Monday, 23rd April 2018  

Vijayavani

ಬಾದಾಮಿ ಕಾಂಗ್ರಸ್​​​​​ನಲ್ಲಿ ಭಿನ್ನಮತ- ಚಿಮ್ಮನಕಟ್ಟಿ, ದೇವರಾಜ್​​ ಪಾಟೀಲ್​​ ಕೋಲ್ಡ್​ವಾರ್​- ಪ್ರತ್ಯೇಕ ಸಭೆಗೆ ದೇವರಾಜ್​​ ಪಾಟೀಲ್ ನಿರ್ಧಾರ        ಇನ್ನೂ ಐದು ವರ್ಷ ಕ್ಷೇತ್ರಕ್ಕೆ ಬರಲ್ಲ- ನಾನು ಬರದಿದ್ರೆ ನಿಂಗೇನು ತೊಂದರೆ- ಕಾರ್ಯಕರ್ತರ ಕೋರಿಕೆಗೆ ಸಂತೋಷ್​​ ಲಾಡ್​​ ದರ್ಪ        ಇಂದು ಬೆಂಗಳೂರಲ್ಲಿ ಅಂಬಿ ಸುದ್ದಿಗೋಷ್ಠಿ- ಚುನಾವಣಾ ಕಣದಿಂದ ಹಿಂದೆ ಸರಿದ ಅಂಬರೀಷ್​​​​- ಹೈಕಮಾಂಡ್​ಗೆ ಅಂಬಿ ಮಾಹಿತಿ        ಅಖಾಡದಲ್ಲಿ ಮತ್ತೆ ಒಂದಾದ ರೆಡ್ಡಿ ಬ್ರದರ್ಸ್​- ಕರುಣಾಕರರೆಡ್ಡಿಗೆ ಜನಾರ್ದನ ರೆಡ್ಡಿ ಸಾಥ್​- ಶಮನವಾಯ್ತು ಮುನಿಷು        ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ- ಇಂದು ಹೈಕೋರ್ಟ್​​​ನಲ್ಲಿ ವಿಚಾರಣೆ- ಸಿಎಟಿ ವಿರುದ್ಧ ಕೋರ್ಟ್​​ ಮೆಟ್ಟಿಲೇರಿರೋ ಜಿಲ್ಲಾಧಿಕಾರಿ        ಸಿಜೆಐ ವಿರುದ್ಧ ಮಹಾಭಿಯೋಗ ಪ್ರಸ್ತಾಪ- ಉಪರಾಷ್ಟ್ರಪತಿಯಿಂದ ವಿಪಕ್ಷಗಳ ನಿರ್ಣಯ ತಿರಸ್ಕಾರ- ಕಾಂಗ್ರೆಸ್​ಗೆ ಮತ್ತೆ ಮುಖಭಂಗ       
Breaking News

ವಿಧಾನಸಭಾ ಚುನಾವಣೆಗೆ ಜೆಡಿಎಸ್ ಭರ್ಜರಿ ಸಿದ್ಧತೆ

Friday, 21.04.2017, 3:00 AM       No Comments

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬೂತ್ ಮಟ್ಟದಲ್ಲಿ ಸಮಿತಿ ರಚನೆ, ಪಕ್ಷದ ಪದಾಧಿಕಾರಿಗಳ ಆಮೂಲಾಗ್ರ ಬದಲಾವಣೆ, ಪಕ್ಷದ ಸರ್ಕಾರದ ಅವಧಿಯಲ್ಲಿನ ಸಾಧನೆಗಳ ಪ್ರಚಾರಕ್ಕೆ ಸಮಿತಿ ರಚನೆ ಮಾಡಲು ಜೆಡಿಎಸ್ ಕೋರ್ ಕಮಿಟಿ ಸಭೆ ನಿರ್ಣಯ ಮಾಡುವ ಮೂಲಕ ಮುಂದಿನ ಚುನಾವಣೆಗೆ ಭರ್ಜರಿ ಸಿದ್ಧತೆ ಆರಂಭಿಸಿದೆ. ಪಕ್ಷದ ಕಚೇರಿ ‘ಜೆಪಿ ಭವನ’ದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಹತ್ವದ ತೀರ್ವನಗಳನ್ನು ಕೈಗೊಳ್ಳಲಾಯಿತು.

ಪಕ್ಷ ಸಂಘಟನೆ, ಯುವಕರನ್ನು ಪಕ್ಷಕ್ಕೆ ಸೆಳೆಯುವುದು, ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕುರಿತು ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ರ್ಚಚಿಸಲಾಯಿತು. ಸಭೆ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಹಾಗೂ ರಮೇಶ್​ಬಾಬು ಮಾತನಾಡಿ, ಕೋರ್ ಕಮಿಟಿಗೆ ಹೊಸದಾಗಿ ಮಾಜಿ ಶಾಸಕ ಎಚ್.ಸಿ.ನೀರಾವರಿ ಹಾಗೂ ನಾರಾಯಣಸ್ವಾಮಿ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು. ಪಕ್ಷದ ಎಲ್ಲ 22 ಸಮಿತಿಗಳ ಪದಾಧಿಕಾರಿಗಳನ್ನು ಹೊಸದಾಗಿ ರಚಿಸುವ ಕುರಿತು ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಸಭೆ ಅಧಿಕಾರ ನೀಡಿದೆ. ಪಕ್ಷ ಸಂಘಟನೆ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕುರಿತು ಬಸವರಾಜ ಹೊರಟ್ಟಿ ಕೊಟ್ಟ ಸಲಹೆಗಳಿಗೆ ಸಭೆ ಸಂಪೂರ್ಣ ಅಂಗೀಕಾರ ನೀಡಿದೆ ಎಂದು ರಮೇಶ್​ಬಾಬು ಹೇಳಿದರು.

ಪ್ರಚಾರ ಸಮಿತಿ ರಚನೆ: ಕುಮಾರಸ್ವಾಮಿ ಅವರ 20 ತಿಂಗಳ ಅಧಿಕಾರ, ದೇವೇಗೌಡರು ಸಿಎಂ ಹಾಗೂ ಪ್ರಧಾನಿಯಾಗಿದ್ದಾಗ ಕೈಗೊಂಡ ಸಾಧನೆಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮ ಹಾಗೂ ಕೈಪಿಡಿಯ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಪ್ರಚಾರ ಸಮಿತಿ ರಚಿಸಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು. ಬೂತ್ ಮಟ್ಟದ ಸಮಿತಿ ರಚನೆಗೆ ಸಂಬಂಧಿಸಿದಂತೆ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್​ಬಾಬು ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಈ ಸಮಿತಿ ಬೂತ್​ವುಟ್ಟದ ಸಮಿತಿ ರಚನೆಗೆ ಸಹಕಾರ ನೀಡಲಿದೆ ಎಂದರು.

224 ಕ್ಷೇತ್ರಗಳಲ್ಲಿ ಕಣಕ್ಕೆ: ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದೆ ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಭೆ ತೀರ್ವನಿಸಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಸಮಾವೇಶ, ಅಲ್ಪ ಸಂಖ್ಯಾತರ ಸಮಾವೇಶ ಹಾಗೂ ಪರಿಶಿಷ್ಟ ವರ್ಗಗಳ ಸಮಾವೇಶವನ್ನು ಮುಂದಿನ ಮೂರು ತಿಂಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.

ಎಚ್ಡಿಕೆ ಆರೋಗ್ಯದ ಬಗ್ಗೆ ದೇವೇಗೌಡ ಆತಂಕ: ಎಚ್.ಡಿ. ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ದೇವೇಗೌಡರು, ಆರೋಗ್ಯ ಸರಿ ಇಲ್ಲದಿದ್ದರೂ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಹಾಗಾಗಿ 120 ಶಾಸಕರನ್ನು ಗೆಲ್ಲಿಸಿ ಅವರಿಗೆ ಶಕ್ತಿ ತುಂಬಬೇಕು ಎಂದು ಉಪ್ಪಾರ ಸಮುದಾಯದ ಮುಖಂಡರ ಸಭೆಯಲ್ಲಿ ಮನವಿ ಮಾಡಿದರು.

ಮೇನಲ್ಲಿ ಮೊದಲ ಪಟ್ಟಿ: 100 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಸಿದ್ಧಗೊಂಡಿದ್ದು, ಈ ಪಟ್ಟಿಯನ್ನು ಅಂತಿಮ ಪರಿಶೀಲನೆಗೆ ದೇವೇಗೌಡರಿಗೆ ಕಳುಹಿಸಲಾಗಿದೆ. ಕಡಿಮೆ ಅಂತರದಿಂದ ಸೋತ ಅಭ್ಯರ್ಥಿಗಳು ಹಾಗೂ ಪಕ್ಷದ ಸಂಘಟಕರಿಗೆ ಟಿಕೆಟ್ ನೀಡಲಾಗುವುದು. ಅಲ್ಲದೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೂ ಎದುರಿಸಲು ಜೆಡಿಎಸ್ ಮಾನಸಿಕವಾಗಿ ಸನ್ನದ್ಧವಾಗಿರಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

Back To Top