Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

ವಿದರ್ಭಕ್ಕೆ ಅಭಿಮನ್ಯು ಮಿಥುನ್ ಕಡಿವಾಣ

Monday, 18.12.2017, 3:03 AM       No Comments

ಕೋಲ್ಕತ: ವೇಗಿ ಅಭಿಮನ್ಯು ಮಿಥುನ್ (45ಕ್ಕೆ 5) ಕಬಳಿಸಿದ ಹಾಲಿ ಋತುವಿನ 3ನೇ 5 ವಿಕೆಟ್ ಗೊಂಚಲಿನ ನೆರವಿನಿಂದ ಕರ್ನಾಟಕ ತಂಡ 84ನೇ ಆವೃತ್ತಿಯ ರಣಜಿ ಟ್ರೋ? ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡಕ್ಕೆ ಕಡಿವಾಣ ಹಾಕಿದೆ. ಆದರೆ ಪ್ರತಿಯಾಗಿ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಕೂಡ ಆರಂಭಿಕ ಆಘಾತ ಎದುರಿಸಿದೆ. ಇದರಿಂದ ಮೊದಲ ಇನಿಂಗ್ಸ್ ಮುನ್ನಡೆಯ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ ಪಂದ್ಯದ ಮೊದಲ ದಿನವೇ ಒಟ್ಟಾರೆ 13 ವಿಕೆಟ್ ಉರುಳಿತು. ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ವಿದರ್ಭ ಚಹಾ ವಿರಾಮದ ವೇಳೆಗೆ 61.4 ಓವರ್​ಗಳಲ್ಲಿ 185 ರನ್​ಗೆ ಸರ್ವಪತನ ಕಂಡಿತು. ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ 14 ಓವರ್​ಗಳಲ್ಲೇ 36 ರನ್​ಗೆ 3 ವಿಕೆಟ್ ಕಳೆದುಕೊಂಡಿದೆ. ರಾಜ್ಯ ತಂಡ ಇನ್ನೂ 149 ರನ್ ಹಿನ್ನಡೆಯಲ್ಲಿದ್ದು, ಉಪನಾಯಕ ಕರುಣ್ ನಾಯರ್ (6) ಮತ್ತು ಸಿಎಂ ಗೌತಮ್ (9) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸಂಜೆ 12 ಎಸೆತಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡು ಕರ್ನಾಟಕ ತಂಡ ತತ್ತರಿಸಿತು. ಸಮರ್ಥ್ (6) ಮತ್ತು ನಿಶ್ಚಲ್ ಡಿ. (0) ಸತತ 2 ಓವರ್​ಗಳಲ್ಲಿ ಗುರ್ಬಾನಿಗೆ ವಿಕೆಟ್ ಒಪ್ಪಿಸಿದರು. ಇದರ ನಡುವೆ, ಪ್ರಚಂಡ ಫಾಮರ್್​ನಲ್ಲಿರುವ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್, ಭಾರತ ಟೆಸ್ಟ್ ತಂಡದ ವೇಗಿ ಉಮೇಶ್ ಯಾದವ್ ಎಸೆತದಲ್ಲಿ ಔಟಾದರು. -ಏಜೆನ್ಸೀಸ್

ಮಿಥುನ್ ಸ್ಪೀಡ್​ಬ್ರೇಕ್

ವಿದರ್ಭ ತಂಡಕ್ಕೆ ರಾಜ್ಯದ ವೇಗದ ಬೌಲರ್ ಪಡೆಯೇ ಮಾರಕವಾಗಿ ಪರಿಣಮಿಸಿತು. ಮಿಥುನ್​ಗೆ ನಾಯಕ ವಿನಯ್ಕುಮಾರ್ (36ಕ್ಕೆ 2) ಉತ್ತಮ ಸಾಥ್ ನೀಡಿದರು. ಆರಂಭಿಕರಾದ ಫೈಜ್ ಫಜಲ್ (12), ರಾಮಸ್ವಾಮಿ (22) ಬೇಗನೆ ಔಟಾದರೂ ವಿದರ್ಭ ತಂಡ ಭೋಜನ ವಿರಾಮದ ವೇಳೆಗೆ 2 ವಿಕೆಟ್​ಗೆ 94 ರನ್ ಗಳಿಸಿ ಚೇತರಿಕೆಯ ನಿರೀಕ್ಷೆಯಲ್ಲಿತ್ತು. ಆದರೆ ಭೋಜನ ವಿರಾಮದ ಬಳಿಕ 3ನೇ ಓವರ್​ನಲ್ಲೇ ಮಿಥುನ್ ವಿದರ್ಭ ದಿಕ್ಕುತಪ್ಪಿಸಿದರು. ಕರ್ನಾಟಕ ಮೂಲದ ಗಣೇಶ್ ಸತೀಶ್ (31) ಮಿಥುನ್​ಗೆ ಮೊದಲ ಬಲಿಯಾದರು. ಅನುಭವಿ ವಾಸಿಂ ಜಾಫರ್ ಗೆ ಎಸ್. ಅರವಿಂದ್ ಪೆವಿಲಿಯನ್ ಹಾದಿ ತೋರಿದರು. 3ನೇ ಸ್ಪೆಲ್​ನಲ್ಲಿ ವಿದರ್ಭಕ್ಕೆ ಮತ್ತಷ್ಟು ಪೆಟ್ಟು ನೀಡಿದ ಮಿಥುನ್, ವಾಖರೆ (18), ಗುಬಾನಿ (0) ವಿಕೆಟ್​ಗಳನ್ನು ಸತತ ಎಸೆತಗಳಲ್ಲಿ ಕಬಳಿಸಿ ಹ್ಯಾಟ್ರಿಕ್ ಅವಕಾಶವನ್ನೂ ಪಡೆದಿದ್ದರು. ಉಮೇಶ್ ಯಾದವ್ ಹ್ಯಾಟ್ರಿಕ್ ತಪ್ಪಿಸಿದರೂ, ಕೊನೆಗೆ ಮಿಥುನ್​ಗೇ ವಿಕೆಟ್ ಒಪ್ಪಿಸಿದರು. ತಂಡದ ಮೊತ್ತ 200ರ ಗಡಿ ದಾಟಿಸಲು ಪ್ರಯತ್ನಿಸುತ್ತಿದ್ದ ಟಾಪ್ ಸ್ಕೋರರ್ (47) ವಿಕೆಟ್ ಕೊನೆಯಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಪಾಲಾಯಿತು.

ಅರ್ಧ ಗಂಟೆ ವಿಳಂಬ

ಕೋಲ್ಕತ 25ಕೆ ಓಟದ ಕಾರಣದಿಂದಾಗಿ ಉಂಟಾದ ಟ್ರಾಫಿಕ್​ ಜಾಮ್​ನಲ್ಲಿ ವಿದರ್ಭ ತಂಡ ಸಿಲುಕಿಕೊಂಡಿದ್ದ ಕಾರಣ ಕರ್ನಾಟಕ ವಿರುದ್ಧದ ಸೆಮಿಫೈನಲ್ ಪಂದ್ಯ ಅರ್ಧಗಂಟೆ ತಡವಾಗಿ ಆರಂಭಗೊಂಡಿತು. ಈಡನ್ ಗಾರ್ಡನ್ಸ್ ಸಮೀಪದಲ್ಲೇ ಈ ಕೂಟ ನಡೆಯುತ್ತಿತ್ತು. ಹೀಗಾಗಿ, 4 ಕಿಮೀ. ದೂರದ ತಾಜ್ ಬೆಂಗಾಲ್ ಹೋಟೆಲ್​ನಲ್ಲಿ ಉಳಿದುಕೊಂಡಿದ್ದ ವಿದರ್ಭ ತಂಡದ ಆಟಗಾರರು ಕ್ರೀಡಾಂಗಣಕ್ಕೆ ಆಗಮಿಸುವ ದಾರಿ ಮಧ್ಯೆ ಟ್ರಾಫಿಕ್​ ಜಾಮ್​ನಲ್ಲಿ ಸಿಲುಕಿಕೊಂಡರು. ಅವರು ಕ್ರೀಡಾಂಗಣಕ್ಕೆ ಆಗಮಿಸುವಾಗಲೇ 8.45 ಆಗಿತ್ತು. ಇದರಿಂದಾಗಿ ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಬೇಕಿದ್ದ ಪಂದ್ಯ ಕೊನೆಗೆ 9.30ಕ್ಕೆ ಆರಂಭಗೊಂಡಿತ್ತು. ಸಮೀಪದ ಹೋಟೆಲ್​ನಲ್ಲೇ ಉಳಿದುಕೊಂಡಿದ್ದ ಕರ್ನಾಟಕ ತಂಡದ ಆಟಗಾರರಿಗೆ ಯಾವುದೇ ಟ್ರಾಫಿಕ್​ ಅಡೆತಡೆ ಉಂಟಾಗಿರಲಿಲ್ಲ.

ಉತ್ತಮ ಮೊತ್ತದತ್ತ ಬಂಗಾಳ ತಂಡ

ಪುಣೆಯಲ್ಲಿ ನಡೆಯುತ್ತಿರುವ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ದೆಹಲಿ ವಿರುದ್ಧ ಬಂಗಾಳ ಉತ್ತಮ ಮೊತ್ತದತ್ತ ಮುನ್ನಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಬಂಗಾಳ, ಸುದೀಪ್ ಚಟರ್ಜಿ (83) ಆಸರೆಯಲ್ಲಿ ದಿನದಂತ್ಯಕ್ಕೆ 7 ವಿಕೆಟ್​ಗೆ 269 ರನ್ ಗಳಿಸಿದೆ.

Leave a Reply

Your email address will not be published. Required fields are marked *

Back To Top