Tuesday, 16th October 2018  

Vijayavani

ಉಪಚುನಾವಣಾ ಕದನಕ್ಕೆ ನಾಮಿನೇಷನ್​ ಫೈಲ್​- ಬಳ್ಳಾರಿಯಲ್ಲಿ ಶಾಂತಾ, ಉಗ್ರಪ್ಪ ಅಧಿಕೃತ ಅಖಾಡಕ್ಕೆ        ರಂಗೇರಿದ ಅಖಾಡದಲ್ಲಿ ಅಭ್ಯರ್ಥಿಗಳ ಶಕ್ತಿ ಪ್ರದರ್ಶನ - ರೋಡ್​​ಶೋ ನಡೆಸಿ ಎದುರಾಳಿಗೆ ಟಕ್ಕರ್​ - ನಾಳೆಯಿಂದ ಪ್ರಚಾರ ಶುರು        ಲೋನ್​ಗಾಗಿ ರೂಂಗೆ ಕರೆದ ಮ್ಯಾನೇಜರ್ - ಸಂಚು ಅರಿತು ಪ್ರತಿತಂತ್ರ ಹೆಣೆದ ನಾರಿ -ದಾವಣಗೆರೆ ಬೀದಿಯಲ್ಲೇ ಭರ್ಜರಿ ಸೇವೆ        ಯಾದಗಿರಿಯಲ್ಬಲಿ ಡವರಿಗೆ ಎರಡು ತಿಂಗಳಿನಿಂದ ಸಿಕ್ಕಿಲ್ಲ ಪಡಿತರ ಧಾನ್ಯ - ವಿತರಕನಿಂದಲೇ ಕಾಳಸಂತೆಯಲ್ಲಿ ಮಾರಾಟ        ಏಳನೇ ದಿನ ಚಾಮುಂಡಿ ದರ್ಶನಕ್ಕೆ ಜನಸಾಗರ - ಫ್ಲವರ್​ ಶೋನಲ್ಲಿ ಮುದುಡಿದ ಕಮಲಕ್ಕೆ ಹೊಸ ಮೆರಗು       
Breaking News

ವಸತಿಗೃಹದಲ್ಲಿ ನಗದು, ಚಿನ್ನಾಭರಣ ಕಳವು

Saturday, 31.03.2018, 2:05 AM       No Comments

ರೋಣ: ಪಟ್ಟಣದ 100 ಹಾಸಿಗೆಯುಳ್ಳ ಪಂಡಿತ ಭೀಮಸೇನ್ ಜೋಷಿ ಸರ್ಕಾರಿ ಆಸ್ಪತ್ರೆಯ ವಸತಿಗೃಹವೊಂದಕ್ಕೆ ಗುರುವಾರ ರಾತ್ರಿ ಕಳ್ಳರು ನುಗ್ಗಿ ನಗದು ಸೇರಿದಂತೆ 1 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಆಸ್ಪತ್ರೆಯ ಸ್ಟಾಪ್ ನರ್ಸ್ ಸುಶೀಲಾ ಬಿಳೆಕಲ್ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಗೋದ್ರೆಜ್ ಹುಡುಕಾಡಿ ಬಟ್ಟೆ, ಬರೆ ಎಳೆದುಹಾಕಿ, ಚಿನ್ನಾಭರಣ, ನಗದು ದೋಚಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ರೋಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮರಳು ಅಡ್ಡೆ ಮೇಲೆ ದಾಳಿ

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಹಾಗೂ ಶಿಂಗಟಾಲೂರ ಗ್ರಾಮದ ನದಿ ದಡದಲ್ಲಿನ ಅಕ್ರಮ ಮರಳು ಅಡ್ಡೆಗಳ ಮೇಲೆ ತಹಸೀಲ್ದಾರ್ ಭ್ರಮಾರಂಭ ಗುಬ್ಬಿಶೆಟ್ಟಿ ನೇತೃತ್ವದ ತಂಡ ಶುಕ್ರವಾರ ದಾಳಿ ನಡೆಸಿ, ಮರಳನ್ನು ವಶಪಡಿಸಿಕೊಂಡಿದೆ.

ಅನಧಿಕೃತವಾಗಿ ಸಂಗ್ರಹಿಸಿಡಲಾಗಿದ್ದ 6.84 ಲಕ್ಷ ರೂ. ಮೌಲ್ಯದ ಅಂದಾಜು 380 ಮೆಟ್ರಿಕ್ ಟನ್​ನಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು. ಕಂದಾಯ ನಿರೀಕ್ಷಕ ಎಸ್.ಎಸ್.ಬಿಚ್ಚಾಲಿ, ಇತರರು ಇದ್ದರು.

Leave a Reply

Your email address will not be published. Required fields are marked *

Back To Top