಿಯಲ್ಲಿ ದಯಾಮರಣಕ್ಕೆ 12 ಕುಟುಂಬದಿಂದ ಅರ್ಜಿ 5. ಗುತ್ತಿಗೆದಾರರ ಬಳಿ ಸರ್ಕಾರಿ ಫೈಲ್​​​​​ ಪ್ರಕರಣ- ಸ್ಪಷ್ಟನೆ ಕೋರಿ ಎಇಇಗೆ ನೋಟಿಸ್​​​- ಇದು ದಿಗ್ವಿಜಯ ನ್ಯೂಸ್​​ ಬಿಗ್​​ ಇಂಪ್ಯಾಕ್ಟ್​​​​
Breaking News :

ವೀರಭದ್ರಾಸನದಿಂದ ಕ್ರೀಡಾಳಿಗೆ ಬಲ

Thursday, 14.09.2017, 3:00 AM       No Comments

ದೂರದ ಓಟದ ಸ್ಪರ್ಧಿಗಳು ಹಾಗೂ ಈಜುಗಾರರಿಗೆ ವೀರಭದ್ರಾಸನದ ನಾಲ್ಕನೇ ಪ್ರಕಾರ ಅತ್ಯಂತ ಬಲದಾಯಕ. ಇದು ವೀರಭದ್ರಾಸನದ ವ್ಯತ್ಯಸ್ತ ಭಂಗಿ.

ವಿಧಾನ: ಉಸಿರು ತೆಗೆದುಕೊಳ್ಳುತ್ತ ಬಲಗಾಲನ್ನು ಒಂದೂವರೆ ಕಾಲುಗಳಷ್ಟು ಅಂತರದಲ್ಲಿ ಬಲಕ್ಕೆ ಚಾಚಿ. ಉಸಿರು ಬಿಡುತ್ತ ಬಲಪಾದ ಬಲಕ್ಕೆ ಚಾಚಿ. ಸಂಪೂರ್ಣ ಮುಂಡದ ಭಾಗವನ್ನು ಬಲಬದಿಗೆ ತಿರುಚಿ. ಉಸಿರನ್ನು ತೆಗೆದುಕೊಳ್ಳುತ್ತ ಎರಡೂ ಕೈಗಳನ್ನು ಮೇಲಕ್ಕೆತ್ತಿ ಹಸ್ತಗಳನ್ನು ಪರಸ್ಪರ ಸೇರಿಸಿ. ಉಸಿರನ್ನು ಬಿಡುತ್ತ ಬಲಮಂಡಿಯನ್ನು ಸಾಧ್ಯವಾದಷ್ಟು ಮಡಚಿ ಎಡಗಾಲಿನ ಹಿಮ್ಮಡಿಯನ್ನು ಮೇಲಕ್ಕೆತ್ತಿ . ಮುಂಡಭಾಗವನ್ನು ಮುಂಬಾಗಿಸಿ, ತೋಳುಗಳೆರಡನ್ನೂ ಮುಂದಕ್ಕೆ ಚಾಚಿ. ಎಡಗಾಲನ್ನು ನೆಲದಿಂದ ಮೇಲೆತ್ತಿ ತೋಳುಗಳ ಮಟ್ಟಕ್ಕೆ ತಂದು, ಬಲಗಾಲನ್ನು ಪೂರ್ಣ ಬಿಗಿಗೊಳಿಸಿ, ನೆಲಕ್ಕೆ ಲಂಬವಾಗುವಂತೆ ಊರಬೇಕು. ಬಳಿಕ ಮೇಲಕ್ಕೆ ಚಾಚಿದ ಎಡಗಾಲನ್ನು ಮಂಡಿಯಲ್ಲಿ ಬಾಗಿಸಿ ತಲೆಯ ಬದಿಗೆ ತಂದು ಎದುರು ಚಾಚಿದ ಎಡಹಸ್ತವನ್ನು ಹಿಂದೆ ಕೊಂಡೊಯ್ದು ಎಡಗಾಲ ಅಂಗುಷ್ಟವನ್ನು ಗಟ್ಟಿಯಾಗಿ ಹಿಡಿಯಿರಿ. ದೃಷ್ಟಿ ನೇರವಾಗಿರಲಿ. ಐದರಿಂದ ಹತ್ತು ಬಾರಿ ಉಸಿರಾಡಿ. ಉಸಿರು ಬಿಡುತ್ತ ಬಲಗೈಯನ್ನು ಸಡಿಲಿಸಿ ಎಡಪಾದವನ್ನು ಈಗಾಗಲೇ ಹೇಳಿರುವಂತೆ ನೆಲದ ಮೇಲಿರಿಸಿದ ಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ಎಡಬದಿಯಿಂದಲೂ ಈ ಆಸನಾಭ್ಯಾಸವನ್ನು ಮುಂದುವರಿಸಿ ಕೊನೆಯಲ್ಲಿ ಉಸಿರು ಬಿಡುತ್ತ ಬಲಗಾಲನ್ನು ಎಡಗಾಲಿಗೆ ಸೇರಿಸಿ.

ಪ್ರಯೋಜನ: ಕಿಬ್ಬೊಟ್ಟೆಯೊಳಗಿನ ಅಂಗಗಳಿಗೆ ಹೆಚ್ಚಿನ ಹುರುಪು ನೀಡುತ್ತದೆ. ಬೆನ್ನು ಮೂಳೆಯನ್ನೂ ಸ್ವಸ್ಥ ಸ್ಥಿತಿಯಲ್ಲಿಡುತ್ತದೆ. ನಾಳೆ ನೋಡಿ: ಏಕಪಾದ ಉತ್ಥಿತ ಪಶ್ಚಿಮೋತ್ಥಾನಾಸನ

Leave a Reply

Your email address will not be published. Required fields are marked *

Back To Top