Thursday, 20th September 2018  

Vijayavani

Breaking News

ವಿಲಕ್ಷಣ ಟೇಸ್ಟು!

Saturday, 15.09.2018, 3:02 AM       No Comments

ಜಿರಲೆಯ ಪಲ್ಯ ಮತ್ತು ಉಪ್ಪಿನಕಾಯಿ, ಎರೆಹುಳುವಿನ ನೂಡಲ್ಸ್, ಕಪ್ಪೆಕಾಲಿನ ಚಿಪ್ಸು ಇತ್ಯಾದಿಗಳನ್ನು ಚೀನಿಯರು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ ಎನ್ನಲಾಗುತ್ತದೆ. ಚೀನಿಯರ ವಿಲಕ್ಷಣ ರುಚಿ, ಅಭಿರುಚಿಗಳನ್ನು ಅರಿತವರಿಗೆ ಈ ಸುದ್ದಿ ಹೊಸದೇನೂ ಅಲ್ಲ. ಆದರೆ ಈ ನಿಟ್ಟಿನಲ್ಲಿ ವಿಯೆಟ್ನಾಂ ಜನರು ಒಂದು ಹೆಜ್ಜೆ ಮುಂದಿಟ್ಟಿರುವುದು ವರದಿಯಾಗಿದೆ. ಆ ದೇಶದ ಉತ್ತರ ಭಾಗದಲ್ಲಿ ಹೇರಳವಾಗಿರುವ ವಿಶಿಷ್ಟ ಹಾವುಗಳನ್ನು ಹಿಡಿದು, ಹುರಿದೋ ಇಲ್ಲವೇ ಬೇಯಿಸಿಯೋ ಗುಳುಂ ಮಾಡುವುದು, ಮಸಾಲೆ ಬೆರೆಸಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಅತಿಥಿಗಳಿಗೆ ಬಡಿಸುವುದು ಅಲ್ಲಿನವರ ಪರಿಪಾಠವಂತೆ; ಉಷ್ಣದೇಹ ಪ್ರಕೃತಿಯಿರುವವರು ಹಾವಿನ ಮಾಂಸ ಸೇವಿಸಿದರೆ ದೇಹ ತಂಪಾಗುತ್ತದೆ ಮತ್ತು ಮೂಳೆಗಳಿಗೂ ಒಳ್ಳೆಯದು ಎಂಬ ಸಾಂಪ್ರದಾಯಿಕ ನಂಬಿಕೆಯೇ ಇದಕ್ಕೆ ಕಾರಣವಂತೆ.

ಅಲ್ಲಿನ ಕೆಲವು ರೆಸ್ಟೋರಂಟ್​ಗಳಲ್ಲಂತೂ ಲೆಮನ್​ಗ್ರಾಸ್ ಮತ್ತು ಮೆಣಸಿನಕಾಯಿ ಜತೆಯಲ್ಲಿ ಹಾವನ್ನು ಹುರಿದು ಕುರುಕಲು ತಿಂಡಿಯೊಂದನ್ನು ಸಿದ್ಧಪಡಿಸಿ, ಅಕ್ಕಿಯಿಂದ ತಯಾರಿಸಲಾದ ಮದ್ಯದೊಂದಿಗೆ (ಈ ಮದ್ಯಕ್ಕೂ ಹಾವಿನ ರಕ್ತವನ್ನು ಬೆರೆಸಲಾಗುತ್ತದೆಯಂತೆ!) ಅವನ್ನು ಬಡಿಸುವುದು ವಿಶೇಷ. ಆದ್ದರಿಂದ ಮುಂದೆಂದಾದರೂ ವಿಯೆಟ್ನಾಂಗೆ ಪ್ರವಾಸ ಹೋಗಿ ಅಲ್ಲಿನ ಹೋಟೆಲ್​ಗಳಿಗೆ ಭೇಟಿಯಿತ್ತರೆ, ನಿಜಕ್ಕೂ ನಿಮ್ಮ ತಟ್ಟೆಯಲ್ಲಿರುವುದೇನು ಎಂಬುದರ ಕುರಿತು ಗಮನವಿರಲಿ! ಆದರೆ, ಅಯೋನಾ ಡಂಗ್ಲರ್ ಎಂಬ ವನ್ಯಜೀವಿ ತಜ್ಞೆಯ ಪ್ರಕಾರ, ಈಗಾಗಲೇ ಜಾಗತಿಕ ಮಾಂಸ ಉತ್ಪಾದನಾ ಪ್ರಮಾಣವು ಸಾಕಷ್ಟಿರುವುದರಿಂದ, ಹಾವುಗಳನ್ನು ಹೀಗೆ ಮಾಂಸಕ್ಕಾಗಿ ಸಾಯಿಸುವುದು ತರವಲ್ಲ. ಇದರಿಂದಾಗಿ ಕಾಡಿನ ಪರಿಸರ ವ್ಯವಸ್ಥೆಗೂ ಸಂಚಕಾರ ಒದಗುತ್ತದೆಯಂತೆ. ಎಲ್ಲಕ್ಕೂ ಕಾಲವೇ ಉತ್ತರವನ್ನು ಹೇಳಬೇಕು. ಅಲ್ಲವೇ?

Leave a Reply

Your email address will not be published. Required fields are marked *

Back To Top