Thursday, 29th June 2017  

Vijayavani

1. ಗಣಿಗಾರಿಕೆ ವಿರುದ್ಧದ ಕ್ರಮಕ್ಕೆ ವರ್ಗಾವಣೆ ಭಾಗ್ಯ- ಒಂದೇ ತಿಂಗಳಿಗೆ ಕುಣಿಗಲ್​​​​​​ ತಹಶೀಲ್ದಾರ್​​​ ಟ್ರಾನ್ಸ್​​ಫರ್​​- ಅಕ್ರಮ ಗಣಿಗಾರಿಕೆ ಸುದ್ದಿ ಭಿತ್ತರಿಸಿದ್ದ ದಿಗ್ವಿಜಯ ನ್ಯೂಸ್​ 2. ಮುಂದಿನ ಸಿಎಂ ಅಭ್ಯರ್ಥಿ ಕುರಿತು ಚರ್ಚೆಯಾಗಿಲ್ಲ- ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ- ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್​.ಆರ್​.ಪಾಟೀಲ್​​ ವಿಶ್ವಾಸ 3. ಪತ್ರಕರ್ತ ರವಿ ಬೆಳೆಗೆರೆ ಜೈಲು ಶಿಕ್ಷೆ ವಿಚಾರ- ಸಿಎಂ ಮನವಿ ಮೇರೆಗೆ ಬಂಧಿಸದಂತೆ ಸೂಚನೆ- ಪೊಲೀಸರಿಗೆ ಸೂಚನೆ ನೀಡಿದ ಸ್ಪೀಕರ್​​​​​​​ ಕೋಳಿವಾಡ 4. ಕಲಬುರಗಿಯಲ್ಲಿ ಸರಣಿ ಕಳ್ಳತನ- ಹಲವು ಅಂಗಡಿಗಳಲ್ಲಿ ಲಕ್ಷಾಂತರ ರೂಪಾಯಿ ಕಳುವು- ಸಿಸಿಟಿವಿಯಲ್ಲಿ ಕಳ್ಳರ ದೃಶ್ಯ ಸೆರೆ 5. ಪ್ರಧಾನಿಗೆ ಮುಜುಗರ ತಂದ ಕೇಂದ್ರ ಕೃಷಿ ಸಚಿವ- ಸಾರ್ವಜನಿಕ ಸ್ಥಳದಲ್ಲಿ ಸಚಿವರ ಮೂತ್ರ ವಿಸರ್ಜನೆ- ರಾಧಾ ಮೋಹನ್​ ಸಿಂಗ್​ ನಡೆಗೆ ವ್ಯಾಪಕ ಖಂಡನೆ
Breaking News :

ವಾರ್ಷಿಕ ವೇಳಾಪಟ್ಟಿಯನ್ನೇ ಮರೆತ ಕೆಪಿಎಸ್​ಸಿ!

Friday, 21.04.2017, 3:00 AM       No Comments

|ರಾಜೀವ ಹೆಗಡೆ

ಬೆಂಗಳೂರು: ಆಯೋಗದಿಂದ ನಡೆಸುವ ಎಲ್ಲ ಪರೀಕ್ಷೆಗಳ ವೇಳಾಪಟ್ಟಿಯನ್ನು ಒಂದು ವರ್ಷ ಮೊದಲೇ ನೀಡಿದ್ದ ಕೆಪಿಎಸ್​ಸಿ (ಕರ್ನಾಟಕ ಲೋಕಸೇವಾ ಆಯೋಗ) ಈಗ ನಗೆಪಾಟಲಿಗೆ ಗುರಿಯಾಗಿದೆ.

ಒಂದು ವರ್ಷದಲ್ಲಿ ಕೆಪಿಎಸ್​ಸಿಯಿಂದ ಯಾವ್ಯಾವ ಪರೀಕ್ಷೆ, ಯಾವ ಸಮಯದಲ್ಲಿ ನಡೆಯುತ್ತವೆ ಎಂಬ ವಿವರವುಳ್ಳ ಸೂಚನಾ ಪತ್ರವೊಂದನ್ನು ಡಿಸೆಂಬರ್​ನಲ್ಲಿ ಪ್ರಕಟಿಸಲಾಗಿತ್ತು. ಇದನ್ನು ನಂಬಿ ಅಭ್ಯರ್ಥಿಗಳು ಪರೀಕ್ಷೆಗಳಿಗೆ ತಯಾರಿ ಆರಂಭಿಸಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಪರೀಕ್ಷೆ ನಿಗದಿತ ವೇಳಾಪಟ್ಟಿಯಂತೆ ನಡೆದಿಲ್ಲ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಇನ್ನೂ ಅಧಿಸೂಚನೆಯೇ ಹೊರಬಂದಿಲ್ಲ. ತಾಂತ್ರಿಕ ಹುದ್ದೆಗಳಿಗೆ ಫೆಬ್ರವರಿಯಲ್ಲೇ ಪರೀಕ್ಷೆ ನಡೆಯಬೇಕಿದ್ದರೂ ಈವರೆಗೂ ಅಂತಿಮ ವೇಳಾಪಟ್ಟಿ ಪ್ರಕಟವಾಗಿಲ್ಲ. ಸರ್ಕಾರದಿಂದ ಸೂಕ್ತ ಸಮಯಕ್ಕೆ ಪ್ರಸ್ತಾವನೆ ಬರದಿರುವುದರಿಂದ ವೇಳಾಪಟ್ಟಿ ಪ್ರಕಾರ ನಡೆಸಲಾಗುತ್ತಿಲ್ಲ ಎಂಬುದು ಕೆಪಿಎಸ್​ಸಿ ವಿವರಣೆ.

ಆಯೋಗವನ್ನು ಸರಿದಾರಿಗೆ ತರಲು ಹೆಣಗಾಡಿದ್ದ ಸರ್ಕಾರ, ಈಗ ತನ್ನದೇ ತಪ್ಪಿನಿಂದ ಅದನ್ನು ಮತ್ತೆ ಹಾಳುಗೆಡವುವ ಪ್ರಯತ್ನಕ್ಕೆ ಮುಂದಾಗಿದೆ. ಕೆಪಿಎಸ್​ಸಿ ಎಂದರೆ ಸರ್ಕಾರಿ ಉದ್ಯೋಗಗಳ ನೇಮಕ ಪ್ರಕ್ರಿಯೆ ವಿಳಂಬ ಮಾಡುವ ಸಂಸ್ಥೆ ಎಂಬ ಆರೋಪದಿಂದ ಮುಕ್ತವಾಗಲು ಆಯೋಗದ ಪ್ರತಿ ಹಂತದ ಕಡತ ವಿಲೇವಾರಿಗೂ ಕಾಲಮಿತಿ ನಿಗದಿ ಮಾಡಲಾಗಿದೆ. ಹಾಗೆಯೇ ಇಲಾಖೆಗಳಿಂದ ಪ್ರಸ್ತಾವನೆ ಬರುವುದಕ್ಕೂ ಕಾಲಮಿತಿ ಹಾಕಲಾಗಿತ್ತು. ಆದರೆ, ಆಯೋಗದ ಇದ್ಯಾವುದೇ ನಿಯಮಕ್ಕೆ ಸಿಬ್ಬಂದಿ ಮತ್ತು ಆಡಳಿತ ನಿರ್ವಹಣಾ ಇಲಾಖೆ ಸೇರಿ ಯಾವುದೇ ಇಲಾಖೆಗಳು ಸಹಕಾರ ನೀಡುತ್ತಿಲ್ಲ. ಕೆಪಿಎಸ್​ಸಿ ವೇಳಾಪಟ್ಟಿ ನಂಬಿ ಕುಳಿತಿರುವ ಉದ್ಯೋಗಿಗಳು ಸಹ ಕಂಗೆಡುವ ಸ್ಥಿತಿ ನಿರ್ವಣವಾಗಿದೆ.

ಕೆಪಿಎಸ್​ಸಿ ವೇಳಾಪಟ್ಟಿ ನೋಡಿಕೊಂಡು ಕೆಲಸ ಬಿಟ್ಟು ತರಬೇತಿ ಪಡೆಯುತ್ತಿದ್ದೇನೆ. ಆದರೆ, ಈ ವಿಳಂಬದಿಂದ ಜೀವನ ನಡೆಸುವುದು ಕಷ್ಟವಾಗುತ್ತದೆ. ಕೆಪಿಎಸ್​ಸಿ ಕೇಳಿದರೆ ಸರ್ಕಾರದತ್ತ ಬೊಟ್ಟು ಮಾಡುತ್ತದೆ. ನಾವೆಲ್ಲಿಗೆ ಹೋಗುವುದು?

| ಸಂತೋಷ್ ನಾಯಕ್ ಹುದ್ದೆ ಆಕಾಂಕ್ಷಿ

ಇಲಾಖೆ ಮೂಲಕವೇ ನೇಮಕ: ಕೆಪಿಎಸ್​ಸಿ ನೇಮಕ ಪ್ರಕ್ರಿಯೆ ವಿಳಂಬವಾಗುತ್ತದೆ ಎನ್ನುವ ಕಾರಣಕ್ಕೆ ಈಗ ಬಹುತೇಕ ಸರ್ಕಾರಿ ಇಲಾಖೆಗಳು ನೇರ ನೇಮಕಾತಿಗೆ ಮುಂದಾಗುತ್ತಿವೆ. ಹೋಟಾ ಸಮಿತಿ ಸರ್ಕಸ್, ಆಯೋಗದಲ್ಲಿನ ಅಕ್ರಮಗಳಿಗೆ ಕಡಿವಾಣ, ಅನೇಕ ಸುಧಾರಣೆಗಳ ಜತೆಗೆ, ಕಡತ ವಿಲೇವಾರಿಗೂ ಸಮಯ ನಿಗದಿ ಮಾಡಿದ ಬಳಿಕವೂ ಈ ಕ್ರಮ ಪ್ರಶ್ನಾರ್ಹವಾಗಿದೆ. ಇತ್ತೀಚೆಗೆ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್ ಹಾಗೂ ಆರೋಗ್ಯ ಇಲಾಖೆಯ ನಾನಾ ಹುದ್ದೆಗಳನ್ನು ಕೆಪಿಎಸ್​ಸಿ ಬಿಟ್ಟು ನೇರ ನೇಮಕಾತಿಗೆ ನಿರ್ಧರಿಸಿದೆ. ರಾಜ್ಯ ಸರ್ಕಾರದ ನಾನಾ ಇಲಾಖೆಗಳು ವೇಳಾಪಟ್ಟಿ ಪ್ರಕಾರ ನಡೆದುಕೊಂಡು ಪ್ರಸ್ತಾವನೆ ಸಲ್ಲಿಸಿದರೆ ವಿಳಂಬವಾಗದಂತೆ ನೇಮಕ ಪ್ರಕ್ರಿಯೆ ನಡೆಸುವುದು ಅಸಾಧ್ಯದ ಮಾತಲ್ಲ. ಆದರೆ ಆಯೋಗದ ಪತ್ರಗಳಿಗೆ ಸರ್ಕಾರಿ ಇಲಾಖೆಗಳು ಸ್ಪಂದಿಸದಿರುವುದು ಸಮಸ್ಯೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

2 × 1 =

Back To Top