Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಲೊಕೇಷನ್ ಟ್ರ್ಯಾಕಿಂಗ್​ಗೆ ಹೈಪರ್​ಟ್ರಾಕ್

Wednesday, 02.08.2017, 3:00 AM       No Comments

| ಐ.ಎನ್. ಬಾಲಸುಬ್ರಹ್ಮಣ್ಯ

ಭಾರತದಲ್ಲಿ ಇಂದು ಬೇಡಿಕೆಗನುಗುಣವಾಗಿ ಸೇವೆ ಹಾಗೂ ವಸ್ತುಗಳನ್ನು ಒದಗಿಸುವ ನವೋದ್ಯಮಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ನವೋದ್ಯಮಗಳಿಗೆ ತಮ್ಮ ಡೆಲಿವರಿಯ ಜಾಡು ಪತ್ತೆಯ(ಟ್ರ್ಯಾಕಿಂಗ್) ಅಗತ್ಯವಿರುತ್ತದೆ. ಅದಕ್ಕಾಗಿ ತಂತ್ರಜ್ಞಾನ ಅಳವಡಿಕೆಯ ಅಗತ್ಯವಿದ್ದು, ತಮ್ಮ ಸೇವೆಗಳನ್ನು ಒದಗಿಸಲು ಆಂತರಿಕವಾಗಿ ಅಭಿವೃದ್ಧಿ ಮಾಡಿಕೊಂಡ ಮೂಲ ತಂತ್ರಜ್ಞಾನದ ಜತೆಗೆ, ಹೆಚ್ಚುವರಿ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಹಣ ಹಾಗೂ ಸಮಯ ಎರಡನ್ನೂ ವ್ಯಯಿಸಬೇಕಾಗುತ್ತದೆ. ಸಣ್ಣ-ಪುಟ್ಟ ನವೋದ್ಯಮಗಳಿಗೆ ಇದು ಸಾದ್ಯವಾಗುವುದಿಲ್ಲ. ಇದನ್ನು ಗಮನಿಸಿದ ಫ್ಯೂಚರ್ ಗ್ರೂಪ್​ನ ಮಾಜಿ ಅಧ್ಯಕ್ಷ ಹಾಗೂ ಸರಣಿ ಉದ್ಯಮಿ ಕಷ್ಯಪ್ ದೇವೂರಾ ಉದ್ಯಮಗಳು ಹಾಗೂ ಅವುಗಳ ಗ್ರಾಹಕರಿಗೆ ಟ್ರ್ಯಾಕಿಂಗ್ ಪರಿಹಾರ ಒದಗಿಸುವ ಹೈಪರ್​ಟ್ರಾಕ್ ಎಂಬ ನವೋದ್ಯಮ ಆರಂಭಿಸಿದರು.

ಹೈಪರ್​ಟ್ರಾಕ್ 2015ರ ಅಕ್ಟೋಬರ್ ತಿಂಗಳಿನಲ್ಲಿ ಕಷ್ಯಪ್ ಹಾಗೂ ತಪನ್ ಪಂಡಿತ ಅವರು ಆರಂಭಿಸಿದ ನವೋದ್ಯಮ. ತಮ್ಮ ಉಳಿತಾಯದ ಹಣದಿಂದ ತಲಾ 3,00,000 ಅಮೆರಿಕನ್ ಡಾಲರ್ ಬಂಡವಾಳ ಹೂಡಿ ಉದ್ಯಮ ಆರಂಭಿಸಿದರು. ಒಂದು ವರ್ಷದ ಹಿಂದೆಯಷ್ಟೇ ತನ್ನ ಸೇವೆ ಆರಂಭಿಸಿರುವ ಹೈಪರ್​ಟ್ರಾಕ್, ಈಗಾಗಲೆ ಅನೇಕ ಕಂಪನಿಗಳಿಗೆ ತನ್ನ ಸೇವೆ ಒದಗಿಸುತ್ತಿದೆ. ದೆಹಲಿ ಮೂಲದ ಈ ನವೋದ್ಯಮ, ಉದ್ಯಮಗಳು ಹಾಗೂ ಗ್ರಾಹಕರಿಗೆ ವಸ್ತುಗಳು ಮತ್ತು ಜನರು ಚಲಿಸುತ್ತಿರುವ ಸ್ಥಳವನ್ನು ಕ್ಷಣಾರ್ಧದಲ್ಲಿ ಟ್ರಾ್ಯಕ್ ಮಾಡುವ ಅವಕಾಶವನ್ನು ಅಪ್ಲಿಕೇಷನ್ ಪೋ›ಗ್ರಾಂ ಇಂಟರ್​ಫೇಸ್ (ಎಪಿಐ)ಮೂಲಕ ಒದಗಿಸುತ್ತಿದೆ. ಇದರಿಂದ, ಉದ್ಯಮಗಳು ತಮ್ಮ ಆಪ್​ನಲ್ಲಿ ಸ್ಥಳ(ಲೊಕೇಷನ್) ಪತ್ತೆಮಾಡುವ ಫೀಚರ್ ಹೊಂದಬಹುದು. ಆರ್ಡರ್ ಟ್ರ್ಯಾಕಿಂಗ್, ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಉದ್ಯೋಗಿಗಳ ಮೇಲೆ ನಿಗಾ, ಮಾರಾಟ ಮತ್ತು ಸೇವಾ ತಂಡಗಳ ವೆಚ್ಚ ನಿರ್ವಹಣೆಗಾಗಿ ಸ್ವಯಂಚಾಲಿತ ಮೈಲೇಜ್ ಟ್ರ್ಯಾಕಿಂಗ್, ಡೆಲಿವರಿ ಉದ್ಯೋಗಿಗಳ ಲೊಕೇಷನ್ ಆಧರಿಸಿ ಕಾರ್ಯ ನಿಯೋಜನೆ, ಜನರ ನೇರ ಲೊಕೇಷನ್ ಷೇರಿಂಗ್ ಹಾಗೂ ತಮ್ಮ ಬಳಕೆದಾರರು ಭೇಟಿ ನೀಡುವ ಸ್ಥಳಗಳ ಆಧಾರದ ಮೇಲೆ ಅವರ ವಿವರಗಳನ್ನು ದಾಖಲಿಸುವಂಥ ವಿಷಯಗಳಿಗೆ ಉದ್ಯಮಗಳು ಹೈಪರ್​ಟ್ರಾಕ್​ನ ಸೇವೆ ಬಳಸಿಕೊಳ್ಳುತ್ತಿವೆ. ಸಾಮಾನ್ಯ ಜನರೂ ತಮ್ಮ ಹತ್ತಿರದವರು ಸಂಚರಿಸುತ್ತಿರುವ ಸ್ಥಳವನ್ನು ಲೊಕೇಟ್ ಮಾಡಲು ನೆರವಾಗುವ ಆಪ್ ಅನ್ನು ಇತ್ತೀಚೆಗೆ ಹೈಪರ್​ಟ್ರಾಕ್ ಪರಿಚಯಿಸಿದೆ.

ಈವರೆಗೆ ಅನೇಕ ಹೂಡಿಕೆದಾರರು ಹಾಗೂ ಹೂಡಿಕೆ ಕಂಪನಿಗಳಿಂದ ಸುಮಾರು ಒಂಭತ್ತು ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಪಡೆದಿರುವ ಹೈಪರ್ ಟ್ರಾಕ್, ಸದ್ಯದಲ್ಲೇ ಅಮೆರಿಕಕ್ಕೂ ತನ್ನ ಸೇವೆ ವಿಸ್ತರಿಸುವ ಯೋಜನೆ ರೂಪಿಸಿದೆ. ಇದರೊಂದಿಗೆ ಆಸ್ಟ್ರೇಲಿಯಾ, ಮಧ್ಯಪ್ರಾಚ್ಯ ಹಾಗೂ ಯೂರೋಪ್​ನ ಕೆಲ ಭಾಗಗಳಿಗೆ ತನ್ನ ಸೇವೆಯನ್ನು ವಿಸ್ತರಿಸುವ ಉದ್ದೇಶ ಹೊಂದಿದೆ. ಝೊಮ್ಯಾಟೋ, ಗೋಐಬಿಬೋ, ಹೌಸ್​ಜಾಯ್, ರೆಡ್​ಬಸ್, ಫ್ರೆಷ್​ಡೆಸ್ಕ್, ಡೆಲ್ಹಿವರಿಯಂತಹ ನವೋದ್ಯಮಗಳು ಹೈಪರ್​ಟ್ರಾಕ್​ನ ಸೇವೆಯನ್ನು ಬಳಸುತ್ತಿವೆ.

ಹೈಪರ್​ಟ್ರಾಕ್ ಆರಂಭಕ್ಕೂ ಮುನ್ನ ಕಷ್ಯಪ್, ರೈಟ್ ಹಾಫ್ ಡಾಟ್​ಕಾಂ ಎಂಬ ಕಂಪನಿ ಆರಂಭಿಸಿ ಅದನ್ನು ಅಮೆರಿಕದ ಕಂಪನಿಯೊಂದಕ್ಕೆ ಮಾರಿದರು. ನಂತರ 2007ರಲ್ಲಿ ಚೌಪಾಟಿ ಬಝಾರ್ ಎಂಬ ಮೊಬೈಲ್ ಕಾಮರ್ಸ್ ಕಂಪನಿ ಆರಂಭಿಸಿದರು. ಕೆಲ ವರ್ಷಗಳ ನಂತರ ಇದು ಭಾರತದ ಮುಂಚೂಣಿ ರೀಟೇಲರ್, ಫ್ಯೂಚರ್ ಬಝಾರ್​ನಲ್ಲಿ ಲೀನವಾಯಿತು. 2012ರಲ್ಲಿ ಚಾಲೋ ಎಂಬ ಮೊಬೈಲ್ ಪೇಮೆಂಟ್ ಸೇವೆ ಒದಗಿಸುವ ಕಂಪನಿ ಆರಂಭಿಸಿ ಇದನ್ನೂ ಸ್ಯಾನ್​ಫ್ರಾ್ಯನ್ಸಿಸ್ಕೋ ಮೂಲದ ರೆಸ್ಟೋರೆಂಟ್ ಕಾಯ್ದಿರಿಸುವ ಮುಂಚೂಣಿ ಕಂಪನಿ ಓಪನ್ ಟೇಬಲ್​ಗೆ ಮಾರಾಟ ಮಾಡಿದರು. ತಪನ್ ಇದೀಗ ಕವರ್​ಫಾಕ್ಸ್ ಆಗಿ ಬದಲಾಗಿರುವ ಗ್ಲಿಟೆನ್​ಬರ್ಗ್​ನಲ್ಲಿ ಉದ್ಯೋಗ ಆರಂಭಿಸಿ, ನಂತರ ಚಾಲೋನಲ್ಲಿ ಸರ್ವರ್ ತಂಡವನ್ನು ಮುನ್ನಡೆಸುತ್ತಿದ್ದರು.

ಒಂದರ ಹಿಂದೊಂದರಂತೆ ನವೋದ್ಯಮಗಳು ಆರಂಭವಾಗುತ್ತಿರುವ ಸ್ಟಾರ್ಟಪ್​ಗಳ ಈ ಸುವರ್ಣ ಯುಗದಲ್ಲಿ ಅವುಗಳಿಗೆ ನೆರವಾಗುವಂಥ ಪರಿಹಾರ ಒದಗಿಸುವ ಸೇವೆ ಆರಂಭಿಸಿ ನವೋದ್ಯಮಗಳ ಕಾರ್ಯನಿರ್ವಹಣೆ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ಒದಗಿಸಿರುವ ಕಷ್ಯಪ್ ಹಾಗೂ ತಪನ್​ರ ಪ್ರಯತ್ನ ನಿಜವಾಗಿಯೂ ಶ್ಲಾಘನೀಯ.

ಲೇಖಕರು: ಸ್ಟಾರ್ಟಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

Leave a Reply

Your email address will not be published. Required fields are marked *

Back To Top