Tuesday, 17th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

Tuesday, 09.01.2018, 3:01 AM       No Comments

ಚಿಕ್ಕಮಗಳೂರು: ಮೂಡಿಗೆರೆ ಡಿಎಸ್​ಬಿಜಿ ಕಾಲೇಜಿನ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದ್ದು, ಕೆಲ ಸಂಘಟನೆಗಳ ನೈತಿಕ ಪೊಲೀಸ್​ಗಿರಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಮೂಡಿಗೆರೆ ನಗರಾಧ್ಯಕ್ಷ ಎಂ.ವಿ.ಅನಿಲ್ ಎಂಬಾತನನ್ನು ಬಂಧಿಸಲಾಗಿದೆ.

‘ಕೆಲ ಸಂಘಟನೆಯ ಮುಖಂಡರು ಮನೆ ಬಳಿಗೆ ಬಂದು ನನಗೆ ಹಾಗೂ ನನ್ನ ತಾಯಿಗೆ ಧಮ್ಕಿ ಹಾಕಿ, ಲವ್ ಜಿಹಾದ್​ಗೆ ಅವಕಾಶ ಮಾಡಿಕೊಟ್ಟಂತಾಗುತ್ತಿದೆ ಎಂದು ಹೇಳಿದ್ದರು. ಹಾಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆದಿರುವ ಡೆತ್​ನೋಟ್ ಸಿಕ್ಕಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಐವರ ಗುಂಪಿನ ಸದಸ್ಯರಲ್ಲೊಬ್ಬನಾದ ಅನಿಲ್​ನನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಧನ್ಯಶ್ರೀ ಹಾಗೂ ಅನ್ಯಧರ್ವಿುಯ ಯುವಕನ ಚಿತ್ರಸಹಿತ ಮಾಹಿತಿ ಹಾಕಿದವರ ಹುಡುಕಾಟ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೂಡಿಗೆರೆ ಛತ್ರ ಮೈದಾನ ನಿವಾಸಿಯಾದ ಧನ್ಯಶ್ರೀ, ಅನ್ಯಧರ್ವಿುಯ ಯುವಕನ ಜತೆ ಗೆಳೆತನ ಬೆಳೆಸಿದ್ದ ಕುರಿತು ಆಕೆ ಹಾಗೂ ಆಕೆಯ ಸ್ನೇಹಿತನ ನಡುವೆ ವಾಟ್ಸ್ ಆಪ್​ನಲ್ಲಿ ತುಳು ಭಾಷೆಯಲ್ಲಿ ವಾಗ್ವಾದ ನಡೆದಿತ್ತು. ತಾನು ಅನ್ಯಧರ್ಮದವರನ್ನು ಇಷ್ಟಪಡುವುದಾಗಿ ಆಕೆ ತಿಳಿಸಿದ್ದಳು. ಈ ಹಂತದಲ್ಲಿ ಅನ್ಯಧರ್ವಿುಯ ಹುಡುಗನ ಜತೆಗೆ ಓಡಾಡದಂತೆ ಧನ್ಯಶ್ರೀಗೆ ಸ್ನೇಹಿತ ವಾಟ್ಸ್ ಆಪ್​ನಲ್ಲಿ ಧಮ್ಕಿ ಹಾಕಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಆಕೆ, ಅನ್ಯ ಸಮುದಾಯದವನನ್ನೇ ಪ್ರೀತಿಸುವುದಾಗಿ ಮರುಸಂದೇಶ ಕಳಿಸಿದ್ದಳು. ಧನ್ಯಶ್ರೀ ಹಾಗೂ ಆತ ನಡೆಸಿರುವ ವಾಟ್ಸ್ ಆಪ್ ಸಂದೇಶಗಳ ಸ್ಕ್ರೀನ್​ಶಾಟ್ ಅನ್ನು ಮೂಡಿಗೆರೆ ಹಿಂದುಪರ ಸಂಘಟನೆಗಳ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬೆಳವಣಿಗೆ ಬಳಿಕ ಜ.6ರಂದು ರಾತ್ರಿ 10 ಗಂಟೆ ಸುಮಾರಿಗೆ ತನ್ನ ಮನೆಯಲ್ಲೇ ಧನ್ಯಶ್ರೀ ನೇಣಿಗೆ ಶರಣಾಗಿದ್ದಳು. ಮೊಬೈಲ್ ವಿಚಾರವಾಗಿ ತಂದೆ ನಿಂದಿಸಿದ ಕಾರಣಕ್ಕೆ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಕರಣ ದಾಖಲಿಸಲಾಗಿತ್ತು.

Leave a Reply

Your email address will not be published. Required fields are marked *

Back To Top