Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ವಿಶ್ವ ನಾಯಕರಿಗೆ ಭಗವಾನ್ ಬಾಹುಬಲಿ ಆದರ್ಶವಾಗಲಿ

Monday, 02.10.2017, 3:36 AM       No Comments

ಶ್ರವಣಬೆಳಗೊಳ: ಅಣುಬಾಂಬ್ ಸ್ಪೋಟಿಸಿ ಕೊಲ್ಲುವ ಕುರಿತು ಮಾತಾಡುವ ವಿಶ್ವ ನಾಯಕರು ಯುದ್ಧದಲ್ಲಿ ಗೆದ್ದರೂ ಎಲ್ಲವನ್ನು ತ್ಯಾಗ ಮಾಡಿದ ಶಾಂತಿಧೂತ ಭಗವಾನ್ ಬಾಹುಬಲಿಯನ್ನು ಅನುಸರಿಸಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

ಶ್ರವಣಬೆಳಗೊಳದಲ್ಲಿ ಭಾನುವಾರ ಆರಂಭವಾದ 5 ದಿನಗಳ ರಾಷ್ಟ್ರಮಟ್ಟದ ಜೈನ ವಿದ್ವತ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಉತ್ತರ ಕೊರಿಯಾ, ಅಮೆರಿಕ ನಾಯಕರು ಧ್ವಂಸ ವಾದದ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ವಿಶ್ವ ನಾಯಕರು ಯುದ್ಧ ಮಾಡಲು ಹೊರಟಿದ್ದಾರೆ. ಅಣು ಬಾಂಬ್ ಪ್ರಯೋಗಿಸಿ ತಮ್ಮನ್ನು ತಾವೇ ನಾಶ ಮಾಡಿಕೊಳ್ಳುವ ಮಾತನಾಡುವುದನ್ನು ನೋಡಿದಾಗ ವ್ಯಥೆಯಾಗುತ್ತದೆ. ಇದು ಕೇವಲ ನಾಯಕತ್ವಕ್ಕಾಗಿನ ಹೋರಾಟ ಎಂದು ಟೀಕಿಸಿದರು.

ಸಮ್ಮೇಳನಾಧ್ಯಕ್ಷ ಡಾ. ಶ್ರೇಯಾಂಸ ಕುಮಾರ್ ಜೈನ್ ಮಾತನಾಡಿ, ಜೀವನದ ಯಶಸ್ಸಿಗೆ ಜ್ಞಾನ ಪ್ರಧಾನ ಸೂತ್ರವಾಗಿದೆ. ಜ್ಞಾನದಿಂದ ಸ್ವಂತ ಸಮಸ್ಯೆ ನಿವಾರಣೆ ಮಾಡುವುದಲ್ಲದೆ ಇತರರ ಸಮಸ್ಯೆಯನ್ನೂ ಪರಿಹರಿಸಬಹುದು ಎಂದರು.

ಪ್ರಾಚೀನ ಪರಂಪರೆಯ ಗುರುಕುಲವನ್ನು ಮರುಪ್ರತಿಷ್ಠಾಪಿಸಬೇಕು. ಈ ಗುರುಕುಲಗಳಲ್ಲಿ ಪ್ರಾಚೀನ ಸಂಸ್ಕೃತಿಯ ಶಿಕ್ಷಣದ ಜತೆಗೆ ಆಧುನಿಕ ಶಿಕ್ಷಣ ನೀಡಬೇಕು. ಜೈನ ಸಿದ್ಧಾಂತದ ಗ್ರಂಥಗಳನ್ನು ಭಾರತೀಯ ಭಾಷೆಗಳಿಗೆ ಅನುವಾದ ಮಾಡಿ ಪ್ರಕಾಶನಗೊಳಿಸಲು ಸಂಸ್ಥೆಯೊಂದನ್ನು ಸ್ಥಾಪಿಸಬೇಕು. ವಿದೇಶಿ ಭಾಷೆಗಳಲ್ಲೂ ಜೈನಗ್ರಂಥಗಳನ್ನು ಅನುವಾದಿಸಿ ಮುದ್ರಿಸಬೇಕು. ಜೈನ ಶಿಕ್ಷಣ ಪದ್ಧತಿಯ ಜೈನ ಸಾಹಿತ್ಯ ಪ್ರಕಾಶನಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರ ಅನುದಾನ ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕ್ಷೇತ್ರದ ಚಾರುಕೀರ್ತಿಭಟ್ಟಾರಕ ಸ್ವಾಮೀಜಿ, ಸಾಹಿತಿ ಡಾ. ಕಮಲಾ ಹಂಪನಾ, ಮುಂಬೈ ಹೈಕೋರ್ಟ್​ನ ನಿವೃತ್ತ ನ್ಯಾಯಾಧೀಶ ಬಾಲಚಂದ್ರ ವಗ್ಯಾನಿ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ, ವಿಧಾನಪಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮಹಾಮಸ್ತಕಾಭಿಷೇಕ ಮಹೋತ್ಸವದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷೆ ಸರಿತಾ ಎಂ.ಕೆ. ಜೈನ್, ಕಾರ್ಯಾಧ್ಯಕ್ಷ ಎಸ್. ಜಿತೇಂದ್ರಕುಮಾರ್, ಆರ್.ಕೆ. ಜೈನ್ ಇದ್ದರು. ಅಧ್ಯಕ್ಷತೆ ವಹಿಸಿದ್ದ ಅಶೋಕ್ ಜೈನ್ ಬಡಜಾತ್ಯಾ ಸ್ವಾಗತಿಸಿದರು. 5 ದಿನ ನಡೆಯುವ ಸಮ್ಮೇಳನದಲ್ಲಿ 400 ವಿದ್ವಾಂಸರು ಭಾಗವಹಿಸಿದ್ದಾರೆ. 150 ಪ್ರಬಂಧಗಳು ಮಂಡನೆಯಾಗಲಿವೆ.

Leave a Reply

Your email address will not be published. Required fields are marked *

Back To Top