Wednesday, 20th June 2018  

Vijayavani

ಗಂಗಾಧರ ಚಡಚಣ ಹತ್ಯೆ ಪ್ರಕರಣ- 10 ದಿನ ರಜೆ ಮೇಲೆ ತೆರಳಿದ ಅಲೋಕ್​ಕುಮಾರ್ - ರಾಜಕೀಯ ಒತ್ತಡ ತಪ್ಪಿಸಿಕೊಳ್ಳಲು ಐಜಿಪಿ ಅಧಿಕಾರಿ ರಜೆ        ಸಿಎಂ ಎಚ್​ಡಿಕೆ ರಾಜೀನಾಮೆ ಯಾವಾಗ..?- ಸಿಎಂಗೆ ಅವಮಾನಿಸಿದ ಹುಬ್ಬಳ್ಳಿ ಪೇದೆ ಅರುಣ್ ಸಸ್ಪೆಂಡ್ - ಹುಬ್ಬಳ್ಳಿ-ಧಾರವಾಡ ಕಮಿಷನರ್ ಆದೇಶ        ರಾಜ್ಯ ಕಾಂಗ್ರೆಸ್​​ಗೆ ಮತ್ತೊಂದು ಶಾಕ್ - ಬಿಬಿಎಂಪಿ ಮೇಯರ್​​ಗಿರಿ ಮೇಲೆ ಜೆಡಿಎಸ್ ಕಣ್ಣು- ಹೇಮಲತಾ ಗೋಪಾಲಯ್ಯಗೆ ಸಿಗುತ್ತಾ ‘ಬೃಹತ್’ ಪಟ್ಟ..?        ಐದಲ್ಲ, ಎಂಟು ಬಾಲಕರು ಮಿಸ್ಸಿಂಗ್​ - ಟ್ಯೂಷನ್​​ಗೆ ತೆರಳಿದ್ದ ಮಕ್ಕಳು ಮನೆಗೆ ಬರಲೇ ಇಲ್ಲ - ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಬಳಿ ಪೋಷಕರ ಕಣ್ಣೀರು        ಜುಮ್ಮಾ ಮಸೀದಿ ಜಾಗದಲ್ಲೇ ಹನುಮ ಮಂದಿರ - ಟಿಪ್ಪು ಕಾಲದ ರಹಸ್ಯ ಅನಾವರಣ - ಶ್ರೀರಂಗಪಟ್ಟಣದಲ್ಲಿ ವಿವಾದಿತ ಮಸೀದಿ        ಮಂಗಳೂರಲ್ಲಿ ಅತಿ ವೇಗ ತಂದ ಆಪತ್ತು - ಕಾರ್​​ಗೆ ಡಿಕ್ಕಿಯೊಡೆದು ಬೈಕ್ ಸವಾರ ಪಲ್ಟಿ - ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ       
Breaking News

ವಿಶ್ವ ಲಿಂಗಾಯತ ಪರಿಷತ್ ರಚನೆ

Sunday, 14.01.2018, 2:59 AM       No Comments

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಇದೀಗ ಶತಮಾನದ ಇತಿಹಾಸ ಹೊಂದಿರುವ ವೀರಶೈವ ಮಹಾಸಭಾಗೆ ಸೆಡ್ಡು ಹೊಡೆದು ‘ವಿಶ್ವ ಲಿಂಗಾಯತ ಪರಿಷತ್’ ಸ್ಥಾಪನೆಯಾಗುವತ್ತ ಸಾಗಿದೆ. ಜನವರಿ 23ರಂದು ರಾಜಧಾನಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾಜದ ರಾಜಕಾರಣಿಗಳು, ಸ್ವಾಮೀಜಿಗಳು ವೃತ್ತಿಪರರ ಸಮ್ಮುಖದಲ್ಲಿ ಹೊಸ ಸಂಘಟನೆಯ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ನಿವೃತ್ತ ಅಧಿಕಾರಿ ಮತ್ತು ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಸಂಚಾಲಕ ಎಸ್.ಎನ್. ಜಾಮದಾರ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಜಾಮದಾರ್, ‘113 ವರ್ಷಗಳಿಂದ ಅಸ್ತಿತ್ವದಲ್ಲಿರುವ ವೀರಶೈವ ಮಹಾಸಭೆ ಸಹಯೋಗದೊಂದಿಗೆ ಸೇರಿ ಪ್ರತ್ಯೇಕ ಧರ್ಮಕ್ಕೆ ಎಂಟು ತಿಂಗಳಿಂದ ಪ್ರಯತ್ನಿಸಲಾಯಿತು.

ಮೂರ್ನಾಲ್ಕು ಸಭೆ ಆಯಿತು. ಆದರೆ, ಭಿನ್ನ ಅಭಿಪ್ರಾಯಗಳು ಪರಿಹಾರವಾಗಲಿಲ್ಲ. ಪರಹಾರವಾಗುವ ಲಕ್ಷಣವೂ ಇಲ್ಲ. ಈ ಕಾರಣಕ್ಕೆ ನಮ್ಮದೇ ವಿಶ್ವ ಲಿಂಗಾಯತ ಪರಿಷತ್ ರಚನೆ ಮಾಡುವ ಘೋಷಣೆ ಮಾಡುತ್ತಿದ್ದೇವೆ’ ಎಂದು ಅವರು ತಿಳಿಸಿದರು.

‘ಹೊಸ ಸಂಘಟನೆಗೆ ತಕ್ಷಣದಿಂದ ಸದಸ್ಯರ ನೋಂದಣಿಗೆ ಆಂದೋಲನ ಮಾಡುತ್ತೇವೆ. ಕಾನೂನಿನ ಪ್ರಕಾರ ರೂಪುರೇಷೆಯ ಕರಡು ಪತ್ರ ಸಿದ್ಧವಾಗಿದ್ದು, ಅಂತಿಮಗೊಳಿಸಲು ಜ.23ರಂದು ಮಹತ್ವದ ಸಭೆ ಕರೆಯಲಾಗಿದೆ. ಆ ಸಭೆಯಿಂದಲೇ ಸದಸ್ಯತ್ವ ಅಭಿಯಾನ ಆರಂಭಿಸುತ್ತೇವೆ’ ಎಂದು ಹೇಳಿದರು.

ಪ್ರತಿಕ್ರಿಯೆ ನೀಡಲ್ಲ…

ವೀರಶೈವ ಮಹಾಸಭಾ ಹೆಸರನ್ನು ಪರಿಷ್ಕರಿಸಿ ವೀರಶೈವ ಲಿಂಗಾಯತ ಮಹಾಸಭಾ ಎಂದು ಬದಲಿಸಲಿದರೆ ನಾವೇನೂ ಪ್ರತಿಕ್ರಿಯೆ ನೀಡಲ್ಲ. ನಮ್ಮ ದಾರಿ ನಾವು ಕಂಡುಕೊಳ್ಳುತ್ತಿದ್ದೇವೆ. ಹಾಗೆಯೇ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದು ಜಾಮದಾರ್ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

Back To Top