Friday, 22nd June 2018  

Vijayavani

ಬಜೆಟ್ ಪೂರ್ವಭಾವಿ ಸಭೆ ಆರಂಭ - ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ ಸಭೆ -ಸಿಎಂ ನೇತೃತ್ವದಲ್ಲಿ ಮೀಟಿಂಗ್​​        ಟ್ರಾನ್ಸ್​​​ಫರ್​ಗೆ ನೋ ಬ್ರೋಕರ್ ಸಿಸ್ಟಂ - ಸಿಎಂ, ಡಿಸಿಎಂ ಹೆಸ್ರು ಬಳಸಿದ್ರೆ ದೂರವಿಡಿ - ಪೊಲೀಸ್​​​​ ಅಧಿಕಾರಿಗಳಿಗೆ ಸಿಎಂ ಆರ್ಡರ್​​​​        ಲಾರಿಗೆ ಸಿಲುಕಿ ಆತ್ಮಹತ್ಯೆಗೆ ಯುವಕನ ಯತ್ನ - ಚಕ್ರ ಹರಿದು ಎರಡೂ ಕಾಲು ಕಟ್​ - ಕೊಪ್ಪಳದ ಕುಕನೂರು ಪಟ್ಟಣದಲ್ಲಿ ಘಟನೆ        ಗಂಗಾಧರ ಚಡಚಣ ನಿಗೂಢ ಹತ್ಯ ಪ್ರಕರಣ - 6 ಮಂದಿ ಆರೋಪಿಗಳ ಸಿಐಡಿ ತನಿಖೆ ಪೂರ್ಣ        ಇಂದಿನಿಂದ ಮೆಟ್ರೋದ 6 ಬೋಗಿ ರೈಲು ಓಡಾಟ - ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆ ವರೆಗೆ ಸಂಚಾರ        ಹಜ್​ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ತಾಪ- ವಕ್ಫ್​ ಸಚಿವ ಜಮೀರ್​ ವಿರುದ್ಧ ಆಕ್ರೋಶ- ಟಿಪ್ಪು ಹೆಸರಿಟ್ರೆ ಉಗ್ರ ಹೋರಾಟ ಎಂದ ಬಿಜೆಪಿ       
Breaking News

ವರ ನೀಡುವ ಗೊರವನಹಳ್ಳಿ ಲಕ್ಷ್ಮಿ 

Thursday, 14.09.2017, 3:00 AM       No Comments

| ಪ್ರಶಾಂತ ರಿಪ್ಪನ್​ಪೇಟೆ

ಭಾರತೀಯ ಧಾರ್ವಿುಕ ಪರಂಪರೆಯಲ್ಲಿ ಕೋಟ್ಯಂತರ ದೇವತೆಗಳ ಪ್ರಸ್ತಾಪಗಳಿವೆ. ಒಂದೊಂದು ವರ್ಗದವರು ಒಂದೊಂದು ಪರಂಪರೆಯ ದೇವರನ್ನು ಪೂಜಿಸುತ್ತಾರೆ. ಆದರೆ ಮಹಾಲಕ್ಷಿ್ಮಯನ್ನು ಪೂಜಿಸದವರು ಅತ್ಯಂತ ವಿರಳ. ಮಹಾಲಕ್ಷಿ್ಮ ಎಂದರೆ ಐಶ್ವರ್ಯದಾಯಿನಿ ಎಂಬುದೇ ಇದಕ್ಕೆ ಕಾರಣ. ಐಶ್ವರ್ಯಪ್ರದಾಯಿನಿ ಮಹಾಲಕ್ಷ್ಮಿದೇವಿ ನೆಲೆಸಿರುವ ಗೊರವನಹಳ್ಳಿ ಕ್ಷೇತ್ರದಲ್ಲಿ ಭಕ್ತಿಯಿಂದ ಬೇಡಿದರೆ ಅವಿವಾಹಿತ ಯುವತಿಯರಿಗೆ ‘ವರ’ ದಯಪಾಲಿಸುತ್ತಾಳೆಂಬುದು ಕುತೂಹಲವೆನಿಸಿದರೂ ಸತ್ಯ.

ಕೋಟ್ಯಂತರ ದೇವತೆಗಳನ್ನು ನಂಬುವ ನಮ್ಮ ಪರಂಪರೆಯಲ್ಲಿ ಮಾತೆ ಲಕ್ಷಿ್ಮಯನ್ನು ಅಷ್ಟಸಿದ್ಧಿ ಪ್ರದಾಯಿನಿ ಎಂದೂ ಕರೆಯಲಾಗುತ್ತದೆ. ಇದಕ್ಕೆ ಪೂರಕವೆಂಬಂತೆ ಗೊರವನಹಳ್ಳಿ ಮಹಾಲಕ್ಷಿ್ಮಯನ್ನು ಭಕ್ತಿಯಿಂದ ಭಜಿಸುವ ಲಕ್ಷಾಂತರ ಅವಿವಾಹಿತರಿಗೆ ಕಂಕಣಬಲ ಕೂಡಿಬರುತ್ತದೆ. ಈ ಕ್ಷೇತ್ರದಲ್ಲಿ ಮಹಾಲಕ್ಷಿ್ಮಯು ಆಶೀರ್ವಾದ ಮಾಡಿದ ಕರಿಮಣಿಯನ್ನು ನೀಡುವ ವಿಶೇಷ ಪದ್ಧತಿ ಇದೆ. ಅವಿವಾಹಿತೆಯರು ಹೀಗೆ ನೀಡಿದ ಕರಿಮಣಿಯನ್ನು ಮನೆಗೆ ಕೊಂಡೊಯ್ದು ಪೂಜಿಸಿದರೆ ಉತ್ತಮ ವರ ದೊರೆಯುತ್ತಾನೆ. ವರನ ತಾಯಿ ಪೂಜೆ ಮಾಡಿದರೆ ಉತ್ತಮ ಸೊಸೆ ಬರುತ್ತಾಳೆಂಬ ನಂಬಿಕೆಯಿದೆ. ಹೀಗೆ ಪೂಜಿಸಿ ಫಲ ಪಡೆದ ಸಹಸ್ರಾರು ಉದಾಹರಣೆಗಳಿವೆ.

ಗೊರವನಹಳ್ಳಿಯ ಇತಿಹಾಸ

ಈ ದೇವಾಲಯವನ್ನು ಸ್ಥಾಪಿಸಿದವರು ಲಕ್ಷಿ್ಮೕದೇವಿಯ ಉಪಾಸಕರಾಗಿದ್ದ ಕಮಲಮ್ಮ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಯಮಂಗಲಿ ನದಿಯ ದಡದಲ್ಲಿರುವ ಈ ಕ್ಷೇತ್ರ ರೋಚಕ ಇತಿಹಾಸ ಹೊಂದಿದೆ. ಅಬ್ಬಯ್ಯ ಎಂಬ ವ್ಯಕ್ತಿ ಹಸು ಮೇಯಿಸಲು ಕೆರೆಯ ಬಳಿ ಹೋದಾಗ ‘ನಾನು ನಿನ್ನೊಂದಿಗೆ ಬರುತ್ತೇನೆ ಕರೆದುಕೊಂಡು ಹೋಗು’ ಎಂಬ ಹೆಣ್ಣಿನ ಧ್ವನಿ ಕೇಳಿಸುತ್ತಿತ್ತು. ಆತ ತನ್ನ ತಾಯಿಯ ಸಲಹೆಯಂತೆ ‘ದೇವತೆಯಾದರೆ ಕರೆದೊಯ್ಯುತ್ತೇನೆ, ದುಷ್ಟಶಕ್ತಿಯಾದರೆ ಕರೆದೊಯ್ಯಲಾರೆ’ ಎಂದು ನೆಲದ ಮೇಲೆ ತನ್ನ ಶಲ್ಯವನ್ನು ಹಾಸಿ ಪ್ರಾರ್ಥಿಸಿದಾಗ; ಶಂಕಚಕ್ರ ಗದಾಹಸ್ತೆಯಾದ ಮಹಾಲಕ್ಷಿ್ಮ ಶಿಲಾಮೂರ್ತಿಯ ರೂಪದಲ್ಲಿ ಬಂದಳು. ಆ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜಿಸತೊಡಗಿದ. ನಂತರ ಅಷ್ಟೆ ೖಶ್ವರ್ಯ ಹೊಂದಿ ದಾನ-ಧರ್ಮ ಮಾಡುತ್ತ ಪ್ರಸಿದ್ಧನಾದ. ವರ್ಷಗಳು ಕಳೆದಂತೆ ವಯೋವೃದ್ಧನಾದ ಅಬ್ಬಯ್ಯ ತನ್ನ ಬಳಿಕ ಪೂಜೆ ಮುಂದುವರಿಯಬೇಕೆಂದು ಲಕ್ಷಿ್ಮಯ ಮೂರ್ತಿಯನ್ನು ಊರಿನಲ್ಲಿ ಪ್ರತಿಷ್ಠಾಪಿಸಿದ. ಆತನ ನಂತರ ಪೂಜೆ ಪುನಸ್ಕಾರಗಳು ನಿಂತು ದೇವಾಲಯದ ಸುತ್ತ ಗಿಡಮರಗಳು ಬೆಳೆದವು. ಇದಾಗಿ ಶತಮಾನಗಳೇ ಕಳೆದ ನಂತರ ಗ್ರಾಮದ ಶಾನುಭೋಗರ ಮನೆಯ ಕಮಲಮ್ಮನವರಿಗೂ ಲಕ್ಷಿ್ಮೕವಾಣಿ ಕೇಳಿಸಿತು. ಅದರಂತೆ ಕಮಲಮ್ಮನವರು ಆ ಪ್ರದೇಶವನ್ನು ಸ್ವಚ್ಛಗೊಳಿಸಿ ನೋಡಿದರೆ ಅಲ್ಲಿ ಮಹಾಲಕ್ಷಿ್ಮಯ ಮೂರ್ತಿಯಿತ್ತು. ಅಲ್ಲಿ ಕಮಲಮ್ಮನವರು ಪುನಃ ಪೂಜೆ ಪ್ರಾರಂಭಿಸಿದರು. 12 ಮನೆಗಳಿದ್ದ ಆ ಪುಟ್ಟ ಗ್ರಾಮ ಇಂದು ಪ್ರತಿಷ್ಠಿತ ಕ್ಷೇತ್ರವಾಗಿ ಬೆಳೆದಿದೆ.

ಅಷ್ಟಸಿದ್ಧಿಯ ಜಾಗೃತಕ್ಷೇತ್ರ

ಮಹಾಲಕ್ಷ್ಮಿಯನ್ನು ಧನಲಕ್ಷ್ಮಿ , ಧಾನ್ಯಲಕ್ಷಿ್ಮ ಇತ್ಯಾದಿ ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸಲಾಗುತ್ತದೆ. ಗೊರವನಹಳ್ಳಿ ಲಕ್ಷಿ್ಮಯನ್ನು ಭಕ್ತಿಯಿಂದ ಪೂಜಿಸಿದರೆ ಅಷ್ಟಸಿದ್ಧಿಗಳು ಲಭಿಸುತ್ತವೆ ಎಂಬುದು ಕಮಲಮ್ಮನವರ ಮೊಮ್ಮಗಳಾದ ಶ್ರೀಲಕ್ಷ್ಮಿಯವರ ಮಾತು. ಅವರೇ ವಿವರಿಸುವಂತೆ ಲಕ್ಷಿ್ಮಯ ಸಾಕ್ಷಾತ್ಕಾರ ಪಡೆದಿರುವ ಕಮಲಮ್ಮನವರು ಮಹಾಲಕ್ಷ್ಮಿ ಸೇವೆಯ ವಿವಿಧ ನಿಯಮಗಳನ್ನು ಮಾಡಿದ್ದಾರೆ. ಪ್ರತಿ ಸಿದ್ಧಿಗೂ ಒಂದೊಂದು ಪೂಜಾ ವಿಧಾನವಿದ್ದು, ಕಂಕಣಭಾಗ್ಯಕ್ಕೆ ಕರಿಮಣಿ ಪೂಜೆ, ಮುತೆôದೆ ಭಾಗ್ಯಕ್ಕೆ ಬಳೆ ಪೂಜೆ, ಸಂತಾನಭಾಗ್ಯಕ್ಕೆ ಬೆಳ್ಳಿನಾಗಪ್ಪನ ಪೂಜೆಗಳಿವೆ. ಬೇರೆ ಯಾವುದೇ ಸಂಕಲ್ಪಕ್ಕಾದರೂ ಹಿಡಿಯಕ್ಕಿ ಪೂಜೆ ಮಾಡುವ ವಿಧಾನವಿದೆ.

ಕ್ಷೇತ್ರಕ್ಕೆ ಬಂದು ಯಾವುದೇ ಇಷ್ಟಾರ್ಥ ಸಿದ್ಧಿಗಾಗಿ ಸಂಕಲ್ಪ ಮಾಡುವ ಭಕ್ತರು ಸಂಕಲ್ಪ ಈಡೇರುವವರೆಗೂ ಪ್ರತಿದಿನ ಮನೆಯಲ್ಲಿ ಲಕ್ಷಿ್ಮಯನ್ನು ನೆನೆದು ಒಂದು ಹಿಡಿ ಅಕ್ಕಿಯನ್ನು ಎತ್ತಿಡಬೇಕು. ಸಂಕಲ್ಪ ಈಡೇರಿದ ಮೇಲೆ ಆ ಅಕ್ಕಿಯನ್ನು ತಂದು ಗೊರವನಹಳ್ಳಿ ದೇವಾಲಯಕ್ಕೆ ಅರ್ಪಿಸಬೇಕು. ಅದನ್ನು ಇಲ್ಲಿನ ಭಕ್ತರ ದಾಸೋಹಕ್ಕೆ ಬಳಸಲಾಗುತ್ತದೆ. ಇದು ಇಲ್ಲಿನ ಅತ್ಯಂತ ಪ್ರಸಿದ್ಧ ಸೇವೆ.

ಹೋಗುವ ಮಾರ್ಗ

ಬೆಂಗಳೂರಿನಿಂದ 82 ಕಿ.ಮೀ. ದೂರವಿರುವ ಗೊರವನಹಳ್ಳಿಯನ್ನು ದಾಬಸ್​ಪೇಟೆಯಿಂದ ಕೊರಟಗೆರೆ ಮಾರ್ಗವಾಗಿ ತಲುಪಬಹುದು.

(ಪ್ರತಿಕ್ರಿಯಿಸಿ: : [email protected], [email protected])

 

 

 

Leave a Reply

Your email address will not be published. Required fields are marked *

Back To Top