Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ವರ್ಗಾವಣೆಗಿರಲಿ ವಿವೇಚನೆ

Thursday, 10.08.2017, 3:00 AM       No Comments

ರಾಜಕೀಯ ಮೇಲಾಟದ ಕಾರಣದಿಂದಾಗಿ ತಮ್ಮನ್ನು ಮೇಲಿಂದ ಮೇಲೆ ವರ್ಗಾವಣೆ ಮಾಡುತ್ತಿರುವುದು ರಾಜ್ಯದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಇಂಥ ಅವಧಿಪೂರ್ವ ಎತ್ತಂಗಡಿಯಿಂದ ಬೇಸತ್ತಿರುವ ಈ ಉನ್ನತಾಧಿಕಾರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಾಗರಿಕ ಸೇವಾ ಮಂಡಳಿಯ ಮುಖ್ಯಸ್ಥರಿಗೆ ದೂರುನೀಡುವ ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಆಳುಗರು ಮತ್ತು ಅಧಿಕಾರಿವರ್ಗದವರ ನಡುವಿನ ಮತ್ತೊಂದು ಸುತ್ತಿನ ಹಗ್ಗಜಗ್ಗಾಟಕ್ಕೆ ಈ ಬೆಳವಣಿಗೆ ಕಾರಣವಾಗಲಿದೆಯೇ ಎಂಬುದು ಕಾದುನೋಡಬೇಕಿರುವ ಸಂಗತಿ.

ಅಧಿಕಾರಿಗಳ ಕಾರ್ಯಸ್ಥಳ ನಿಯೋಜನೆ, ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ವರ್ಗಾವಣೆ ಮೊದಲಾದ ಬಾಬತ್ತುಗಳೆಲ್ಲವೂ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯಗಳು. ಆದರೆ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಆಸ್ಪದ ಕಲ್ಪಿಸುವುದೂ ಸರ್ಕಾರದ ಹೊಣೆಯೇ ಆಗಿರುತ್ತದೆ. ವಿಭಿನ್ನ ಸ್ತರದ ಅಧಿಕಾರಿ ವಲಯಕ್ಕೆ ಅದರದ್ದೇ ಆದ ಪೂರ್ವನಿಯೋಜಿತ ಕಾರ್ಯಾವಧಿ ಇರುತ್ತದೆ. ಸ್ಥಳ ನಿಯೋಜನೆ ಬಳಿಕ ಕನಿಷ್ಠ 2 ವರ್ಷ ವರ್ಗಾವಣೆ ಮಾಡಬಾರದೆಂಬ ನಿಯಮವಿದ್ದರೂ ಅದನ್ನು ಪಾಲಿಸದ ಸರ್ಕಾರ ಅವಧಿಪೂರ್ವ ವರ್ಗಾವಣೆ ಮಾಡುತ್ತಿರುವುದು ಈ ಅಧಿಕಾರಿಗಳಿಗೆ ಅಪಥ್ಯವಾಗಿದೆ; ಹೀಗೆ ಅಕಾಲಿಕ ವರ್ಗಾವಣೆಯಾಗುತ್ತಿದ್ದರೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವುದಾದರೂ ಹೇಗೆ ಎಂಬುದು ಇವರ ಅಳಲು.

ಸರ್ಕಾರದ ಮಟ್ಟದಲ್ಲಿ ಎಂಥದೇ ಮಹೋನ್ನತ ಯೋಜನೆಗಳ ಘೋಷಣೆಯಾದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿರುತ್ತದೆ. ಇಂಥ ಹೊಣೆಗಾರಿಕೆಯನ್ನು ಸರಿಯಾಗಿ ನೆರವೇರಿಸಬೇಕೆಂದರೆ ಸಂಬಂಧಿತ ಉನ್ನತಾಧಿಕಾರಿ ತನ್ನ ಅಧೀನದ ಕಾರ್ಯಕ್ಷೇತ್ರದ ತಲರ್ಸ³ ಅಧ್ಯಯನ ನಡೆಸಬೇಕಾಗುತ್ತದೆ. ಆದರೆ ಹೀಗೆಬಂದು ಹಾಗೆ ನೋಡುವುದರಲ್ಲಿ ಸ್ಥಳದಿಂದ ಎತ್ತಂಗಡಿಯಾದಲ್ಲಿ ಸಮಸ್ಯೆ-ಸವಾಲುಗಳನ್ನು ಎದುರಿಸಿ ಪರಿಹರಿಸುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ. ಇನ್ನು ಇಲಾಖೆ ಸಂಬಂಧಿತ ಕೆಲಸದಲ್ಲಿ ತೊಡಗಿಸಿಕೊಂಡು ಯಥೋಚಿತ ಫಲಿತಾಂಶ ಒದಗಿಸುವುದಕ್ಕಿಂತ, ಸಂಬಂಧಿತ ಸಚಿವ/ರಾಜಕಾರಣಿಯ ಓಲೈಕೆ ಮಾಡುವಂಥ ಇಲ್ಲವೇ ಅವರೊಂದಿಗೆ ಹೊಂದಾಣಿಕೆಗೆ ಮುಂದಾಗಬೇಕಾದಂಥ ಇಕ್ಕಟ್ಟಿನ ಪರಿಸ್ಥಿತಿ ಅನೇಕ ಉನ್ನತಾಧಿಕಾರಿಗಳದ್ದು ಎಂಬುದು ಬಹಿರಂಗ ಗುಟ್ಟು. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಇರಾದೆ ಮತ್ತು ಹುರುಪು ಇದ್ದರೂ, ರಾಜಕಾರಣಿಗಳ ಹಸ್ತಕ್ಷೇಪದಿಂದಾಗಿ ಅವಕ್ಕೆ ಗ್ರಹಣ ಹಿಡಿಸಿಕೊಳ್ಳುವಂತಾಗುವ ಕಹಿಯನ್ನು ಅನೇಕ ಅಧಿಕಾರಿಗಳು ಅನುಭವಿಸಿದ್ದಾರೆ. ಇಂಥ ಇನ್ನೂ ಅನೇಕ ಸಮಸ್ಯೆಗಳಿಗೆ ರ್ತಾಕ ಅಂತ್ಯ ದಕ್ಕುವಂತಾಗಬೇಕು. ಇಲ್ಲವಾದಲ್ಲಿ ಸರ್ಕಾರಿ ಸೇವೆ ಮತ್ತು ಯೋಜನೆಗಳಿಂದ ಫಲಾನುಭವಿಗಳು ವಿನಾಕಾರಣ ವಂಚಿತರಾಗುವಂತಾಗುತ್ತದೆ. ಅಧಿಕಾರಿಗಳು ತಪ್ಪುಮಾಡಿದಾಗ ಅಥವಾ ಸರಿಯಾಗಿ ಕರ್ತವ್ಯ ನೆರವೇರಿಸದಿದ್ದಾಗ ಕಿವಿಹಿಂಡುವ ಅಧಿಕಾರ-ಅವಕಾಶ ಸರ್ಕಾರಗಳಿಗೆ ಇದ್ದೇ ಇದೆ; ಮತ್ತು ಆ ಕೆಲಸವನ್ನು ಮಾಡಬೇಕು ಕೂಡ. ಕೆಲ ಅದಕ್ಷ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಸೇವೆಯಿಂದ ವಜಾಗೊಳಿಸಿದ್ದು ಇದಕ್ಕೆ ಪುಷ್ಟಿ ನೀಡುವಂಥದ್ದು.

ಸರ್ಕಾರವೊಂದು ‘ಜನಪ್ರಿಯ ಸರ್ಕಾರ‘ ಎನಿಸಿಕೊಳ್ಳಲು ಅದರ ತತ್ತ್ವ-ಸಿದ್ಧಾಂತಗಳು, ಆಶ್ವಾಸನೆಗಳನ್ನು ಈಡೇರಿಸುವಲ್ಲಿನ ಬದ್ಧತೆ ಮಾತ್ರವಲ್ಲದೆ, ಅಧೀನದ ಆಡಳಿತ ವ್ಯವಸ್ಥೆಯು ಕಾರ್ಯನಿರ್ವಹಣೆಯಲ್ಲಿ ತೋರುವ ವೃತ್ತಿಪರತೆ, ದಕ್ಷತೆಗಳೂ ಕಾರಣವಾಗುತ್ತವೆ. ಆದರೆ ಇಂಥ ಗುಣ-ವಿಶೇಷಗಳ ಪರಿಪೂರ್ಣ ಅನ್ವಯಕ್ಕೇ ಅವಕಾಶ ನೀಡದೆ ಮನಸೋಇಚ್ಛೆ ವರ್ಗಾವಣೆ ಮಾಡುವುದು ತುಘಲಕ್ ವರ್ತನೆ ಎನಿಸಿಕೊಳ್ಳುತ್ತದೆಯೇ ವಿನಾ, ಜನಸ್ನೇಹಿ ಉಪಕ್ರಮ ಎನಿಸಿಕೊಳ್ಳುವುದಿಲ್ಲ.

Leave a Reply

Your email address will not be published. Required fields are marked *

Back To Top