Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ವಿಮುಕ್ತ ದೇವದಾಸಿ ಮಕ್ಕಳಿಗೆ ಕಂಕಣ ಯೋಗ

Sunday, 10.06.2018, 3:03 AM       No Comments

ಕುಷ್ಟಗಿ (ಕೊಪ್ಪಳ): ವಿಮುಕ್ತ ದೇವದಾಸಿಯರ ಮಕ್ಕಳಿಗೆ ಕಂಕಣ ಭಾಗ್ಯ ಕೊಡಿಸಿದ ಅಪರೂಪದ ಕಾರ್ಯಕ್ರಮ ಪಟ್ಟಣದಲ್ಲಿ ಶನಿವಾರ ನಡೆದಿದೆ. ವಿಮುಕ್ತ ದೇವದಾಸಿ ವೇದಿಕೆ ಈ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಇದಕ್ಕೆ ಮಾದಿಗ ಹಾಗೂ ಛಲವಾದಿ ಮಹಾಸಭಾ ಕೈ ಜೋಡಿಸಿದ್ದು ವಿಶೇಷ. ರಾಜ್ಯದಲ್ಲೇ ಮೊದಲು ಎಂಬಂತೆ ನಡೆದ ಈ ಕಲ್ಯಾಣಕ್ಕೆ ಸಾವಿರಾರು ಜನ ಸಾಕ್ಷಿಯಾದರು.

ಪೊ›.ಬಿ. ಕೃಷ್ಣಪ್ಪ ಅವರ 80ನೇ ಜನ್ಮದಿನದ ಪ್ರಯುಕ್ತ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕೊಪ್ಪಳ, ಬೆಳಗಾವಿ, ಹಾವೇರಿ, ಗದಗ, ರಾಯಚೂರು ಜಿಲ್ಲೆಯ 32 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಮಕ್ಕಳ ಮದುವೆಗೆ ದೇವದಾಸಿಯರು ಪಡುತ್ತಿರುವ ಪಾಡು ಅರಿತ ವೇದಿಕೆ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿ ಯಶ ಕಂಡಿದೆ.

ಕುಟುಂಬದವರ ವಿರೋಧದ ನಡುವೆಯೇ ಕಬಡ್ಡಿ ಆಟಗಾರ ಸಿಂಧನೂರು ತಾಲೂಕು ಊಮಲೂಟಿಯ ಮೌನೇಶ ಎರಡೂ ಕಾಲಿಲ್ಲದ ಅದೇ ತಾಲೂಕಿನ ತಿಡಿಗೋಳದ ರೇಣುಕಾರನ್ನು ವರಿಸಿದರೆ, ಗಂಗಾವತಿಯ ಕಲಕೇರಿ ಗ್ರಾಮದ ಪಾರ್ವತಿ, ಕುಷ್ಟಗಿಯ ಅಂಗವಿಕಲ ಸಂತೋಷರ ಕೈ ಹಿಡಿದಿದ್ದಾರೆ. ಎರಡು ತಿಂಗಳಿನಿಂದ ಊರೂರು ಅಲೆದು ತಮ್ಮದೇ ಸಮುದಾಯದವರಿಂದ ರೊಟ್ಟಿ, ದವಸ ಧಾನ್ಯ, ಕೈಲಾದಷ್ಟು ಹಣ ಸಂಗ್ರಹಿಸಿ ಖರ್ಚು ವೆಚ್ಚ ನಿಭಾಯಿಸಿದ್ದಾರೆ.

ನವದಂಪತಿಗಳಿಗೆ ಚಿತ್ರದುರ್ಗದ ಆದಿಜಾಂಬವ ಮಠದ ಷಡಕ್ಷರಮುನಿಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ವೇದಿಕೆ ಅಧ್ಯಕ್ಷೆ ಪಡಿಯಮ್ಮ ಕ್ಯಾದಿಗುಪ್ಪ ಮುಂತಾದವರಿದ್ದರು.

ಪೂಜೆ ಮಾಡಿ ಹಾಳಾಗಿದ್ದೀರಿ

‘ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಇಂಡಿಯಾ ನಂಬರ್ ಒನ್. ಭಾರತದಲ್ಲಿ ಸಮಾನತೆ ಇಲ್ಲ, ಜಾತೀಯತೆ ಹೋಗಿಲ್ಲ. ಆದ್ರೆ ಮಕ್ಕಳನ್ನು ಹುಟ್ಟಿಸೋದ್ರರಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕಾಗಿಯೇ ನಾನು 2 ಮಕ್ಕಳನ್ನು ಮಾತ್ರ ಹುಟ್ಟಿಸಿದ್ದೇನೆ. ನೀವೂ ಮಕ್ಕಳನ್ನು ಹುಟ್ಟಿಸೋದ್ರರಲ್ಲಿ ಬ್ರೇಕ್ ಹಾಕಿ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು. ದೇವರನ್ನು ಪೂಜೆ ಮಾಡಿ ಅರ್ಧ ಹಾಳಾಗಿದ್ದೀರಾ. ಸಾಲ ಮಾಡಿ ದುರ್ಗಮ್ಮ-ದ್ಯಾವಮ್ಮ ಜಾತ್ರೆ ಮಾಡಿ ಹಾಳಾಗಿ ಹೋಗ್ತೀರಾ. ಅದನ್ನು ಬಿಟ್ಟು ಕಾಯಕವೇ ಕೈಲಾಸ ಎಂಬಂತೆ ಶ್ರದ್ಧೆಯಿಂದ ಕೆಲಸ ಮಾಡಿ’ ಎಂದರು.

Leave a Reply

Your email address will not be published. Required fields are marked *

Back To Top