Thursday, 24th August 2017  

Vijayavani

1. ಹಾವೇರಿಯಲ್ಲಿ ಇಂಜೆಕ್ಷನ್‌ ಬಳಿಕ ರೋಗಿ ಸಾವು- ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ- ಸಾವಿನ ಇಂಜೆಕ್ಷನ್‌ ಅಂತಾ ಆರೋಪ 2. ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣ- ಗಣಪತಿ ಆತ್ಮಹತ್ಯೆ ವೇಳೆ ನನಗೆ ಯಾವುದೇ ಕರೆ ಬಂದಿಲ್ಲ- ಕಾಲ್‌ಡಿಟೆಲ್ಸ್‌ ಡಿಲೀಟ್‌ ಬಗ್ಗೆ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ 3. ಕೋಲಾರದಲ್ಲಿ ಮಕ್ಕಳ ಸಾವು ಪ್ರಕರಣ- ಆಸ್ಪತ್ರೆಗೆ ಬಿಜೆಪಿ ಸತ್ಯ ಶೋಧನ ಸಮಿತಿ ಭೇಟಿ- ಜಿಲ್ಲೆಗೆ ಇದು ಶೋಭೆಯಲ್ಲ ಎಂದ ಮಾಜಿ ಸಚಿವ ಸುರೇಶ್​ ಕುಮಾರ್​​​ 4. ಮತ್ತೆ ಒಂದಾದ ಸುದೀಪ್​​​​ ದಂಪತಿ- ಪ್ರಿಯಾ-ಸುದೀಪ್​​​​​​​​​​​​​​​​​​​​​ಗೆ ಕಲಾವಿದರ ಶುಭಾಶಯ- ನೂರ್ಕಾಲ ಬಾಳಲಿ ಎಂದ ಜಗ್ಗೇಶ್​​​​​​​ 5. ಬಿಡುಗಡೆಯಾಯ್ತು 200ರ ಹೊಸ ನೋಟು- ನಾಳೆಯಿಂದಲೇ ಬ್ಯಾಂಕ್​​​​​​​​​​​​​​​​​​​​​​​​​​​​​​​​​​ಗಳಿಗೆ ಪೂರೈಕೆ- ಆರ್​​​​​​​ಬಿಐನಿಂದ ಪ್ರಕಟಣೆ
Breaking News :

ವಿಶ್ವದಾಖಲೆಗೆ ಇಸ್ರೋ ಸಜ್ಜು

Monday, 13.02.2017, 4:02 AM       No Comments

ಬೆಂಗಳೂರು: ಕಳೆದ ವರ್ಷ ವಿವಿಧ ಮಾದರಿಯ ಉಪಗ್ರಹ ಉಡಾವಣೆ ಮಾಡಿ ವಿಶ್ವದ ಗಮನ ಸೆಳೆದಿದ್ದ ಇಸ್ರೋ ಫೆಬ್ರವರಿ 15ರಂದು ಏಕಕಾಲದಲ್ಲಿ 104 ಉಪಗ್ರಹಗಳನ್ನು ಕಕ್ಷೆಗೆ ಹಾರಿಬಿಡಲಿದೆ. ಈ ವಿಶೇಷ ಸಾಧನೆಗೆ ಸೋಮವಾರದಿಂದ ಕೌಂಟ್ ಡೌನ್ ಆರಂಭವಾಗಲಿದೆ. ಜತೆಗೆ ಶುಕ್ರ ಮತ್ತು ಮಂಗಳನತ್ತ ಕೂಡಾ ನೋಟ ಹರಿಸಲಿದ್ದು, ಏಕಕಾಲದಲ್ಲಿ ನೂರಕ್ಕೂ ಅಧಿಕ ಉಪಗ್ರಹಗಳ ಉಡಾವಣೆಯು ಇಸ್ರೋ ಸಾಧನೆಗೆ ಮತ್ತೊಂದು ಮೈಲಿಗಲ್ಲಾಗಲಿದೆ.

ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ 100ಕ್ಕೂ ಅಧಿಕ ಉಪಗ್ರಹ ಹಾರಿಬಿಡಲಿಡುವ ಇಸ್ರೋ, 2014ರಲ್ಲಿ ರಷ್ಯಾ ಏಕಕಾಲದಲ್ಲಿ ಹಾರಿಬಿಟ್ಟಿದ್ದ 37 ಉಪಗ್ರಹಗಳ ಉಡಾವಣೆಯ ದಾಖಲೆಯನ್ನು ಅಳಿಸಿಹಾಕಲು ಸಜ್ಜಾಗಿದೆ. ರಷ್ಯಾ ತನ್ನ ಉಪಗ್ರಹ ಉಡಾವಣೆಗೆ ಖಂಡಾಂತರ ಕ್ಷಿಪಣಿಯನ್ನು ಮಾರ್ಪಾಟು ಮಾಡಿ ಬಳಸಿಕೊಂಡಿತ್ತು. ಆದರೆ ಭಾರತ ಸ್ವದೇಶಿ ನಿರ್ವಿುತ ಪಿಎಸ್​ಎಲ್​ವಿ ರಾಕೆಟ್ ಮೂಲಕ ಭಾರತದ ಮೂರು ಮತ್ತು 101 ವಿದೇಶಿ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.

39ನೇ ಉಡಾವಣೆ: ಇದು ಇಸ್ರೋದ 39ನೇ ಉಪಗ್ರಹ ಉಡಾವಣೆ ಯೋಜನೆಯಾಗಿದೆ. ಪಿಎಸ್​ಎಲ್​ವಿ ಒಟ್ಟು 1,378 ಕೆ.ಜಿ. ತೂಕದ ರೋಬಾಟ್​ಗಳ ಸಹಿತ ಉಡಾವಣೆಯಾಗಲಿದೆ. ಭಾರತದ ಕಾಟೋಸ್ಯಾಟ್-2 ಸರಣಿಯ ವಿಶೇಷ ಉಪಗ್ರಹವು ಭಾರತದ ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನದ ಮೇಲೆ ನಿಗಾ ಇರಿಸಲಿದೆ. -ಪಿಟಿಐ

ವಿದೇಶದ 101 ಉಪಗ್ರಹ

ಒಟ್ಟು 104 ಉಪಗ್ರಹಗಳ ಪೈಕಿ 101 ಉಪಗ್ರಹಗಳು(664 ಕೆಜಿ ತೂಕ) ವಿದೇಶದ್ದೇ ಆಗಿವೆ. ಅವುಗಳಲ್ಲಿ ಇಸ್ರೇಲ್, ಕಝುಕಿಸ್ತಾನ, ನೆದರ್​ಲ್ಯಾಂಡ್, ಸ್ವಿಜರ್​ಲೆಂಡ್, ಯುಎಇಯ ತಲಾ ಒಂದು ಮತ್ತು ಅಮೆರಿಕದ 96 ಉಪಗ್ರಹಗಳು ಕಕ್ಷೆ ಸೇರಲಿವೆ. ಕಡಿಮೆ ವೆಚ್ಚದಲ್ಲಿ ಉಪಗ್ರಹ ಉಡಾವಣೆ ಮಾಡುವ, ಅತಿಹೆಚ್ಚು ನಿಖರ ಗುರಿ ತಲುಪುವ ಇಸ್ರೋ ಮೂಲಕ ಅಮೆರಿಕದ ಹೆಚ್ಚಿನ ಖಾಸಗಿ ಸಂಸ್ಥೆಗಳು ತಮ್ಮ ಉಪಗ್ರಹಗಳನ್ನು ಹಾರಿಬಿಡಲು ಬಯಸುತ್ತಿವೆ.

ಸ್ಟಾರ್ಟಪ್ ಕಂಪನಿಯ 88 ಉಪಗ್ರಹಗಳು

ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟಪ್ ಕಂಪನಿ ಪ್ಲಾನೆಟ್ ಇಂಕ್. ತಲಾ 4.7 ಕೆಜಿ ತೂಕದ ಡವ್ ಹೆಸರಿನ 88 ಉಪಗ್ರಹಗಳನ್ನು ಭಾರತದ ಇಸ್ರೋ ಮೂಲಕ ಬಾಹ್ಯಾಕಾಶಕ್ಕೆ ಸೇರಿಸುತ್ತಿದೆ. ಭೂಮಿಯ ಚಿತ್ರಣ, ಮ್ಯಾಪಿಂಗ್​ನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವ ಗುರಿಯನ್ನು ಇವು ಹೊಂದಿವೆ. ಗಂಟೆಗೆ 27,000 ಕಿ.ಮೀ. ವೇಗದಲ್ಲಿ 600 ಸೆಕೆಂಡ್​ಗಳ ಅವಧಿಯಲ್ಲಿ ಇವು ಅತ್ಯಂತ ಕ್ರಮಬದ್ಧವಾಗಿ ರಾಕೆಟ್​ನಿಂದ ಬೇರ್ಪಟ್ಟು ಕಕ್ಷೆ ಸೇರಲಿವೆ. ಇವು ಒಂದಕ್ಕೊಂದು ತಾಗದೆ, ಸುರಕ್ಷಿತವಾಗಿ ಕಕ್ಷೆ ಸೇರುವಂತೆ ಇಸ್ರೋ ವಿಶೇಷ ವ್ಯವಸ್ಥೆ ರೂಪಿಸಿದೆ.

Leave a Reply

Your email address will not be published. Required fields are marked *

Back To Top