Monday, 19th February 2018  

Vijayavani

ನನ್ನ ಮಗನನ್ನ ನಾನೇ ಸರೆಂಡರ್​ ಮಾಡಿಸುತ್ತೇನೆ - ಪೊಲೀಸರಿಗೆ ಶೀಘ್ರವೇ ಒಪ್ಪಿಸುತ್ತೇನೆ - ಗೂಂಡಾ ನಲಪಾಡ್​​ ಕುರಿತು ಹ್ಯಾರಿಸ್​ ಪ್ರತಿಕ್ರಿಯೆ        ನಿನ್ನೆ ಚಿಕ್ಕವನು.. ಇಂದು ಬೆಳೆದ ಮಗ - ಬೈದ ನಂತರ ಮೊಬೈಲ್​ ಸ್ವಿಚ್​​ ಆಫ್​​ ಮಾಡ್ಕೊಂಡಿದ್ದ - ಕೇಸ್​ ಭೀತಿಯಲ್ಲಿ ಉಲ್ಟಾ ಹೊಡೆದ ಹ್ಯಾರಿಸ್​​        ರಾಜ್ಯದಲ್ಲಿ ಇಡೀ ದಿನ ಮೋದಿ ಮೇನಿಯಾ - ಮಧ್ಯಾಹ್ನ ಬಾಹುಬಲಿ ಸನ್ನಿಧಿಗೆ ಪ್ರಧಾನಿ - ಮತ್ತಷ್ಟು ಮೇಳೈಸಲಿದೆ ಮಹಾಮಜ್ಜನ        ಪರಿವರ್ತನಾ ರ‍್ಯಾಲಿಯಲ್ಲಿಂದು ಮೋದಿ ಅಬ್ಬರ - ಬಿಜೆಪಿಯಿಂದ ಗಣಪತಿ ಉಡುಗೊರೆ - ಮೈಸೂರು ಪೇಟ ತೊಡಿಸಿ ಸ್ವಾಗತ        ರೈತ ನಾಯಕ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ - ವಿದೇಶದಿಂದ ಮಕ್ಕಳ ಬಂದ ಬಳಿಕ ಅಂತ್ಯಕ್ರಿಯೆ - ಕಂಬನಿ ಮಿಡಿದ ಗಣ್ಯರು       
Breaking News

ವಿದ್ಯುತ್, ನೀರು ಕೊಡದ ಸರ್ಕಾರ ಬದಲಿಸಿ

Tuesday, 29.08.2017, 3:00 AM       No Comments

ಚಿಕ್ಕೋಡಿ: ರಾಜ್ಯದ ರೈತರಿಗೆ ಸರಿಯಾಗಿ ವಿದ್ಯುತ್ ಮತ್ತು ನೀರು ಕೊಡದ ಸರ್ಕಾರವನ್ನು ಬದಲಿಸಿ, ಅವುಗಳನ್ನು ಸಮರ್ಪಕವಾಗಿ ನೀಡುವ (ಬಿಜೆಪಿ) ಸರ್ಕಾರವನ್ನು ಅಧಿಕಾರಕ್ಕೆ ತರುವುದೇ ಈ ಸಮಸ್ಯೆಗೆ ಸೂಕ್ತ ಪರಿಹಾರ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ ಹೇಳಿದರು. ತಾಲೂಕಿನ ದೂಧಗಂಗಾ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸೋಮವಾರ ಕೆಎಲ್​ಇ ಸಂಸ್ಥೆಯ ಮತ್ತಿಕೊಪ್ಪದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಏನಿದು ಸಂಕಲ್ಪದಿಂದ ಸಿದ್ಧಿ?

ಭಾರತ ಬಿಟ್ಟು ತೊಲಗಿ ಸ್ವಾತಂತ್ರ್ಯ ಹೋರಾಟ ಚಳವಳಿಯ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಮೋದಿ 2022ರೊಳಗಾಗಿ ದೇಶದ ರೈತರ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ನವ ಭಾರತ ಮಂಥನ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡ ಕೃಷಿ ಕ್ಷೇತ್ರದ ಪ್ರಮುಖ ಸಪ್ತಾಂಶಗಳ ಮಹತ್ವಾಕಾಂಕ್ಷಿ ಯೋಜನೆಯೇ ಸಂಕಲ್ಪದಿಂದ ಸಿದ್ಧಿ.

ಉತ್ತರ ಕರ್ನಾಟಕಕ್ಕೆ ಅನ್ಯಾಯ

ಸತತ ಮೂರು ವರ್ಷಗಳ ಭೀಕರ ಬರದಿಂದ ಜನ, ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ರೈತರ ಬದುಕು ಬರಿದಾಗಿದೆ. ಅವರ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಂತಾಗಿದ್ದು, ಈ ಭಾಗಕ್ಕೆ ನಿರಂತರ ಅನ್ಯಾಯವಾಗುತ್ತಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಸಭೆ ಸದಸ್ಯ ಹಾಗೂ ಕೆಎಲ್​ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ವಿಷಾದಿಸಿದರು. ಸಚಿವರಾದ ಅನಂತಕುಮಾರ್ ಕೂಡ ಹುಬ್ಬಳ್ಳಿಯಲ್ಲಿ ಜನಿಸಿ ಈ ಭಾಗದಲ್ಲಿಯೆ ಬೆಳೆದಿದ್ದಾರೆ. ಹಾಗಾಗಿ ಅವರಾದರೂ ಈ ಭಾಗದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಡಾ. ಕೋರೆ ಮನವಿ ಮಾಡಿದರು.

Leave a Reply

Your email address will not be published. Required fields are marked *

Back To Top