Monday, 23rd July 2018  

Vijayavani

ಬಿಜೆಪಿ ಸಂಪರ್ಕ್ ಸಮರ್ಥನ್ ಅಭಿಯಾನ - ಕಿಚ್ಚ ಸುದೀಪ್ ಭೇಟಿಯಾದ ಶ್ರೀರಾಮುಲು- ಮೋದಿ ಸಾಧನೆ ಪುಸ್ತಕ  ವಿತರಣೆ        ದೆಹಲಿಯಲ್ಲಿ ರಾಹುಲ್-ಸಿದ್ದು ಭೇಟಿ - ದೋಸ್ತಿ ನಡೆಗೆ ಅಸಮಾಧಾನ ಹೊರಹಾಕಿದ್ರಾ ಸಿದ್ದು - ಕುತೂಹಲ ಕೆರಳಿಸಿದ ಕೈ ದಿಗ್ಗಜರ ಭೇಟಿ        ಮತ್ತೆ ವಾಸ್ತು ಮೊರೆ ಮೋದ ರೇವಣ್ಣ - ಸರ್ಕಾರಿ ಬಂಗಲೆ ನವೀಕರಣಕ್ಕೆ 2 ಕೋಟಿ ಖರ್ಚು - ಇದೇನಾ ದುಂದುವೆಚ್ಚಕ್ಕೆ ಕಡಿವಾಣ ?        ದರ್ಶನ್ ಮ್ಯಾನೇಜರ್​​ ಮಲ್ಲಿಕಾರ್ಜುನ್​ನಿಂದ ಮತ್ತೊಂದು ದೋಖಾ - ನಟ ಅರ್ಜುನ್ ಸರ್ಜಾಗೂ ಮಹಾ ಮೋಸ        ಶೀರೂರು ಶ್ರೀ ಸಾವಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಸ್ವಾಮೀಜಿ ಕೊನೆದಿನದ ಡಿವಿಆರ್ ನಾಪತ್ತೆ - ಪೊಲೀಸರಿಂದ ತೀವ್ರ ಶೋಧ       
Breaking News

ವಕ್ರ ಬುದ್ಧಿಯಿಂದ ವಿಷಮತೆ

Sunday, 08.07.2018, 3:03 AM       No Comments

ಹಾಮುನಿ ಗಾರ್ಗ್ಯನಿಗೆ ಬಹುಕಾಲ ಮಕ್ಕಳಿರಲಿಲ್ಲ. ಅವನ ವೃದ್ಧಾಪ್ಯದಲ್ಲಿ ಜನಿಸಿದ ಪುತ್ರನನ್ನು ಬಹಳ ಮುದ್ದಾಗಿ ಸಾಕಿದ್ದ. ಅವನು ಬೆಳೆಯುತ್ತಲೇ ಅನೇಕ ದುರ್ಗಣಗಳು ಬೆಳೆದವು. ಆ ಪುತ್ರನಿಗೆ ವೇದಾಭ್ಯಾಸದಲ್ಲಾಗಲಿ, ಬ್ರಾಹ್ಮಣ, ಗುರು ಹಿರಿಯರಲ್ಲಾಗಲಿ ಏನೊಂದೂ ಆದರ ಇರಲಿಲ್ಲ. ತಂದೆ ಗಾರ್ಗ್ಯನಿಗೆ ಇದರಿಂದ ಬಹಳ ದುಃಖವಾಗುತ್ತಿತ್ತು. ಆದರೂ ಪುತ್ರನನ್ನು ಪ್ರೀತಿಸುತ್ತಲೇ ಬಂದ. ಅವನ ಪುತ್ರನ ಸ್ವಭಾವವನ್ನು ಕಂಡವರು ಅವನನ್ನು ವಾಕ್ರೂರಿ ಎಂದೇ ಕರೆಯುತ್ತಿದ್ದರು. ಒಮ್ಮೆ ರಾಜಾ ಜನಮೇಜಯ ಗಾರ್ಗ್ಯರ ಆಶ್ರಮಕ್ಕೆ ಬಂದ. ಗಾರ್ಗ್ಯರಿರಲಿಲ್ಲ. ಮಹಾರಾಜನನ್ನು ಕಂಡೂ ವಾಕ್ರೂರಿ ಸುಮ್ಮನಿದ್ದ. ರಾಜನೇ ಮಾತನಾಡಿಸಿದರೂ ವಕ್ರವಾಗೇ ಉತ್ತರಿಸಿದ. ಕೋಪದಿಂದ ಜನಮೇಜಯ ಹೊಡೆದಾಗ ಆತ ಸತ್ತೇಹೋದ. ಬ್ರಹ್ಮಹತ್ಯಾ ದೋಷದಿಂದ ಜನಮೇಜಯನಿಗೆ ಮೈಯೆಲ್ಲ ದುರ್ಗಂಧವಾಯಿತು. ಅಶ್ವಮೇಧ ಯಜ್ಞ ಮಾಡಿದ ನಂತರ ಅವಭೃತ ಸ್ನಾನ ಮಾಡಿದಾಗ ದುರ್ಗಂಧ ಹೋಯಿತು. ವಕ್ರಬುದ್ಧಿ ಇದ್ದರೆ ಸತ್ತಮೇಲೂ ಅದರ ಪ್ರಭಾವ ಹೋಗದು. ಸದ್ಗುಣಕ್ಕೆ ಯಾವತ್ತೂ ಬೆಲೆ.

Leave a Reply

Your email address will not be published. Required fields are marked *

Back To Top