Saturday, 16th December 2017  

Vijayavani

1. ಧಾರಾವಾಹಿ ನೋಡಿ ಹಂತಕನಾದ- ವೃದ್ಧನ ಕೊಲೆ ಮಾಡಿ 2 ಲಕ್ಷ ದೋಚಿದ- ಹತ್ಯೆಯಾದ ಎರಡನೇ ದಿನದಲ್ಲಿ ಆರೋಪಿ ಅಂದರ್ 2. ಎಂ.ಎಸ್. ಬಿಲ್ಡಿಂಗ್ ನವೀಕರಣ ವೇಳೆ ಅವಘಡ- ಗೋಡೆ ಕುಸಿದು ಕಾರ್ಮಿಕ ಸಾವು- ಕೂಲಿಗಾಗಿ ಬಂದು ಪ್ರಾಣ ಕಳೆದುಕೊಂಡ ಬಡಪಾಯಿ 3. ಮೊದಲ ಪತ್ನಿ ಇರೋವಾಗ್ಲೇ ಎರಡನೇ ಮದುವೆ- ಅಪ್ರಾಪ್ತೆಯೊಂದಿಗೆ ನಿರ್ವಾಹಕ ವಿವಾಹ- ಗುಂಡ್ಲುಪೇಟೆ ಕಂಡಕ್ಟರ್ ವಿರುದ್ಧ ಮೊದಲ ಪತ್ನಿ ದೂರು 4. ರವಿ ಬೆಳಗೆರೆಗೆ ಕೋರ್ಟ್ನಿಂದ ಮತ್ತೇ ರಿಲೀಫ್- ಮಧ್ಯಂತರ ಜಾಮೀನು ವಿಸ್ತರಣೆ- ಸೋಮವಾರದವರೆಗೆ ಬೆಳಗೆರೆ ಬಂಧಮುಕ್ತ 5. ಯೋಗೇಶ್ಗೌಡ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಬಿಜೆಪಿ ನಾಯಕರ ವಿರುದ್ಧವೇ ತಿರುಗಿಬಿದ್ದ ಮಲ್ಲಮ್ಮ- ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ದೂರು
Breaking News :

ವಾರ್ಡ್​ಗೊಂದು ಜನೌಷಧ ಮಳಿಗೆ

Wednesday, 28.12.2016, 4:00 AM       No Comments

ಬೆಂಗಳೂರು: ರಾಜ್ಯ ಸರ್ಕಾರ ಭೂಮಿ ನೀಡುವುದಾದರೆ ನಗರದಲ್ಲಿ ವಾರ್ಡ್​ಗೊಂದರಂತೆ ಜನೌಷಧ ಮಳಿಗೆ ಸ್ಥಾಪಿಸಲು ಸಿದ್ಧರಿರುವುದಾಗಿ ಕೇಂದ್ರ ಸಚಿವ ಅನಂತಕುಮಾರ್ ಘೊಷಿಸಿದ್ದಾರೆ.

ನಗರದಲ್ಲಿ ಮಂಗಳವಾರ ತಮ್ಮ ಅಧಿಕಾರವಧಿಯ 30 ತಿಂಗಳ ಸಾಧನೆಗಳ ಇ- ಪುಸ್ತಕವನ್ನು ಜನತೆಯ ಮುಂದೆ ಮಂಡಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ವಿವಿಧೆಡೆಯೂ ಜನೌಷಧ ಮಳಿಗೆ ಸ್ಥಾಪನೆಗೆ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದರು.

ತಿಂಗಳಲ್ಲಿ ಸಬ್​ಅರ್ಬನ್ ರೈಲು: ನಗರದ ಜನತೆಗೆ ಉಪ ನಗರ ರೈಲು ಸಂಚಾರ ಆರಂಭಿಸುವ ಕುರಿತಂತೆ ರೈಲ್ವೆ ಸಚಿವ ಸುರೇಶ್​ಪ್ರಭು ಅವರ ಜತೆ ಹಲವು ಬಾರಿ ಚರ್ಚೆ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಸಬ್​ಅರ್ಬನ್ ರೈಲು ಸಂಚಾರ ಆರಂಭವಾಗಲಿದ್ದು, ಇದಕ್ಕಾಗಿ ಪ್ರತ್ಯೇಕ ಮೆಮೋ ಬೋಗಿಗಳಿರುವ ರೈಲುಗಳು ಸಿದ್ಧಗೊಂಡಿವೆ. ಸಬ್ ಅರ್ಬನ್ ರೈಲು ಯೋಜನೆಗೆ ಕೆರೈಲ್ ಸಂಸ್ಥೆ 10 ಸಾವಿರ ಕೋಟಿ ರೂ. ಮೊತ್ತದ ಯೋಜನೆ ರೂಪಿಸಿದ್ದು, ಇದರ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಬಿ ರೈಡ್ ಸಂಸ್ಥೆ ಹುಟ್ಟು ಹಾಕುವಂತೆ ಮನವಿ ಮಾಡಿರುವುದಾಗಿಯೂ ಅನಂತಕುಮಾರ್ ವಿವರಿಸಿದರು.

ದೇಶದಲ್ಲಿ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಇತ್ತು. ಈ ಗೊಬ್ಬರಕ್ಕಾಗಿ ರೈತರು ಗಲಾಟೆ ಮಾಡುತ್ತಿದ್ದರು. ನಾನು ರಸಗೊಬ್ಬರ ಖಾತೆ ವಹಿಸಿಕೊಂಡ ನಂತರ ಯೂರಿಯಾ ಗೊಬ್ಬರಕ್ಕೆ ಬೇವನ್ನು ಲೇಪಿಸುವ ನಿರ್ಧಾರ ಮಾಡಲಾಯಿತು. ಇದರಿಂದ ಖಾಸಗಿ ರಸಗೊಬ್ಬರ, ಪ್ಲೈವುಡ್, ಬಣ್ಣದ ಕಾರ್ಖಾನೆಗಳಿಗೆ ಹಾಗೂ ಹಾಲಿನಲ್ಲಿ ಮಿಶ್ರಣ ಮಾಡಲು ಕಳ್ಳ ಮಾರ್ಗದಲ್ಲಿ ಸರಬರಾಜು ಆಗುತ್ತಿದ್ದ ಯೂರಿಯಾ ಗೊಬ್ಬರಕ್ಕೆ ಕಡಿವಾಣ ಬಿದ್ದಿದೆ. ಇದರಿಂದ 60 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಉಳಿದಿದೆ. ಇದರ ಒಟ್ಟು ಮೌಲ್ಯ 12 ಸಾವಿರ ಕೋಟಿ ರೂ.ಗಳು. ಆದ್ದರಿಂದಲೇ ರೈತರಿಗೆ ಸಾಲದ ರೂಪದಲ್ಲಿ ಮುಂಗಡವಾಗಿ ಯೂರಿಯಾ ಗೊಬ್ಬರ ನೀಡಿದ್ದೇವೆ ಎಂದರು. ದೇಶದ ಇತಿಹಾಸದಲ್ಲಿಯೇ 2ನೇ ಬಾರಿ ಗೊಬ್ಬರ ಗಳ ಬೆಲೆ ಕಡಿಮೆ ಮಾಡಲಾಗಿದೆ. ಇದರಿಂದ ರೈತರಿಗೆ 5 ಸಾವಿರ ಕೋಟಿ ರೂ. ಲಾಭವಾಗಿದೆ ಎಂದು ಅನಂತಕá-ಮಾರ್ ವಿವರಿಸಿದರು.

ಸಾಧನೆಗಳ ವಿವರ

  • ಕ್ಯಾನ್ಸರ್, ಹೃದ್ರೋಗ, ಮಧುಮೇಹ, ಬಿಪಿ ಸೇರಿ 650 ಔಷಧಗಳ ಬೆಲೆ ಇಳಿಕೆ
  • 43 ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಸ್ಥಾಪನೆಗೆ ಒತ್ತು
  • ಇರಾನ್, ಮ್ಯಾನ್ಮಾರ್​ನಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ಕ್ರಮ
  • ದೇಶದಲ್ಲಿ ಒಟ್ಟು 650 ಜನೌಷಧ ಮಳಿಗೆ ಸ್ಥಾಪಿಸುವ ಗುರಿ
  • ಬೆಂಗಳೂರಿನ 10 ಸಾವಿರ ಮನೆಗಳಿಗೆ ಅಡುಗೆ ಅನಿಲ ಪೂರೈಕೆ ಸೌಲಭ್ಯ
  • ಜನವರಿ 2017ರಲ್ಲಿ ಯೋಜನೆ ಉದ್ಘಾಟನೆ
  • ಸ್ಥಗಿತಗೊಂಡಿದ್ದ ರಸಗೊಬ್ಬರ ಕಾರ್ಖಾನೆಗಳಿಗೆ ಮರುಜೀವ

10 ಸಾವಿರ ಮರಗಳ ರಕ್ಷಣೆ!

ಬೆಂಗಳೂರಲ್ಲಿ 1 ಕೋಟಿ ಜನರಿದ್ದಾರೆ. ಅವರಿಗೆಲ್ಲ ನನ್ನ ಸಾಧನೆಗಳ ಪುಸ್ತಕ ತಲುಪಿಸಬೇಕಾದರೆ 10 ಸಾವಿರ ಮರಗಳನ್ನು ಕತ್ತರಿಸಿ ಪುಸ್ತಕ ಮಾಡಬೇಕಾಗುತ್ತದೆ. ಈಗಾಗಲೇ ನಗರದಲ್ಲಿ ಮರಗಳ ಕೊರತೆ ಎದುರಾಗಿದೆ. ಆದ್ದರಿಂದ ರಾಜ್ಯ ರಾಜಕೀಯದಲ್ಲಿ ಇದೇ ಮೊದಲ ಬಾರಿ ಇ-ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇನೆ. ನನ್ನ ಸಾಧನೆಯನ್ನು ಎಲ್ಲರಿಗೂ ತಂತ್ರಜ್ಞಾನದ ಸಹಾಯದಿಂದ ಅವರ ಇ-ಮೇಲ್ ಬಾಕ್ಸ್​ಗಳಿಗೆ ಕಳುಹಿಸುವ ಯೋಜನೆ ರೂಪಿಸಿದ್ದೇನೆ ಎಂದು ಅನಂತಕುಮಾರ್ ಹೇಳಿದರು.

Leave a Reply

Your email address will not be published. Required fields are marked *

Back To Top