Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ವಾಟ್ಸ್​ಆಪ್ ಚಾಟಿಂಗ್​ಗೆ ಇಬ್ಬರು ಬಲಿ?

Thursday, 12.07.2018, 3:00 AM       No Comments

ಕುಣಿಗಲ್ : ಸ್ನೇಹಿತರೊಂದಿಗೆ ವಾಟ್ಸ್​ಆಪ್​ನಲ್ಲಿ ಚಾಟಿಂಗ್ ಮಾಡುತ್ತಿದ್ದ ಪತ್ನಿಯೊಂದಿಗೆ ಮನಸ್ತಾಪ ಮಾಡಿಕೊಂಡ ಪತಿ ಮಂಗಳವಾರ ರಾತ್ರಿ ಪತ್ನಿಯನ್ನು ಕೊಲೆ ಮಾಡಿದ್ದಲ್ಲದೆ ತಡೆಯಲು ಬಂದ ತಂದೆಯನ್ನೂ ಕೊಲೆ ಮಾಡಿ ಬುಧವಾರ ಪೊಲೀಸರಿಗೆ ಶರಣಾಗಿದ್ದಾನೆ.

ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಕಾಂತಯ್ಯನಪಾಳ್ಯದ ಸೌಮ್ಯಾ(30) ಹಾಗೂ ಈಕೆಯ ಮಾವ ಈರಣ್ಣ (70) ಕೊಲೆಯಾದವರು. ಈರಣ್ಣನ ಮಗ ನಾರಾಯಣಸ್ವಾಮಿ ಕೊಲೆ ಆರೋಪಿ. 6 ವರ್ಷದ ಹಿಂದೆ ಅಕ್ಕನ ಮಗಳು ಸೌಮ್ಯಾಳೊಂದಿಗೆ ನಾರಾಯಣಸ್ವಾಮಿ ಮದುವೆಯಾಗಿದ್ದ.

ಅನುಮಾನಕ್ಕೆ ವಾಟ್ಸ್​ಆಪ್ ಸಂದೇಶ: ಕೆಲ ದಿನಗಳಿಂದ ಸೌಮ್ಯಾ ಸ್ನೇಹಿತರಿಗೆ ಕಳುಹಿಸುತ್ತಿದ್ದ ವಾಟ್ಸ್​ಆಪ್ ಸಂದೇಶ ನೋಡಿದ ಪತಿ ಈ ವಿಷಯಕ್ಕೆ ಗಲಾಟೆ ತೆಗೆದಾಗ ಸಂಬಂಧಿಕರು ಸಮಾಧಾನಪಡಿಸಿದ್ದರು. ನಂತರ ನೆಲಮಂಗಲದಿಂದ ಸ್ವಗ್ರಾಮ ಕಾಂತಯ್ಯನಪಾಳ್ಯಕ್ಕೆ ಬಂದು ನೆಲೆಸಿದ್ದು, ಇಲ್ಲಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದ. ಮತ್ತೆ ಮಂಗಳವಾರ ರಾತ್ರಿ ಪತಿ-ಪತ್ನಿ ನಡುವೆ ಇದೇ ವಿಷಯಕ್ಕೆ ಜಗಳ ನಡೆದಿದೆ. ಈ ವೇಳೆ ಒನಕೆಯಿಂದ ಹೆಂಡತಿಗೆ ಹೊಡೆದಿದ್ದು, ತಡೆಯಲು ಬಂದ ತಂದೆ ಈರಣ್ಣನ ತಲೆ ಭಾಗಕ್ಕೆ ಮಚ್ಚಿನಿಂದ ಹೊಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಅಮ್ಮ ಹಾಗೂ ತಾತ ಬಾರದ ಲೋಕಕ್ಕೆ ಹೋಗಿದ್ದರೆ, ಇತ್ತ ತಂದೆ ಜೈಲುಪಾಲಾಗಿದ್ದು, ಏನೂ ಅರಿಯದ ಎರಡೂವರೆ ವರ್ಷದ ಮಗಳು ಕೀರ್ತನಾ ಅನಾಥವಾಗಿದ್ದಾಳೆ. ಎಸ್​ಪಿ ದಿವ್ಯಾ ಗೋಪಿನಾಥ್, ಡಿವೈಎಸ್​ಪಿ ವೆಂಕಟೇಶ್, ಸಿಪಿಐ ಅಶೋಕ್, ಪಿಎಸ್​ಐ ಅನಿಲ್, ಪುಟ್ಟೇಗೌಡ, ರವಿ ಸೇರಿ ಶ್ವಾನ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿರಾ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದ ನಾರಾಯಣಸ್ವಾಮಿಯನ್ನು ಸ್ಥಳಕ್ಕೆ ಕರೆತಂದು ಕೊಲೆಗೆ ಸಂಬಂಧಿಸಿದ ಮಾಹಿತಿ ಪಡೆದರು.

ಮನೆಯೆಲ್ಲ ಗಲೀಜಾಗಿದೆ ಅಜ್ಜಿ ! : ಸ್ವಗ್ರಾಮ ಕಾಂತಯ್ಯನಪಾಳ್ಯದಲ್ಲಿ ಈರಣ್ಣ ನಿರ್ವಿುಸುತ್ತಿದ್ದ ಹೊಸಮನೆಯಲ್ಲಿ ಮಲಗಿದ್ದ ಅಜ್ಜಿ ಬಳಿಗೆ ಬುಧವಾರ ಬೆಳಗ್ಗೆ ಹೋದ ಸೌಮ್ಯಾಳ ಮಗಳು ಕೀರ್ತನ, ‘ಮನೆಯೆಲ್ಲ ಗಲೀಜಾಗಿದೆ. ಅಪ್ಪ ಎಲ್ಲೋ ಹೋಗಿದ್ದಾನೆ, ಅಲ್ಲಿಗೆ ಹೋಗುವುದು ಬೇಡ’ ಎಂದಿದ್ದಾಳೆ. ಅನುಮಾನಗೊಂಡ ಅಜ್ಜಿ, ಸ್ಥಳೀಯರೊಂದಿಗೆ ಬಂದಾಗ ಸೊಸೆ ಮತ್ತು ಗಂಡ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ತಿಂಗಳ ಸಂಬಳ 1.80 ಲಕ್ಷ! : ಅನಿಮೇಷನ್ ಕಂಪನಿಯೊಂದರಲ್ಲಿ ನಾರಾಯಣಸ್ವಾಮಿ ವಿನ್ಯಾಸಗಾರನಾಗಿದ್ದ. ಮಾಸಿಕ 1.80 ಲಕ್ಷ ರೂ. ಸಂಬಳ. ನೆಲಮಂಗಲದಲ್ಲಿ 3 ಮಹಡಿಯ ಮನೆ ಕಟ್ಟಿಸಿಕೊಂಡು ವಾಸವಿದ್ದ.

ಬೆಂಬಲವೇ ತಂದೆ ಕೊಲೆಗೆ ಕಾರಣ? : ಪತ್ನಿಯ ವಾಟ್ಸ್​ಆಪ್ ಚಾಟಿಂಗ್​ನಿಂದ ಕೋಪಗೊಂಡಿದ್ದ ನಾರಾಯಣಸ್ವಾಮಿಗೆ ಮನೆಯವರೇ ಬುದ್ಧಿ ಹೇಳಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡ ನಾರಾಯಣಸ್ವಾಮಿ ಪತ್ನಿಯ ಮೊಬೈಲ್ ಸುಟ್ಟು ಹಾಕಿದ್ದ. ಪತ್ನಿ ಮತ್ತೆ ಹೊಸ ಮೊಬೈಲ್ ಖರೀದಿಸಿ ಚಾಟಿಂಗ್ ಶುರು ಮಾಡಿದ್ದಾಳೆ. ಇದಕ್ಕೆ ಈರಣ್ಣ ಹಾಗೂ ಸೌಮ್ಯಾಳ ತಾಯಿ ಬೆಂಬಲಿಸಿದ್ದಾರೆ. ಅದೇ ದ್ವೇಷದಿಂದ ತಂದೆ ಈರಣ್ಣನನ್ನೂ ಕೊಂದಿರಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *

Back To Top