Monday, 22nd January 2018  

Vijayavani

ಸರಹದ್ದು ಮೀರಿ ವರ್ತಿಸ್ತಿದೆ ಪಾಪಿ ಪಾಕ್​- ಐದು ದಿನಗಳಿಂದ ಗುಂಡಿನ ದಾಳಿಗೆ ಪರಿಸ್ಥಿತಿ ಉಲ್ಭಣ- ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣ        ದಾವೋಸ್​ನಲ್ಲಿ 48ನೇ ವಿಶ್ವ ಆರ್ಥಿಕ ವೇದಿಕೆ ಸಮಾವೇಶ- ಸ್ವಿಸ್​ಗೆ ಹಾರಿದ ಪ್ರಧಾನಿ ಮೋದಿ- ವಿದೇಶಿ ಬಂಡವಾಳ ಸೆಳೆಯುವತ್ತ ಹಲವುಸೂತ್ರ        ಗ್ಯಾಸ್​ ರೀಫಿಲ್ಲಿಂಗ್ ವೇಳೆ ಲೀಕ್​ಆಗಿ ಹೊತ್ತಿಕೊಂಡ ಬೆಂಕಿ- ಆರು ಜನರಿಗೆ ಗಂಭೀರ ಗಾಯ- ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ        ಬೀದರ್​ನಲ್ಲಿ ವೀರಭದ್ರನ ಪಲ್ಲಕ್ಕಿ ಉತ್ಸವ- ಶಸ್ತ್ರಧಾರಣೆ ಮೂಲಕ ಭಕ್ತಿಯ ಪರಾಕಷ್ಠೆ- ಅತ್ತ ಮಂಗಳೂರಿನಲ್ಲಿ ಕಲವರದ ಪುತ್ತೂರು ಕಂಬಳ        ರಿಲೀಸ್​ ಡೇಟ್ ಫಿಕ್ಸ್​ ಆದ್ರೂ ಪದ್ಮಾವತ್​​ಗೆ ಸಂಕಷ್ಟ- 25ಕ್ಕೆ ಬಿಡುಗಡೆಯಾದ್ರೆ ದೇಶಾದ್ಯಂತ ಬಂದ್​- ಕರ್ಣಿಸೇನಾ ರಕ್ತಪಾತದ ಡೈಲಾಗ್​ಗೆ ಬೆವರಿದ ಬನ್ಸಾಲಿ       
Breaking News :

ವಿಜಯ್ ಜತೆ ಸಮಂತಾ ರೊಮ್ಯಾನ್ಸ್

Monday, 15.05.2017, 3:00 AM       No Comments

ಟಾಲಿವುಡ್​ನ ಯುವ ಜೋಡಿಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು ನಿಶ್ಚಿತಾರ್ಥ ಕಳೆದ ಜ. 29ರಂದು ನಡೆದಿದ್ದು, ಮುಂಬರುವ ಅಕ್ಟೋಬರ್​ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವುದು ಜಗಜ್ಜಾಹೀರಾಗಿದೆ. ಈ ಜೋಡಿ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ಹಿರಿಯರ ಆಶಿವಾದ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮದುವೆಗೆ ಕೆಲವೇ ತಿಂಗಳು ಬಾಕಿಯಿರುವುದರಿಂದ ಉಭಯ ಕುಟುಂಬದಲ್ಲಿಯೂ ಮದುವೆಗೆ ಭರದ ತಯಾರಿ ನಡೆಯುತ್ತಿದೆ. ಆದರೆ, ಈ ಗ್ಯಾಪ್​ನಲ್ಲಿ ಸಮಂತಾ ನಟ ವಿಜಯ್ ದೇವರಕೊಂಡ ಜತೆಗೆ ರೋಮ್ಯಾನ್ಸ್ ಮಾಡಲು ನಿರ್ಧರಿಸಿದ್ದಾರೆ!

30ರ ಹರೆಯದ ನಟಿ ತೆಲುಗು, ತಮಿಳು ಭಾಷೆಗಳಲ್ಲಿ ಸದ್ಯ 6 ಚಿತ್ರದಲ್ಲಿ ಅಭಿನಯಿಸುವ ಮೂಲಕ ‘ಸಿಕ್ಸರ್’ ಬಾರಿಸುತ್ತಿದ್ದಾರೆ. ಈ ಮೂಲಕ ‘ವೈಯಕ್ತಿಕ ಜೀವನದಷ್ಟೇ ಸಿನಿಮಾ ಕರಿಯರ್ ಸಹ ಮುಖ್ಯ’ ಎನ್ನುವುದನ್ನು ಸಮಂತಾ ಪರೋಕ್ಷವಾಗಿ ಸಾಬೀತು ಮಾಡಿದ್ದಾರೆ. ‘ಇರುಂಬು ತಿರೈ’, ‘ಅನಿಥಿ ಕಥೈಗಲ್’, ‘ವಿಜಯ್ 61’, ‘ರಾಜು ಗರಿ ಗಢಿ 2’, ‘ಆರ್​ಸಿ 11’ ಹಾಗೂ ‘ಮಹಂತಿ’ ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ.

ಬಹುಭಾಷಾ ನಟಿ, ನೃತ್ಯಗಾರ್ತಿ ಸಾವಿತ್ರಿಯ ಜೀವನಾಧಾರಿತ ‘ಮಹಂತಿ’ಚಿತ್ರದಲ್ಲಿ ಸಾವಿತ್ರಿ ಪಾತ್ರವನ್ನು ಕೀರ್ತಿ ಸುರೇಶ್ ನಿರ್ವಹಿಸುತ್ತಿದ್ದು, ಪತಿಯ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಸಮಂತಾ ಸಹ ಬಣ್ಣಹಚ್ಚಿದ್ದು, ನಟ ವಿಜಯ್ ದೇವರಕೊಂಡ ಜತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ತಮಿಳು, ತೆಲುಗು ಎರಡು ಭಾಷೆಗೂ ಡಬ್ ಆಗಲಿರುವ ಈ ಚಿತ್ರದಲ್ಲಿ ಸಮಂತಾ ಪಾತ್ರ ಯಾವುದೆನ್ನುವುದು ಸದ್ಯದ ಕುತೂಹಲ. ಮೂಲಗಳ ಪ್ರಕಾರ, ಸಮಂತಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ! – ಏಜೆನ್ಸೀಸ್

 

 

Leave a Reply

Your email address will not be published. Required fields are marked *

Back To Top