Thursday, 20th September 2018  

Vijayavani

Breaking News

ವರದಕ್ಷಿಣೆ ಕಾಯ್ದೆ ನಿಯಮ ತಿದ್ದುಪಡಿ

Saturday, 15.09.2018, 2:03 AM       No Comments

ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಆರೋಪಿಗಳ ಬಂಧನಕ್ಕೂ ಮೊದಲು ಕುಟುಂಬ ಕಲ್ಯಾಣ ಸಮಿತಿಯ ಪರಿಶೀಲನೆ ಕಡ್ಡಾಯ ಎಂಬ ನಿಯಮವನ್ನು ರದ್ದುಪಡಿಸಿದೆ. ಹೀಗಾಗಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪತಿ ಅಥವಾ ಅವರ ಕುಟುಂಬದವರನ್ನು ಬಂಧಿಸಲು ತನಿಖಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಐಪಿಸಿ ಸೆಕ್ಷನ್ 498ಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶ ರದ್ದುಪಡಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯರ ಪೀಠ, ವರದಕ್ಷಿಣೆ ಪ್ರಕರಣದ ಗಂಭೀರತೆ ಆಧರಿಸಿ ತನಿಖಾಧಿಕಾರಿಯು ಆರೋಪಿಯನ್ನು ಬಂಧಿಸಬಹುದು. ಆದರೆ ಯಾವುದೇ ಕಡ್ಡಾಯ ಆದೇಶವನ್ನು ನ್ಯಾಯಪೀಠ ನೀಡದು. ಈ ಕುರಿತು ಕಾನೂನು ರೂಪಿಸಬೇಕಿದ್ದರೆ ಸಂಸತ್ತು ನಿರ್ಧರಿಸಲಿ ಎಂದು ಮುಖ್ಯ ನ್ಯಾಯಮೂರ್ತಿ ಸ್ಪಷ್ಟಪಡಿಸಿದ್ದಾರೆ. ವರದಕ್ಷಿಣೆ ಪ್ರಕರಣದಲ್ಲಿ ಕುಟುಂಬ ಕಲ್ಯಾಣ ಸಮಿತಿ ದೂರು ಪರಿಶೀಲಿಸದರೆ ಪತಿ ಅಥವಾ ಆತನ ಕುಟುಂಬ ಸದಸ್ಯರನ್ನು ಬಂಧಿಸಬಾರದು ಎಂದು ಕಳೆದ ವರ್ಷ ವಿಭಾಗೀಯ ಪೀಠ ಆದೇಶಿಸಿತ್ತು.

ನಿರೀಕ್ಷಣಾ ಜಾಮೀನು: ಅಕ್ರಮ ಬಂಧನದ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ನಿರೀಕ್ಷಣಾ ಜಾಮೀನಿಗೂ ಅವಕಾಶ ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

Leave a Reply

Your email address will not be published. Required fields are marked *

Back To Top