Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ವಿಸಾರಣೈ ರಿಮೇಕ್​ನಲ್ಲಿ ಪುನೀತ್ ನಟಿಸಲ್ಲ

Monday, 17.07.2017, 3:03 AM       No Comments

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ವಿಸಾರಣೈ’ನ ಕನ್ನಡ ರಿಮೇಕ್​ಹಕ್ಕುಗಳನ್ನು ರಾಕ್​ಲೈನ್ ವೆಂಕಟೇಶ್ ಪಡೆದುಕೊಂಡಿದ್ದಾರೆ ಎಂಬ ವಿಷಯ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಜತೆ ವೆಟ್ರಿಮಾರನ್ ಹಾಗೂ ರಾಕ್​ಲೈನ್ ಮಾತುಕತೆಗೆ ತೊಡಗಿಕೊಂಡಿದ್ದನ್ನು ಕಂಡು, ಮೂವರೂ ಸೇರಿ ‘ವಿಸಾರಣೈ’ ಕನ್ನಡ ರಿಮೇಕ್ ಮಾಡುತ್ತಿದ್ದಾರೆಂದೇ ಹೇಳಲಾಗಿತ್ತು. ಆದರೆ ಅದು ನಿಜವಲ್ಲ ಎಂಬುದು ಈಗ ಖಚಿತವಾಗಿದೆ. ವೆಟ್ರಿಮಾರನ್, ಪುನೀತ್ ಮತ್ತು ರಾಕ್​ಲೈನ್ ಕಾಂಬಿನೇಷನ್​ನಲ್ಲಿ ಬರುತ್ತಿರುವುದು ‘ವಿಸಾರಣೈ’ ಕನ್ನಡ ರಿಮೇಕ್ ಅಲ್ಲವೇ ಅಲ್ಲ ಎಂದು ಖುದ್ದು ವೆಂಕಟೇಶ್ ಅವರೇ ಸ್ಪಷ್ಟಪಡಿಸಿದ್ದಾರೆ.

ನಿರ್ದೇಶಕ ವೆಟ್ರಿಮಾರನ್ ಹಾಗೂ ಪುನೀತ್ ಕಾಂಬಿನೇಷನ್​ನಲ್ಲಿ ರಾಕ್​ಲೈನ್ ನಿರ್ವಿುಸಲು ಹೊರಟಿರುವುದು ಬೇರೆಯದೇ ಸಿನಿಮಾ. ಭರ್ಜರಿ ಬಜೆಟ್​ನಲ್ಲಿ ನಿರ್ವಣವಾಗುತ್ತಿರುವ ಈ ಚಿತ್ರಕ್ಕೂ ‘ವಿಸಾರಣೈ’ಗೂ ಯಾವುದೇ ಸಂಬಂಧ ಇರುವುದಿಲ್ಲವಂತೆ. ‘ವೆಟ್ರಿಮಾರನ್ ಅವರ ಬಳಿ ಅತ್ಯುತ್ತಮವಾದ ಒಂದು ಕಥೆ ಇತ್ತು. ಅದನ್ನು ಅವರು ಪುನೀತ್ ಜತೆಗೆ ಹಂಚಿಕೊಂಡಿದ್ದರು. ಕಥೆ ಕೇಳಿ ಇಷ್ಟಪಟ್ಟ ಪುನೀತ್, ‘ಸಿನಿಮಾ ಮಾಡೋಣ್ವಾ?’ ಎಂದು ಕೇಳಿದ್ದರು. ನಾನು ‘ಓಕೆ’ ಎಂದು ನಿರ್ವಣಕ್ಕೆ ಮುಂದಾಗಿದ್ದೇನೆ’ ಎಂದು ಮೊನ್ನೆಮೊನ್ನೆಯಷ್ಟೇ ನಡೆದ ಮಾತುಕತೆ ಬಗ್ಗೆ ರಾಕ್​ಲೈನ್ ಹೇಳಿದ್ದಾರೆ.

‘ಇದೊಂದು ವಿಭಿನ್ನ ಸಿನಿಮಾ. ಇನ್ನೂ ಸ್ಕ್ರಿಪ್ಟ್ ಹಂತದಲ್ಲಿದೆ. ಸದ್ಯ ಪುನೀತ್ ಅವರಷ್ಟೇ ಪಕ್ಕಾ ಆಗಿದ್ದು ಉಳಿದ ತಾರಾಗಣದ ಆಯ್ಕೆ ಆಗಬೇಕಿದೆ. ಎಲ್ಲ ತಯಾರಿ ಪೂರ್ಣವಾಗುತ್ತಿದ್ದಂತೆ ಚಿತ್ರೀಕರಣ ಆರಂಭಿಸಲಾಗುವುದು’ ಎಂದು ವಿವರಿಸುವ ನಿರ್ವಪಕರು, ಚಿತ್ರದ ಬಗ್ಗೆ ಹೆಚ್ಚಿನ ವಿವರ ಬಿಟ್ಟುಕೊಡಲು ನಿರಾಕರಿಸುತ್ತಾರೆ.

ವಿಸಾರಣೈ ಕಥೆ ಪುನೀತ್​ಗೆ ಸೂಕ್ತ ಎನಿಸುವಂಥದ್ದಲ್ಲ. ಆ ಚಿತ್ರದ ಹಕ್ಕು ಇನ್ನೂ ನನ್ನ ಬಳಿಯೇ ಇದೆ. ಪುನೀತ್ ಅಭಿನಯದ ಈ ಚಿತ್ರ ಮುಗಿದ ಮೇಲೆ ಹೊಸಬರನ್ನು ಹಾಕಿಕೊಂಡು ‘ವಿಸಾರಣೈ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುವುದು.

| ರಾಕ್​ಲೈನ್ ವೆಂಕಟೇಶ್ ನಿರ್ಮಾಪಕ

Leave a Reply

Your email address will not be published. Required fields are marked *

Back To Top