Thursday, 19th April 2018  

Vijayavani

ಬಿಜೆಪಿ ಕಚೇರಿಯಲ್ಲಿ ಅಮಿತ್‌ ಷಾ ಮೀಟಿಂಗ್ - ಸೋಶಿಯಲ್‌ ಮೀಡಿಯಾ ಬಗ್ಗೆ ಫುಲ್‌ ಮಾರ್ಕ್ಸ್‌ - ಎಚ್ಚರಿಕೆ ಹೆಜ್ಜೆ ಇಡಲು ಸಲಹೆ        ಒಂಟಿಸಲಗದ ಮನೆಗೆ ಬಂತು ಬಿ ಫಾರಂ ​​ - ಅಂಬಿ ಷರುತ್ತುಗಳಿಗೆ ಒಪ್ಪಿದ ಪರಂ - ಪಕ್ಷದ ನಡೆ ಬಗ್ಗೆ ರೆಬೆಲ್‌ಸ್ಟಾರ್‌ ಗರಂ        ಕೈ ಟಿಕೆಟ್​ ತಪ್ಪಿದ್ದಕ್ಕೆ ಶಶಿಕುಮಾರ್ ಅಸಮಾಧಾನ​ - ದೇವೆಗೌಡರ ಭೇಟಿಯಾದ ಕೊಲ್ಲೂರ ಕಾಳ - ಪದ್ಮನಾಭ ನಗರದ ನಿವಾಸದಲ್ಲಿ ಜೆಡಿಸ್​ ಸೇರ್ಪಡೆ        ಟಿಕೆಟ್​ಗಾಗಿ ಹೆಚ್ಚಿದ ಕಣ್ಣೀರಧಾರೆ - ಮಾಯಕೊಂಡದಲ್ಲಿ ಕಣ್ಣೀರಿಟ್ಟ ಮಾಜಿ ಶಾಸಕ - ತರೀಕೆರೆಯಲ್ಲಿ ಶಿವಶಂಕರಪ್ಪ ಭಾವುಕ        ಭವಾನಿ ಸೋಲಿಸಿ ಎಂದಿದ್ದು ನನ್ನನ್ನಲ್ಲ - ಕೈ ಅಭ್ಯರ್ಥಿ ವಿರುದ್ಧ ಮಾತನಾಡಿದ್ದಾರೆ - ಭವಾನಿ ವಿಡಿಯೋ ಬಗ್ಗೆ ಸಾ.ರಾ ಮಹೇಶ್‌ ಸ್ಪಷ್ಟನೆ        ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ - 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಗ್ರೀನ್​ಸಿಗ್ನಲ್ - ಚುನಾವಣಾ ಆಯೋಗದಿಂದ ಒಪ್ಪಿಗೆ       
Breaking News

ವಿನಯ್ Vs ಲತಾ

Wednesday, 13.09.2017, 3:04 AM       No Comments

 

ಬೆಂಗಳೂರು: ‘ಅತಿರಥ’ನಿಗೆ ಜೋಡಿಯಾಗಿರುವ ನ್ಯೂಜಿಲೆಂಡ್ ಬೆಡಗಿ ಲತಾ ಹೆಗಡೆ ಸದ್ಯದಲ್ಲೇ ‘ಅನಂತು’ಗೂ ಜೋಡಿಯಾಗಲಿದ್ದಾರೆ. ಅದಕ್ಕೆಂದೇ ಅವರು ಮುಸ್ಲಿಂ ಗೆಟಪ್​ನಲ್ಲಿ ಕಾಣಿಸಿಕೊಂಡು ‘ನುಸ್ರತ್’ ಆಗಲಿದ್ದಾರೆ. ಅರ್ಥಾತ್, ರಾಘವೇಂದ್ರ ರಾಜ್​ಕುಮಾರ್ ಅವರ ಪುತ್ರ ವಿನಯ್ ರಾಜ್​ಕುಮಾರ್ ಅಭಿನಯಿಸಲಿರುವ ಹೊಸ ಚಿತ್ರ ‘ಅನಂತು ್ಖಖ ನುಸ್ರತ್’ಗೆ ಲತಾ ಹೆಗಡೆಯೇ ನಾಯಕಿಯಂತೆ.

ಸುಧೀರ್ ಶ್ಯಾನಭೋಗ್ ಚೊಚ್ಚಲ ನಿರ್ದೇಶನದ ‘ಅನಂತು ್ಖಠ ನುಸ್ರತ್’ ಚಿತ್ರದಲ್ಲಿ ನಾಯಕ-ನಾಯಕಿ ಇಬ್ಬರೂ ವಕೀಲರು. ಇತ್ತೀಚೆಗಷ್ಟೇ ಸೆಟ್ಟೇರಿರುವ ಈ ಚಿತ್ರದಲ್ಲಿ ವಿನಯ್ ‘ಅನಂತು’ ಪಾತ್ರದಲ್ಲಿ ಕಾಣಿಸಲಿದ್ದು, ‘ನುಸ್ರತ್’ ಅಂದರೆ ನಾಯಕಿಯ ಪಾತ್ರಕ್ಕೆ ಯಾರು ಎಂಬುದು ಬಹಿರಂಗವಾಗಿರಲಿಲ್ಲ. ಆದರೆ ಲಭ್ಯ ಮಾಹಿತಿ ಪ್ರಕಾರ, ನುಸ್ರತ್ ಪಾತ್ರಕ್ಕೆ ಲತಾ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ. ವಿನಯ್ಗೆ ಇದು ಕನ್ನಡದಲ್ಲಿ ಮೂರನೇ ಹಾಗೂ ಮಹತ್ವಾಕಾಂಕ್ಷಿ ಚಿತ್ರ. ಇದು ನಾಯಕ ವರ್ಸಸ್ ನಾಯಕಿ ಎಂಬಂತಿರುವ ಕಥೆಯಾದ್ದರಿಂದ ನಾಯಕಿ ಆಯ್ಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆಯಂತೆ. ಅದೇ ನಿಟ್ಟಿನಲ್ಲಿ ಚಿತ್ರತಂಡ ರ್ಚಚಿಸಿದ್ದು ಲತಾ ಹೆಗಡೆ ಅವರನ್ನು ನಾಯಕಿ ಆಗಿಸಲು ಚಿಂತನೆ ನಡೆಸಿದೆಯಂತೆ. ಮಹೇಶ್​ಬಾಬು ನಿರ್ದೇಶನದ ‘ಅತಿರಥ’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿರುವ ಲತಾ, ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಲತಾಗೆ ಇದು ಕನ್ನಡದ ಎರಡನೇ ಚಿತ್ರವಾಗಲಿದೆ. ಮೂಲತಃ ಶಿರಸಿಯವರಾದ ಲತಾ, ಓದಿದ್ದು ಬೆಳೆದಿದ್ದೆಲ್ಲ ನ್ಯೂಜಿಲೆಂಡ್​ನ ಆಕ್ಲೆಂಡ್​ನಲ್ಲಿ. ಎಂಬಿಎ ಪದವೀಧರೆಯಾಗಿರುವ ಇವರು ರೂಪದರ್ಶಿಯೂ ಆಗಿದ್ದಾರೆ. ಅಂದಹಾಗೆ, ಈ ಬಗ್ಗೆ ಅಧಿಕೃತ ಮಾಹಿತಿ ನೀಡದ ಚಿತ್ರತಂಡ ನಾಯಕಿ ಯಾರು ಎಂಬ ಗುಟ್ಟನ್ನು ಇನ್ನೂ ಬಿಟ್ಟು ಕೊಡುತ್ತಿಲ್ಲ.

 

Leave a Reply

Your email address will not be published. Required fields are marked *

Back To Top