Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ವಕೀಲರ ಹಿರಿತನಕ್ಕೆ ಸುಪ್ರೀಂ ಹೊಸ ಸೂತ್ರ

Friday, 13.10.2017, 3:00 AM       No Comments

ನವದೆಹಲಿ: ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್​ನಲ್ಲಿ ವೃತ್ತಿನಿರತ ವಕೀಲರಿಗೆ ಹಿರಿಯತನದ ಅಭಿದಾನ (ಡೆಸಿಗ್ನೇಷನ್) ನೀಡಲು ಸುಪ್ರೀಂಕೋರ್ಟ್ ಕಠಿಣ ಮಾರ್ಗದರ್ಶಿ ಸೂತ್ರ ರೂಪಿಸಿದ್ದು, ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ನೇತೃತ್ವದಲ್ಲಿ ಶಾಶ್ವತ ಸಮಿತಿಯೊಂದನ್ನು ರಚಿಸಿದೆ.

ಈ ಸಮಿತಿಯಲ್ಲಿ ಸಿಜೆಐ ಜತೆಗೆ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್​ಗಳ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಬಾರ್ ಅಸೋಸಿಯೇಷನ್​ನ ಪ್ರತಿನಿಧಿ, ಅಟಾರ್ನಿ ಜನರಲ್, (ಹೈಕೋರ್ಟ್​ಗಳಲ್ಲಿ ಅಡ್ವೋಕೇಟ್ ಜನರಲ್) ಇರಲಿದ್ದು, ಹಿರಿತನ ಬಯಸಿ ಅರ್ಜಿ ಸಲ್ಲಿಸುವ ವಕೀಲರ ಅರ್ಹತೆಯನ್ನು ಒರೆಹಚ್ಚಲಿದೆ.

ಸಮಿತಿಗೆ ಸಹಾಯ ಮಾಡಲು ಕಾಯಂ ಸೆಕ್ರೆಟರಿಯೆಟ್ ತೆರೆಯಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಸೆಕ್ರೆಟರಿಯೆಟ್ ಹಿರಿಯತನಕ್ಕಾಗಿ ಅರ್ಜಿ ಸಲ್ಲಿಸುವ ವಕೀಲರ ಬಗ್ಗೆ ಮಾಹಿತಿ ಕಲೆಹಾಕಿ, ಅರ್ಹರ ಪಟ್ಟಿ ಸಿದ್ಧಪಡಿಸಲಿದೆ. ಆಕ್ಷೇಪಣೆಗಾಗಿ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಲಿದೆ. ನಂತರ ಪಟ್ಟಿಯನ್ನು ಸಮಿತಿ ಮುಂದೆ ಇರಿಸಲಿದೆ. ಸಮಿತಿಯು ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ನಡೆಸಲಿದ್ದು, ಹಿರಿಯ ವಕೀಲರೊಬ್ಬರನ್ನು ಸಂದರ್ಶನ ನಡೆಸಲು ನೇಮಿಸುತ್ತದೆ. ಅರ್ಹತೆ, ಅನುಭವ, ಸಾರ್ವಜನಿಕ ಹಿತದೃಷ್ಟಿಯಿಂದ ವಕಾಲತ್ತು ವಹಿಸಿದ ಪ್ರಕರಣ ಮುಂತಾದ ಅಂಶಗಳನ್ನು ಆಧರಿಸಿ ಹಿರಿಯ ಅಡ್ವೋಕೇಟ್ ಅಭಿದಾನಕ್ಕೆ ಹೆಸರು ಶಿಫಾರಸು ಮಾಡಲಿದೆ. ಈ ಶಿಫಾರಸನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ಗಳ ನ್ಯಾಯಮೂರ್ತಿಗಳು ಪರಿಶೀಲಿಸಿ ಅನಿಸಿಕೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಮಿತಿಗೆ ತಿಳಿಸಲಿದ್ದಾರೆ. ನಂತರ ಅಭ್ಯರ್ಥಿಗಳಿಗೆ ಹಿರಿಯ ವಕೀಲ ಎಂಬ ಅಭಿದಾನವನ್ನು ಸಮಿತಿ ಖಚಿತ ಪಡಿಸಲಿದೆ.

ವಕೀಲರ ಮಧ್ಯೆ ತಾರತಮ್ಯ ನಿವಾರಣೆ, ಹಿರಿತನ ನಿರ್ಧರಿಸುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಕೋರಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಈ ಮಾರ್ಗದರ್ಶನ ನೀಡಿದೆ. 1961ರ ಅಡ್ವೋಕೇಟ್ ಕಾಯ್ದೆ 16ನೇ ಕಲಂನಲ್ಲಿ ಸೂಚಿತವಾಗಿದ್ದ ‘ವಕೀಲರಿಗೆ ಹಿರಿಯತನ ನೀಡುವ ಅಧಿಕಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್​ಗಳಿಗೆ ಇದೆ’ ಎಂಬ ಅಂಶ ಅಸಂವಿಧಾನಿಕ ಎಂದು ಹೇಳಿದೆ. -ಪಿಟಿಐ

ಹಿರಿತನ ನಿರ್ಧಾರ ಹೇಗೆ?

# ವಕೀಲಿ ವೃತ್ತಿಯಲ್ಲಿನ ಅನುಭವ

# ವಕಾಲತ್ತು ವಹಿಸಿದ ಮಹತ್ವದ ಪ್ರಕರಣಗಳು

# ಜಡ್ಜ್​ಗಳು ವಕೀಲರ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯ

# ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳ ನಿರ್ವಹಣೆ

Leave a Reply

Your email address will not be published. Required fields are marked *

Back To Top