Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ವಿದ್ಯೆ ಕಲಿಸಿ ಬದುಕು ರೂಪಿಸುವ ಗುರುವಿಗೆ ವಿದ್ಯಾರ್ಥಿಗಳ ಸೆಲ್ಫಿ ವಂದನೆ

Tuesday, 05.09.2017, 3:03 AM       No Comments

ಎದೆಯ ಹಣತೆಯಲ್ಲಿ ಅಕ್ಷರದ ದೀಪ ಹೊತ್ತಿಸಿ ಅಗಣಿತ ವಿದ್ಯಾರ್ಥಿಗಳ ಬಾಳಿಗೆ ಬೆಳಕು ನೀಡುವ ಗುರುಗಳು ಸದಾ ಸ್ಮರಣೀಯರು. ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಅನನ್ಯ. ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದವರನ್ನು ನೆನೆಯಲು ಶಿಕ್ಷಕರ ದಿನ ಅತ್ಯುತ್ತಮ ಸಮಯ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ವಿಜಯವಾಣಿ ಆಹ್ವಾನಕ್ಕೆ ಓಗೊಟ್ಟು ಸಾವಿರಾರು ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿದ ಗುರುಗಳಿಗೆ ಶುಭಾಶಯ ಕೋರಿದ್ದಾರೆ.

ಹ್ಯಾಪಿ ಟೀಚರ್ಸ್ ಡೆ…

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್​ನ ನೃತ್ಯಾಲಯದ ಗುರು ರೇಖಾ ಮಂಜುನಾಥ್ ಅವರಿಗೆ ಪುಟ್ಟ ವಿದ್ಯಾರ್ಥಿಗಳು ಶುಭ ಕೋರಿದ್ದು ಹೀಗೆ…

ಗುರು ಭವಿಷ್ಯ ನಿರೂಪಕ

ಗುರು ಕೇವಲ ಮಾರ್ಗದರ್ಶಕ ಅಷ್ಟೇ ಅಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸೃಷ್ಟಿಕರ್ತ. ವಿದ್ಯಾರ್ಥಿಯ ಪ್ರತಿ ನಡೆಯೂ ಆತನ ಗುರುವನ್ನು ಆಧರಿಸಿರುತ್ತದೆ ಎನ್ನುವ ನೃತ್ಯಧಾಮ ಟೆಂಪಲ್ ಆಫ್ ಫೈನ್ ಆರ್ಟ್ಸ್​ನ ಗುರು ಡಾ. ರೇಖಾ ರಾಜು ಅವರೊಂದಿಗೆ ವಿದ್ಯಾರ್ಥಿಗಳ ಸೆಲ್ಪಿ.

ಕೆಂಗೇರಿಯ ಸಿಂಗನಹಳ್ಳಿ ವಿದ್ಯಾ ಕ್ಷೇತ್ರಂನ ನೆಚ್ಚಿನ ಶಿಕ್ಷಕಿ ಜತೆ ಯುಕೆಜಿ ವಿದ್ಯಾರ್ಥಿನಿ ಸಿಂಚನಾ.

ಪಾಠದ ಜತೆ ಸ್ಪರ್ಧೆಗೂ ಅವಕಾಶ ಮಾಡಿಕೊಡ್ತಾರೆ ಮಿಸ್….

ಗಣಿತ ಹೇಳ್ಕೊಡೊ ಉಷಾ ಮಿಸ್ ಅಂದ್ರೆ ನನಗೆ ಅಚ್ಚುಮೆಚ್ಚು. ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಪಾಠ ಮಾಡುತ್ತಾರೆ, ಯಾರ ಮೇಲೂ ಸಿಟ್ಟು ಮಾಡಿಕೊಳ್ಳದೆ, ಮತ್ತೆ ಹೇಳಿಕೊಡುತ್ತಾರೆ. ಶಾಲೆಯಲ್ಲಿ ಉತ್ತಮ ಪಾಠದ ಜತೆಗೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹ ನೀಡುತ್ತಾರೆ. ಉಷಾ ಮಿಸ್ ಜತೆಗೆ ನನ್ನೆಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

| ಅಪೂರ್ವ 7ನೇ ತರಗತಿ, ಜೆಪಿ ಆಂಗ್ಲ ಶಾಲೆ ತುರುವೇಕೆರೆ

ಬಡವರಿಗೆ ಆಶ್ರಯದಾತ

ಹಳ್ಳಿಮೇಷ್ಟ್ರು ಎಂದು ಹೆಸರು ಪಡೆದಿರುವ ಸ.ರಘುನಾಥ್ ಬರೀ ಶಿಕ್ಷಕರಲ್ಲ. ಸಂಸ್ಥೆಯಲ್ಲಿ ಒದುತ್ತಿರುವ ಮಕ್ಕಳ ಆರಾಧ್ಯ ದೇವರು. 30 ವರ್ಷಗಳಿಂದ ಮನೆಯಿಂದ ಹೊರಗಿರುವ ಮಕ್ಕಳ ಜತೆ ನನ್ನನ್ನು ಸಂಸ್ಥೆಗೆ ಸೇರಿಸಿಕೊಂಡು ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

| ಮಾಳವಿಕಾ, ದ್ವಿತೀಯ ಪಿಯು ದ್ವಿತೀಯ ಪಿಯು ನಮ್ಮ ಮಕ್ಕಳ ಸಂಸ್ಥೆ, ಶ್ರೀನಿವಾಸಪುರ

ಅರ್ಥ ಮಾಡ್ಕೋತಾರೆ

ಕಲಿಕೆ ವೇಳೆ ತಪ್ಪುಹಾದಿ ತುಳಿಯದಂತೆ ಕಾಪಾಡುವ ಹಾಗೂ ಹೆಣ್ಣುಮಕ್ಕಳ ವಯೋಸಂಬಂಧಿ ಸಮಸ್ಯೆ ಅರ್ಥ ಮಾಡಿಕೊಳ್ಳುವ ಕನ್ನಡ ಟೀಚರ್ ಚಿದಾನಂದ್ ಬಿರಾದಾರ್ ಎಲ್ಲರಿಗೂ ಇಷ್ಟ….

| ವಿಜಯಪುರ ಹೆಣ್ಣುಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು

ನಮಗೆ ಮಂಗಳಕ್ಕ

ಕನ್ನಡ ಪಾಠ ಪಾಡುವ ಮಂಗಳಕ್ಕ ನೆಚ್ಚಿನ ಟೀಚರ್. ಶಾಲೆಯಲ್ಲಿ ಅವರನ್ನು ಟೀಚರ್ ಎನ್ನುವುದಕ್ಕಿಂತ ಅವರ ಸರಳತೆಗೆ ನಾವು ಮಂಗಳಕ್ಕ ಅಂತಲೇ ಕರೆಯುತ್ತೇವೆ.

| ಹರ್ಷಿತಾ 5ನೇ ತರಗತಿ, ಮಂಗಳಾ ವಿದ್ಯಾಮಂದಿರ, ದೊಡ್ಡಬಳ್ಳಾಪುರ

ಅವಿನಾಭಾವ ಸಂಬಂಧ

ಗುರು-ಶಿಷ್ಯರದು ಅವಿನಾಭಾವ ಸಂಬಂಧ. ವಿದ್ಯಾರ್ಥಿಯ ಸಾಧನೆ ಹಿಂದೆ ಗುರು ಇರುತ್ತಾನೆ. ವಿದುಷಿ ದೀಪಾ ಭಟ್ ವಿದ್ಯಾರ್ಥಿಗಳ ಮನ ಅರಿತು ಕಲಿಸುವ ಶ್ರೇಷ್ಠ ಗುರು.

| ಅರ್ಪಿತಾ ರಾವ್ ನೃತ್ಯಕುಟೀರ, ಚಾಮರಾಜಪೇಟೆ,

ಬೆಂಗಳೂರು ಬೆಂಗಳೂರಿನ ಅಚ್ಚಿ ಶಾಸ್ತ್ರೀಯ ನೃತ್ಯ ಕೇಂದ್ರದ ವಿದ್ಯಾರ್ಥಿಗಳೊಂದಿಗೆ ಗುರು ಪದ್ಮಿನಿ ಅಚ್ಚಿ.

ಫೇವರಿಟ್ ಟೀಚರ್

ನನ್ನ ಫೇವರಿಟ್ ಟೀಚರ್ ನಂದಿನಿ ಮ್ಯಾಮ್ ಅವರು ತುಂಬಾ ಚೆನ್ನಾಗಿ ಕಲಿಸುತ್ತಾರೆ. ಪಾಠ ಸ್ವಲ್ಪವೂ ಕಷ್ಟವೆನಿಸದಂತೆ ಗೈಡ್ ಮಾಡುತ್ತಾರೆ. ಅವರಿಗೆ ಹಾಗೂ ಎಲ್ಲ್ಲ ಟೀಚರ್​ಗಳಿಗೆ ಶಿಕ್ಷಕರ ದಿನದ ಶುಭಾಶಯಗಳು.

| ಪ್ರಣಮ್ಯ ಆರ್. 4ನೇ ತರಗತಿ ಡಿ ವಿಭಾಗ ಕಾರ್ವೆಲ್ ಸ್ಕೂಲ್, ಪದ್ಮನಾಭನಗರ, ಬೆಂಗಳೂರು

ಪುಲಕೇಶಿನಗರದ ಫಾತಿಮಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯರ ಜತೆ ಶಿಕ್ಷಕಿಯರಾದ ಲಕ್ಷಿ್ಮೕ ಕೆ. ಮತ್ತು ಭಾರತಿ ಕೆ.ಸಿ.

ಜ್ಞಾನದೀಪ ಬೆಳಗುವವ…

ಜ್ಞಾನದೀಪ ಬೆಳಗುವವನು ಗುರು. ನಾಗರಭಾವಿಯ ನೃತ್ಯಗಂಗಾ ಪ್ರದರ್ಶಕ ಕಲಾ ಕೇಂದ್ರದ ವಿದುಷಿ ರೂಪಶ್ರೀ ಮಧುಸೂದನ್ ನಮ್ಮ ಬದುಕನ್ನು ರೂಪಿಸುತ್ತಿದ್ದಾರೆ ಎಂದಿದ್ದಾರೆ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಲ್ಲಿ ಶಿಕ್ಷಕನ ಪಾತ್ರ ಪ್ರಮುಖ. ಆ ವೃತ್ತಿಯನ್ನು ಅಗಾಧವಾಗಿ ಪ್ರೀತಿಸುತ್ತೇನೆ, ಆಪಾರವಾಗಿ ಗೌರವಿಸುತ್ತೇನೆ ಎನ್ನುವ ಮಲ್ಲೇಶ್ವರದ ರಸ ಆಧರನ್ ಶಾಲೆಯ ಶಿಕ್ಷಕಿ ರೂಪಾ ಹೇಮಂತ್​ಗೆ ವಿದ್ಯಾರ್ಥಿಗಳು ಶುಭ ಕೋರಿದ ಬಗೆ

ಶಿಷ್ಯರಿಂದಲೂ ಕಲಿಕೆ

ನಮ್ಮ ಗುರು ಗೌರಿ ಸಾಗರ್ ನಮ್ಮ ಬದುಕು ರೂಪಿಸುತ್ತಿದ್ದು, ನಾವು ಅವರಿಂದ ಸಾಕಷ್ಟು ಕಲಿಯುತ್ತಿದ್ದೇವೆ. ಶಿಕ್ಷಕಿ ಆಗಿರುವ ಬಗ್ಗೆ ಹೆಮ್ಮೆ ಇದೆ. ವಿದ್ಯಾರ್ಥಿಯಿಂದಲೂ ಶಿಕ್ಷಕ ಕಲಿಯುತ್ತ ಹೋಗುತ್ತಾನೆ ಎಂದು ಗೌರಿ ಮೇಡಮ್ ಸದಾ ಹೇಳುತ್ತಿರುತ್ತಾರೆ. ಅಂತಹ ವಿನೀತಭಾವದ ಗುರುವಿಗೆ ನಮ್ಮ ನಮನ.

ಬೆಂಗಳೂರಿನ ಎಂಇಎಸ್ ಕಾಲೇಜಿನ ಗುರು ಮತ್ತು ಸಹಪಾಠಿಗಳ ಜತೆ ವಿದ್ಯಾರ್ಥಿನಿ ಭವ್ಯಾ.

ಭವಿಷ್ಯ ರೂಪಕರು…

ರಾಜಾಜಿನಗರದ ಎಂಇಎಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಶಿಕ್ಷಕರು ಶಿಕ್ಷಕರ ದಿನಾಚರಣೆಗೆಂದೇ ತೆಗೆಸಿದ ಗ್ರೂಪ್ ಫೋಟೋ.

ಬೆಂಗಳೂರಿನ ಸುಂಕದಕಟ್ಟೆ ಶಾಂತಿಧಾಮ ಶಾಲೆಯ ಶಿಕ್ಷಕಿ ಅನು ಜತೆ 5ನೇ ತರಗತಿ ವಿದ್ಯಾರ್ಥಿನಿ ಲಿಖಿತಾ.

 

ನನ್ನ ನೆಚ್ಚಿನ ಉಪನ್ಯಾಸಕಿ ಅರ್ಚನಾರವಿ ಮೇಡಮ್. ವಿದ್ಯಾರ್ಥಿಸ್ನೇಹಿ ವರ್ತನೆಯಿಂದ ಎಲ್ಲರೊಂದಿಗೆ ಬೆರೆತು ಪಾಠ ಕಲಿಸುವ ಅವರು ನಮ್ಮೆಲ್ಲರಿಗೂ ಸ್ನೇಹಿತರು. ಅವರಿಗೆ ಶುಭಾಶಯ.

| ನವೀನ್ ವಿದ್ಯಾನಿಧಿ ಕಾಲೇಜು, ತುಮಕೂರು

ಬೆಂಗಳೂರಿನ ಲಗ್ಗೆರೆಯ ಮಾತೃಶ್ರೀ ವಿದ್ಯಾನಿಕೇತನದ 7ನೇ ತರಗತಿಯ ವಿದ್ಯಾರ್ಥಿಗಳ ಜತೆ ಶಿಕ್ಷಕರಾದ ಹನುಮಂತರಾಜು ಹಾಗೂ ರೇಷ್ಮಾ ಸುಲ್ತಾನ.

Leave a Reply

Your email address will not be published. Required fields are marked *

Back To Top