Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಲೇಡೀಸ್ ಟಾಯ್ಲೆಟ್​ಗೆ ನುಗ್ಗಿ ಮುಜುಗರಕ್ಕೀಡಾದ ರಾಹುಲ್

Friday, 13.10.2017, 3:00 AM       No Comments

ಛೋಟಾ ಉದಯಪುರ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್​ಗೆ ತೆರಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆಕಸ್ಮಿಕವಾಗಿ ಮಹಿಳಾ ಶೌಚಗೃಹಕ್ಕೆ ತೆರಳಿ ಮುಜುಗರ ಅನುಭವಿಸಿದ್ದಾರೆ. ಅವರು ಲೇಡಿಸ್ ಟಾಯ್ಲೆಟ್​ನಿಂದ ಹೊರ ಬರುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಯುವಕರೊಂದಿಗೆ ಸಂವಾದ ನಡೆಸಲು ರಾಹುಲ್, ಛೋಟಾ ಉದಯಪುರಕ್ಕೆ ಆಗಮಿಸಿದ್ದರು. ಸಭೆ ಮುಗಿಸಿ ಅವರು ಟಾಯ್ಲೆಟ್​ಗೆ ತೆರಳಿದ್ದರು. ಆದರೆ ಗಡಿಬಿಡಿಯಲ್ಲಿ ಅವರು ನುಗ್ಗಿದ್ದು ಮಹಿಳಾ ಟಾಯ್ಲೆಟ್​ಗೆ! ರಕ್ಷಣೆಗಿದ್ದ ಎಸ್​ಪಿಜಿ ಕಮಾಂಡೋಗಳಿಗೆ ಇದು ಗಮನಕ್ಕೆ ಬಂದಿದೆ. ಈ ಬಗ್ಗೆ ತಿಳಿಸಲು ಒಳಗೆ ತೆರಳುತ್ತಿದ್ದಂತೆ, ರಾಹುಲ್ ಗಾಂಧಿ ತಪ್ಪಿನ ಅರಿವಾಗಿ ವಾಪಸಾಗಿದ್ದಾರೆ. ಈ ವೇಳೆ ಸ್ಥಳದಲ್ಲಿ ನೆರೆದಿದ್ದವರು ಗೊಳ್ಳೆಂದು ನಕ್ಕಿದ್ದಾರೆ. ನಂತರ ರಾಹುಲ್ ಸ್ಥಳದಲ್ಲಿ ನಿಲ್ಲದೇ ಹೊರ ನಡೆದಿದ್ದಾರೆ.

ಟಾಯ್ಲೆಟ್ ಹೊರಭಾಗದಲ್ಲಿ ಪುರುಷರ ಶೌಚಗೃಹವೋ ಅಥವಾ ಮಹಿಳೆಯರ ಶೌಚಗೃಹವೋ ಎಂದು ಗುರುತಿಸುವ ಚಿಹ್ನೆ ಇರಲಿಲ್ಲ. ಗುಜರಾತಿ ಭಾಷೆಯಲ್ಲಿ ‘ಮಹಿಳೆಯರ ಶೌಚಗೃಹ’ ಎಂದು ಬರೆದುಕೊಂಡಿತ್ತು. ಈ ವೇಳೆ ಯಾರನ್ನೂ ಪ್ರಶ್ನಿಸದೇ ಒಳಗೆ ನುಗ್ಗಿದ್ದು ಎಡವಟ್ಟಿಗೆ ಕಾರಣ ಎನ್ನಲಾಗಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top