Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ವಿಜ್ಞಾನ ಕೌತುಕದ ಆಝಿನೇರ್

Wednesday, 12.09.2018, 3:00 AM       No Comments

ರಾಜಾಜಿನಗರದ ಕೆಎಲ್​ಇ ಪಿಯು ಕಾಲೇಜು ಮಂಗಳವಾರ ಅಂತರ ಶಾಲಾ-ಕಾಲೇಜು ವಿಜ್ಞಾನ ವಸ್ತುಪ್ರದರ್ಶನ ‘ಆಝಿನೇರ್’ ಆಯೋಜಿಸಿತ್ತು. 90 ಶಾಲೆ ಮತ್ತು 45ಕ್ಕೂ ಹೆಚ್ಚು ಪಿಯು ಕಾಲೇಜುಗಳಿಂದ ಒಂದು ಸಾವಿರಕ್ಕೂ ಅಧಿಕ ವಿಜ್ಞಾನದ ಪ್ರಯೋಗ ಮಾದರಿಗಳನ್ನು ಪ್ರದರ್ಶಿಸಲಾಗಿತ್ತು. ಮಳೆ ನೀರಿನ ಸಂರಕ್ಷಣೆ, ರಸ್ತೆ ಸುರಕ್ಷತೆ, ಕಂಪ್ಯೂಟರ್ ವಿಶ್ಲೇಷಣೆ ಸೇರಿ ವಿವಿಧ ರೀತಿಯ ಪ್ರಯೋಗಗಳು ಅನಾವರಣಗೊಂಡಿದ್ದವು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳ ಅನಾವರಣಕ್ಕಾಗಿ ಈ ವಸ್ತುಪ್ರದರ್ಶನ ಆಯೋಜಿಸಿದ್ದೇವೆ. ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ. ಇದರ ಮುಖ್ಯ ಉದ್ದೇಶ ಮೂಲ ವಿಜ್ಞಾನದ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸುವುದಾಗಿದೆ. ಆ ಮೂಲಕ ಭವಿಷ್ಯದ ವಿಜ್ಞಾನಗಳನ್ನು ರೂಪಿಸುತ್ತೇವೆ. ನವೆಂಬರ್​ನಲ್ಲಿ ನಾಗರಬಾವಿಯ ಕೆಎಲ್​ಇ ಕಾಲೇಜಿನಲ್ಲಿ ಮತ್ತೊಮ್ಮೆ ವಿಜ್ಞಾನದ ವಸ್ತುಪ್ರದರ್ಶನ ಆಯೋಜಿಸಲಾಗುವುದು ಎಂದು ಕೆಎಲ್​ಇ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜು ಬಿ. ಕಟ್ಟಿ ಹೇಳಿದರು. ವಿಜ್ಞಾನ ವಸ್ತುಪ್ರದರ್ಶನ ಚಿತ್ರಾವಳಿ ಇಲ್ಲಿದೆ..

Leave a Reply

Your email address will not be published. Required fields are marked *

Back To Top