Saturday, 22nd September 2018  

Vijayavani

‘ದಂಗೆ’ ಬಿಸಿ ತಟ್ಟುತ್ತಿದ್ದಂತೆ ದೇವರ ಸ್ತುತಿ - ಶಾರದಂಬೆ ಸನ್ನಿಧಿಯಲ್ಲಿ ಎಚ್​​ಡಿಕೆ - ಸಿಎಂಗೆ ಅಣ್ಣ ರೇವಣ್ಣ ಸಾಥ್​        ರಾಜ್ಯ ರಾಜಕೀಯ ಹಾಸನಕ್ಕೆ ಶಿಫ್ಟ್​ - ಇಂದು ಹಾಸನದಲ್ಲಿ ಜೆಡಿಎಲ್​​ಪಿ ಮೀಟಿಂಗ್​ - ದಳನಾಯಕರಿಂದ ರಣತಂತ್ರದ ಚರ್ಚೆ        ಸಿಎಂ ದಂಗೆ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ - ಇಂದು ಕೂಡ ಹಲವೆಡೆ ಹೋರಾಟ ಸಂಭವ        ಇಂದು ಚಿಕ್ಕಮಗಳೂರಲ್ಲಿ ಸಿಎಂ ಮೀಟಿಂಗ್​ - ಅತಿವೃಷ್ಟಿ, ಅನಾವೃಷ್ಟಿ ಕುರಿತು ಚರ್ಚೆ - ಸಿಎಂಗೆ ವರದಿ ನೀಡಲಿರುವ ಡಿಸಿ        ರಾಫೆಲ್​​ ವಿಮಾನ​​​​ ಖರೀದಿ ಹಗರಣ - ಭಾರತವೇ ಅನಿಲ್​ ಅಂಬಾನಿ ಹೆಸರು ಸೂಚಿಸಿತ್ತು - ವಿವಾದಕ್ಕೆ ತುಪ್ಪ ಸುರಿದ ಹೊಲೆಂಡೆ ಹೇಳಿಕೆ        ಭುಗಿಲೆದ್ದಿರುವ ರಫೇಲ್​​ ಡೀಲ್​ ಹಗರಣ - ಪ್ರಕಟಣೆ ಹೊರಡಿಸಿದ ಫ್ರಾನ್ಸ್​​ ಸರ್ಕಾರ - ಕಂಪನಿಗಳ ಮೇಲೆ ಹಸ್ತಕ್ಷೇಪ ಇಲ್ಲವೆಂದು ಸ್ಪಷ್ಟನೆ       
Breaking News

ವಂದಿಸುವೆ ಗುರುವ ಶ್ರೀ ಸತ್ಯಸಂಧ ಮುನಿಯ

Thursday, 14.06.2018, 3:03 AM       No Comments

ಶ್ರೀಮನ್ಮದ್ವಾಚಾರ್ಯರ ಪರಂಪರೆಯಲ್ಲಿ ಬಂದ ಯತಿಶಿರೋಮಣಿಗಳಲ್ಲಿ ಮಹಾಮಹಿಮರಾದ ಶ್ರೀ ಸತ್ಯಸಂಧತೀರ್ಥರು ಪ್ರಮುಖರು. ಉತ್ತರಾದಿಮಠದ ಗುರುಪರಂಪರೆಯಲ್ಲಿ 25ನೆಯ ಯತಿಶ್ರೇಷ್ಠರಾಗಿ 1784ರಿಂದ 1794ರವರೆಗೆ ಸರ್ವಜ್ಞಪೀಠದಲ್ಲಿ ವಿರಾಜಮಾನರಾಗಿದ್ದರು.

ಪೂರ್ವಾಶ್ರಮ

ಶ್ರೀ ಸತ್ಯಸಂಧತೀರ್ಥರ ಪೂರ್ವಾಶ್ರಮದ ನಾಮ ಹಾವೇರಿ ರಾಮಾಚಾರ್ಯ. ಬಿದರಹಳ್ಳಿಯ ಅಶ್ವತ್ಥನಾರಾಯಣದೇವರ ಅನುಗ್ರಹದಿಂದ ಜನಿಸಿದ ರಾಮಾಚಾರ್ಯರು ಸವಣೂರಿನ ಶ್ರೀ ಸತ್ಯಬೋಧತೀರ್ಥರ ಪ್ರೀತಿಯ ಶಿಷ್ಯರು. ಇವರ ಹೆಚ್ಚಿನ ವಿದ್ಯಾಭ್ಯಾಸವೆಲ್ಲ ಸತ್ಯಬೋಧರಲ್ಲಿಯೇ ನಡೆಯಿತು.

ವೇದಾಂತ ಸಾಮ್ರಾಜ್ಯಕ್ಕೆ ಅಧಿಪತಿ

ಪ್ರಚಂಡ ವಾಗ್ಮಿಗಳೂ ಮತ್ತು ಸಹನಶೀಲರೂ ಆಗಿದ್ದು ಸಮಾಜಕ್ಕೆ ಸ್ಪಂದಿಸುವ ಕೌಶಲವುಳ್ಳ ರಾಮಾಚಾರ್ಯರ ಗುರುಭಕ್ತಿ, ಪ್ರತಿಭೆ-ಪಾಂಡಿತ್ಯಗಳನ್ನು ಮನಗಂಡ ಸತ್ಯಬೋಧತೀರ್ಥರು ಶ್ರೀರಾಮದೇವರ ಪ್ರೇರಣೆಯಂತೆ ಚತುರಾಶ್ರಮ ನೀಡಿ, ಶ್ರೀ ಸತ್ಯಸಂಧತೀರ್ಥ ಎಂದು ನಾಮಕರಣ ಮಾಡಿ ಉತ್ತರಾದಿಮಠದ ಸರ್ವಜ್ಞಪೀಠದಲ್ಲಿ ಪಟ್ಟಾಭಿಷೇಕಿಸಿದರು.

ಗಯಾಕ್ಷೇತ್ರ ಸಂದರ್ಶನ

ಆಶ್ರಮದ ನಂತರ ಧರ್ಮಪ್ರಚಾರ ಮತ್ತು ಶಿಷ್ಯಕೋಟಿಯನ್ನು ಅನುಗ್ರಹಿಸಲು ಅನೇಕ ತೀರ್ಥಕ್ಷೇತ್ರಗಳನ್ನು ಸಂಚರಿಸುತ್ತ ಗಯಾಕ್ಷೇತ್ರಕ್ಕೆ ಭೇಟಿಯಿತ್ತರು. ಅಲ್ಲಿನ ಗಯಾವಾಡರು ಧನಕನಕಗಳ ಆಶೆಗಾಗಿ ವಿಷ್ಣುಮಂದಿರ ಪ್ರವೇಶಿಸದಂತೆ ತಡೆದು ಬಾಗಿಲು ಮುಚ್ಚಿದಾಗ ಸಾಕ್ಷಾತ್ ನಾರಾಯಣನೇ ಪ್ರಸನ್ನನಾಗಿ ಬಾಗಿಲು ತೆರೆದು ಇವರಿಗೆ ದರ್ಶನ ನೀಡಿದ್ದು ಅಪೂರ್ವ ಘಟನೆ. ಇಂದಿಗೂ ಗಯಾದ ವಿಷ್ಣಪಾದ ದೇವಸ್ಥಾನದಲ್ಲಿ ಉತ್ತರಾದಿಮಠದ ಸ್ವಾಮಿಗಳಿಗೆ ದೇವಸ್ಥಾನದ ಗೌರವ-ಮರ್ಯಾದೆಗಳನ್ನು ನೀಡಿ ಬರಮಾಡಿಕೊಳ್ಳಲಾಗುತ್ತದೆ.

ಮಹಿಷಿಯ ಮಹಾಮಹಿಮ

ಉಡುಪಿಯಿಂದ ಹಿಂದಿರುಗಿ ಬರುವಾಗ ನಂದನ ಸಂವತ್ಸರದ ಜ್ಯೇಷ್ಠ ಶುದ್ಧ ದ್ವಿತೀಯದಂದು ಶಿವಮೊಗ್ಗ ಬಳಿಯ ಮಹಿಷಿಕ್ಷೇತ್ರದ ಅಶ್ವತ್ಥನಾರಾಯಣನ ಸನ್ನಿಧಿಯಲ್ಲಿ ವೃಂದಾವನಸ್ಥರಾದರು. ಉತ್ತರಾದಿಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ನೇತೃತ್ವದಲ್ಲಿ ಇದೇ ಜೂನ್ 15ರಂದು ಶ್ರೀ ಸತ್ಯಸಂಧತೀರ್ಥರ ಆರಾಧನೆ ಜರುಗಲಿದೆ.

ಶ್ರೀಗಳ ಪವಾಡಗಳು

ಕಾಶಿಯಲ್ಲಿ ಗಂಗಾಪೂಜೆಯ ದಿನದಂದು ಮೊರದ ಬಾಗಿನ ಸಮರ್ಪಿಸುತ್ತಿದ್ದಾಗ ಸಾಕ್ಷಾತ್ ಭಾಗೀರಥಿದೇವಿಯೇ ಇವರ ಕೈಗಳಿಂದ ಬಾಗಿನ ಸ್ವೀಕರಿಸಿದ್ದು, ಪಂಢರಪುರದ ಪಾಂಡುರಂಗನೇ ಮಾನವರೂಪದಿಂದ ಬಂದು ತಪ್ತಮುದ್ರಾಧಾರಣೆ ಪಡೆದಿದ್ದು ಇವರ ಜ್ಞಾನ, ಭಕ್ತಿ, ವೈರಾಗ್ಯಗಳಿಗೆ ಜಲ್ವಂತ ನಿದರ್ಶನ. ವ್ಯಾಖ್ಯಾನಚತುರರೂ, ಮಹಾ ಮೇಧಾವಿಗಳೂ ಆಗಿದ್ದ ಶ್ರೀ ಸತ್ಯಸಂಧತೀರ್ಥರು ಪುರುಷಸೂಕ್ತ ಹಾಗೂ ವಿಷ್ಣುಸಹಸ್ರನಾಮಕ್ಕೆ ರಚಿಸಿದ ವ್ಯಾಖ್ಯಾನಗಳು ಸಾರಸ್ವತಲೋಕಕ್ಕೆ ನೀಡಿದ ಅಪೂರ್ವ ಕೊಡುಗೆಗಳು.

|ಮನೋಹರ ಜೋಶಿ

Leave a Reply

Your email address will not be published. Required fields are marked *

Back To Top