Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ವಿದೇಶದಿಂದಲೇ ಸ್ವದೇಶದಲ್ಲಿ ಮತ

Saturday, 22.07.2017, 3:00 AM       No Comments

ನವದೆಹಲಿ: ಅನಿವಾಸಿ ಭಾರತೀಯರು ಮತದಾನಕ್ಕಾಗಿ ಭಾರತಕ್ಕೆ ಬಂದು ಹೋಗಬೇಕಿಲ್ಲ. ಅವರು ಇರುವ ದೇಶದಿಂದಲೇ ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ದಿನಗಳು ಇನ್ನು ಕೆಲ ತಿಂಗಳಲ್ಲಿ ಬರಲಿದೆ! ಅನಿವಾಸಿ ಭಾರತೀಯರಿಗೆ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

ಸುಪ್ರೀಂಕೋರ್ಟ್​ಗೆ ಈ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್, ವಿದೇಶದಲ್ಲಿರುವ ಭಾರತೀಯರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಕಾನೂನಿಗೆ ತಿದ್ದುಪಡಿ ತರುವ ಕುರಿತು ಈಗಾಗಲೇ ಸಚಿವರ ತಂಡ ರ್ಚಚಿಸಿದೆ. 1950ರ ಜನಪ್ರತಿನಿಧಿ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ವಿದೇಶದಿಂದಲೇ ಭಾರತೀಯ ಚುನಾವಣೆಗೆ ಮತದಾನ ಮಾಡುವ ಸೌಲಭ್ಯ ಒದಗಿಸಲಾಗುವುದು ಎಂದು ಕೋರ್ಟ್​ಗೆ ಅವರು ತಿಳಿಸಿದ್ದಾರೆ.

ಎನ್​ಆರ್​ಐಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ಸಂದರ್ಭ ಸರ್ಕಾರ ಸುಪ್ರೀಂಗೆ ಈ ಮಾಹಿತಿ ನೀಡಿದೆ. -ಏಜೆನ್ಸೀಸ್

 10 ಲಕ್ಷಕ್ಕೂ ಅಧಿಕ ಎನ್​ಆರ್​ಐಗಳು

ಪ್ರಸ್ತುತ 10 ಲಕ್ಷಕ್ಕೂ ಅಧಿಕ ಎನ್​ಆರ್​ಐಗಳಿದ್ದು, ಅವರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ಸರಾಸರಿ 10 ಸಾವಿರ ಜನರು ಚುನಾವಣೆ ವೇಳೆ ಭಾರತಕ್ಕೆ ಬಂದು ಮತದಾನ ಮಾಡುತ್ತಾರೆ. ಶೇ. 90 ಅನಿವಾಸಿ ಭಾರತೀಯರು ಅರ್ಹತೆಯಿದ್ದರೂ, ಮತದಾನದಿಂದ ವಂಚಿತರಾಗುತ್ತಿದ್ದಾರೆ.

 ಏನಿದು ಪ್ರಕರಣ?

ಎನ್​ಆರ್​ಐಗಳಿಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಕೋರಿ 2014ರಲ್ಲಿ ಅನಿವಾಸಿ ಭಾರತೀಯರಾದ ಕೇರಳದ ಶಂಶೀರ್ ವಿ.ಪಿ, ಇಂಗ್ಲೆಂಡ್ ಮೂಲದ ಪ್ರವಾಸಿ ಭಾರತ್​ನ ಚೇರ್ಮನ್ ನಾಗೇಂದ್ರ ಚಿಂದಂ ಅರ್ಜಿ ಸಲ್ಲಿಸಿದ್ದರು. ಅಮೆರಿಕದಲ್ಲಿ ಅನಿವಾಸಿ ಪ್ರಜೆಗಳಿಗೆ ಜಗತ್ತಿನ ಎಲ್ಲಿದ್ದರೂ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಭಾರತೀಯರಿಗೆ ಸರ್ಕಾರ ಈ ವ್ಯವಸ್ಥೆ ಕಲ್ಪಿಸಬೇಕು ಎಂದು ಚಿಂದಂ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.

 ಈ ಅಧಿವೇಶನದಲ್ಲಿ ಮಂಡನೆಯಿಲ್ಲ

ಕಾನೂನಿಗೆ ತಿದ್ದುಪಡಿ ತರುವ ಸಂಬಂಧ ಕರಡು ರೂಪಿಸಲಾಗುತ್ತಿದೆ. ಈಗ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸಾಧ್ಯವಿಲ್ಲ. ಎಲ್ಲ ಸಾಧ್ಯತೆ, ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸ ಲಾಗುವುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಅವರಿಗೆ ಅಟಾರ್ನಿ ಜನರಲ್ ವೇಣುಗೋಪಾಲ್ ತಿಳಿಸಿದ್ದಾರೆ.

ಈಗಿನ ನಿಯಮ ಏನು?

ಪ್ರಸ್ತುತ ಕಾನೂನು ಪ್ರಕಾರ ಭಾರತದ ಪ್ರಜೆಗಳು ಅವರ ಕ್ಷೇತ್ರದ ನಿಗದಿತ ಬೂತ್​ನಲ್ಲಿಯೇ ಮತದಾನ ಮಾಡಬೇಕು. ಆದರೆ ಭದ್ರತಾ ಸಿಬ್ಬಂದಿ, ಚುನಾವಣಾ ಕರ್ತವ್ಯದ ಮೇಲೆ ಬೇರೆ ಊರುಗಳಿಗೆ ತೆರಳುವ ಸಿಬ್ಬಂದಿಗೆ ಮಾತ್ರ ಅಂಚೆ ಮೂಲಕ ಮತ ಚಲಾಯಿಸುವ ಸೌಲಭ್ಯವಿದೆ. ಇನ್ನುಳಿದ ಮತದಾರರು ತಮ್ಮ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಬೇಕು.

 ಮತದಾನ ಹೇಗೆ?

ಎನ್​ಆರ್​ಐಗಳಿಗೆ ವಿದೇಶದಿಂದಲೇ ಮತದಾನಕ್ಕೆ ಅವಕಾಶ ನೀಡಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡಿದೆ. ಎನ್​ಆರ್​ಐಗಳಿಗೆ ಇ-ಬ್ಯಾಲೆಟ್ ಪೇಪರ್ ಕಳುಹಿಸಿಕೊಟ್ಟು, ಅವರು ಮತದಾನ ಮಾಡಿದ ಬಳಿಕ ಅದನ್ನು ವಾಪಸ್ ಮಾಡುವ ಕ್ರಮ ಅಳವಡಿಸಿಕೊಳ್ಳಬಹುದು. ಪ್ರಾಕ್ಸಿ ಮತ್ತು ಇ-ಪೋಸ್ಟಲ್ ಬ್ಯಾಲೆಟ್ ಮತದಾನಕ್ಕೆ ಅವಕಾಶ ನೀಡಬಹುದು. ಇಂಟರ್​ನೆಟ್, ವಿದೇಶದಲ್ಲಿನ ರಾಜತಾಂತ್ರಿಕ ಕಚೇರಿಗಳಲ್ಲಿ ಮತದಾನದ ಅವಕಾಶ ನೀಡಬಹುದು ಎಂದು ಆಯೋಗ ಹೇಳಿತ್ತು.

ಯಾವ ದೇಶದಲ್ಲಿ ಹೇಗಿದೆ ವ್ಯವಸ್ಥೆ?

  • ಬ್ರಿಟನ್, ಜರ್ಮನಿ, ಸ್ಪೇನ್, ಡೆನ್ಮಾರ್ಕ್, ನೆದರ್​ಲ್ಯಾಂಡ್, ನಾರ್ವೆ, ಸ್ವಿಜರ್​ಲ್ಯಾಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಜ್​ನಲ್ಲಿ ಇಂಟರ್​ನೆಟ್ ಮೂಲಕ ಮತ ಹಾಕಬಹುದು. ಅಮೆರಿಕದಲ್ಲಿ ಗಗನಯಾತ್ರಿಕರೂ ಮತ ಚಲಾಯಿಸುವ ಸೌಲಭ್ಯವಿದೆ.
  • ಬ್ರಿಟನ್ ಪ್ರಜೆಗಳು ಸಂಸತ್ ಚುನಾವಣೆ ಮತದಾನಕ್ಕೆ ಕಳೆದ 15 ವರ್ಷಗಳಿಂದ ಆನ್​ಲೈನ್ ಮತ್ತು ಮೆಸೇಜ್ ಮೂಲಕ ಅವಕಾಶ ಕಲ್ಪಿಸಿದೆ. ಆದರೆ ಸ್ಥಳೀಯಾಡಳಿತದ ಚುನಾವಣೆಗೆ ಈ ಸೌಲಭ್ಯ ಇಲ್ಲ
  • ಫ್ರಾನ್ಸ್​ನಲ್ಲಿ ಅನಿವಾಸಿ ಪ್ರಜೆಗಳಿಗೆ ಆನ್​ಲೈನ್ ಮೂಲಕ ಮತದಾನಕ್ಕೆ ಅವಕಾಶವಿದೆ. ಇ ಮೇಲ್, ಸ್ಥಳೀಯ ರಾಯಭಾರ ಕಚೇರಿ ಮೂಲಕ ಮತ ಚಲಾಯಿಸಬಹುದು.
  • ಡಚ್ ಪ್ರಜೆಗಳು ಇ ಮೇಲ್ ಅಥವಾ ಆನ್​ಲೈನ್ ಮೂಲಕ, ಇಲ್ಲವೇ ಪ್ರತಿನಿಧಿ ಮೂಲಕ ಮತಚಲಾಯಿಸಬಹುದು.
  • ಇಟಲಿಯಲ್ಲಿ ಇ ಮೇಲ್ ಮೂಲಕ ಮತಚಲಾಯಿಸಲು ಅವಕಾಶವಿದೆ.
  • ಜಗತ್ತಿನ 93 ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ವಿದೇಶದಿಂದ ಮತದಾನ ಮಾಡಲು ಅವಕಾಶ ಕಲ್ಪಿಸಿವೆ.

Leave a Reply

Your email address will not be published. Required fields are marked *

Back To Top