Friday, 18th August 2017  

Vijayavani

1. ಕಾಂಗ್ರೆಸ್‌ನಲ್ಲಿ ಎಡಪಂಥಿಯರಿಗೆ ಮಾತ್ರ ಮಣೆ- ಚುನಾವಣಾ ತಂತ್ರಗಾರ ಕೈ ಗುಡ್‌ಬೈ- ಅಲ್ಪ ಸಂಖ್ಯಾತರರನ್ನ ಅತಿಯಾಗಿ ಓಲೈಸ್ತಿದ್ಯಾ ಕಾಂಗ್ರೆಸ್‌.? 2. ಜೆಡಿಎಸ್​ ಭಿನ್ನರಿಗೆಲ್ಲಾ ಇಲ್ಲಾ ಟಿಕೆಟ್​ – 3 ಕ್ಷೇತ್ರಗಳ ಟಿಕೆಟ್​​​​​​​​ಗೆ ಖಾತ್ರಿ ನೀಡದ ಖರ್ಗೆ- ತ್ರಿಶಂಕು ಸ್ಥಿತಿಯಲ್ಲಿ ಜೆಡಿಎಸ್​​​​​​ ಭಿನ್ನರ ಸ್ಥಿತಿ 3. ಸಿಲಿಕಾನ್ ಸಿಟಿಗೆ ಖತರ್ನಾಕ್​ ಗ್ಯಾಂಗ್​ ಎಂಟ್ರಿ- ಸೆಕ್ಯೂರಿಟಿ ಡ್ರೆಸ್​​​ನಲ್ಲಿ ಮಾಡ್ತಿದ್ದಾರೆ ಕಳ್ಳತನ- ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಕೃತ್ಯ 4. ರಾಜೀನಾಮೆ ಬಳಿಕ ವಿಶಾಲ್‌ ಸಿಕ್ಕಾ ಮೊದಲ ಮಾತು- ನನ್ನ ಜೀವನದ ದುಃಖದ ವಿಚಾರ ಅಂತಾ ಬೇಸರ- ಅತ್ತ ನಾನು ಕಾರಣನಲ್ಲ ಎಂದ ನಾರಾಯಣ ಮೂರ್ತಿ 5. ಯುಪಿ ಆಸ್ಪತ್ರೆಯಲ್ಲಿ ಮಕ್ಕಳ ಸಾವು ಪ್ರಕರಣ- ಹೈಕೋರ್ಟ್‌ನಿಂದ ಯೋಗಿ ಸರ್ಕಾರಕ್ಕೆ ತರಾಟೆಗೆ- ಕೂಡಲೇ ವರದಿ ನೀಡಲು ಸೂಚನೆ
Breaking News :

ಲೀಡರ್ ಅಲ್ಲ ಮಾಸ್ ಲೀಡರ್

Wednesday, 22.03.2017, 10:57 AM       No Comments

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ವಾರ್​ಗಳು ಅಪರೂಪವೇನಲ್ಲ. ಮೊನ್ನೆಯಷ್ಟೇ ‘ಅರ್ಧಸತ್ಯ’ ಶೀರ್ಷಿಕೆ ಸಂಬಂಧ ಎರಡು ಚಿತ್ರತಂಡಗಳ ಮಧ್ಯೆ ಸಣ್ಣ ಸಂಘರ್ಷ ಉಂಟಾಗಿದೆ. ಈಗ ಅದೇ ಹಾದಿಯಲ್ಲಿ ಮತ್ತೆರಡು ಚಿತ್ರತಂಡಗಳೂ ಸಾಗಿದ್ದು, ‘ಲೀಡರ್’ ಚಿತ್ರದ ಶೀರ್ಷಿಕೆ ಈಗ ವಿವಾದದ ಕೇಂದ್ರವಾಗಿದೆ.

ಶಿವರಾಜ್​ಕುಮಾರ್ ಅಭಿನಯದ ‘ಲೀಡರ್’ ಚಿತ್ರದ ಚಿತ್ರೀಕರಣ ಬಹುಪಾಲು ಮುಕ್ತಾಯವಾಗಿದೆ. ಆದರೆ, ಅಸಲಿಗೆ ಆ ಶೀರ್ಷಿಕೆ ನಮ್ಮದು ಎಂದು ನಿರ್ದೇಶಕ, ನಿರ್ವಪಕ ಎ.ಎಂ.ಆರ್. ರಮೇಶ್ ಹೇಳಿಕೊಂಡಿದ್ದಾರೆ. ಈ ಸಂಬಂಧ ಆರು ತಿಂಗಳ ಹಿಂದೆಯೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ರಮೇಶ್ ಪತ್ರ ಬರೆದಿದ್ದು, ಇದೀಗ ಮಂಡಳಿಯು ‘ಲೀಡರ್’ ಚಿತ್ರದ ನಿರ್ವಪಕ ತರುಣ್ ಶಿವಪ್ಪ ಅವರಿಗೆ ಶೀರ್ಷಿಕೆ ಬಳಸದಂತೆ ಸೂಚನೆ ನೀಡಿದೆ. ಇದರಿಂದ ಈ ವಿವಾದ ಈಗ ಮತ್ತಷ್ಟು ತೀವ್ರವಾಗಿದೆ.

‘ವಸಿಷ್ಟ ಪಿಕ್ಚರ್ಸ್ ಬ್ಯಾನರ್​ನಲ್ಲಿ ‘ಲೀಡರ್’ ಎಂಬ ಹೆಸರನ್ನು 2010ರಲ್ಲೇ ನೋಂದಣಿ ಮಾಡಿಸಿದ್ದು, ಚಿತ್ರಕಥೆ ಹಾಗೂ ಆ ಸಂಬಂಧ ಅಧ್ಯಯನಕ್ಕಾಗಿ 15 ಲಕ್ಷ ರೂ. ಗೂ ಅಧಿಕ ಮೊತ್ತ ವಿನಿಯೋಗಿಸಿದ್ದೇನೆ. ಆದರೆ ಈಗ ತರುಣ್ ಟಾಕೀಸ್ ಸಂಸ್ಥೆಯು ‘ಲೀಡರ್’ ಚಿತ್ರ ಮಾಡಲು ಹೊರಟಿದೆ. ಅದನ್ನು ಆಕ್ಷೇಪಿಸಿ ಕಳೆದ 6 ತಿಂಗಳಲ್ಲಿ ಮಂಡಳಿಗೆ 4 ಪತ್ರಗಳನ್ನು ಬರೆದ ಮೇಲೆ ಈಗ, ಅವರಿಗೆ ಆ ಶೀರ್ಷಿಕೆ ಬಳಸದಂತೆ ಸೂಚಿಸಿರುವುದಾಗಿ ಮಂಡಳಿ ಹೇಳಿರುವ ಬಗ್ಗೆ ಪತ್ರ ಬಂದಿದೆ’ ಎನ್ನುತ್ತಾರೆ ರಮೇಶ್.

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ವಪಕ ತರುಣ್ ಶಿವಪ್ಪ, ‘2014ರಲ್ಲಿ ನಾವು ‘ಲೀಡರ್’ ಶೀರ್ಷಿಕೆಯಲ್ಲಿ ಚಿತ್ರ ಮಾಡಬೇಕು ಎಂದುಕೊಂಡಿದ್ದು ನಿಜ. ಆಗ ‘ಹೆಬ್ಬುಲಿ’ ಚಿತ್ರದ ನಿರ್ವಪಕ ರಘುನಾಥ್, ನನ್ನ ಬಳಿ ‘ಲೀಡರ್’ ಶೀರ್ಷಿಕೆ ಇದೆ ಬಳಸಿಕೊಳ್ಳಿ ಎಂದಿದ್ದರು.

ಅವರು ಹಾಗಂದ ಮೇಲೆ ‘ಲೀಡರ್’ ಹೆಸರಲ್ಲಿ ಜಾಹೀರಾತು ನೀಡಿದ್ದೆವು. ಆಗ ಎ.ಎಂ.ಆರ್. ರಮೇಶ್, ತಮ್ಮ ಬಳಿ ‘ಲೀಡರ್’ ಶೀರ್ಷಿಕೆ ಇರುವುದಾಗಿ ಹೇಳಿ ಆಕ್ಷೇಪಿಸಿದ್ದಾರೆ’ ಎಂದು ವಿವಾದದ ಮತ್ತೊಂದು ವರ್ಷನ್ ಹೇಳುತ್ತಾರೆ ನಿರ್ವಪಕ ತರುಣ್ ಶಿವಪ್ಪ.

‘ನಾಲ್ಕು ವರ್ಷಗಳ ಹಿಂದೆ ಶಿವರಾಜ್​ಕುಮಾರ್ ನಾಯಕತ್ವದಲ್ಲಿ ಚಿತ್ರ ಮಾಡುವ ಉದ್ದೇಶದಿಂದ ಕಥೆಗಾರ ಅಜಯ್ಕುಮಾರ್ ‘ಮಾಸ್ ಲೀಡರ್’ ಎಂಬ ಶೀರ್ಷಿಕೆ ನೋಂದಾಯಿಸಿಕೊಂಡಿದ್ದರು. ಬಳಿಕ ಅವರು ನಮಗೆ ಆ ಶೀರ್ಷಿಕೆ ಕೊಟ್ಟಿದ್ದು, ನಾವು ‘ಮಾಸ್ ಲೀಡರ್’ ಹೆಸರಿನಲ್ಲಿ ಸಿನಿಮಾ ಮಾಡುತ್ತೇವೆ’ ಎಂಬ ಸ್ಪಷ್ಟನೆ ತರುಣ್ ಅವರದ್ದು. ಒಟ್ಟಿನಲ್ಲಿ ಈ ಶೀರ್ಷಿಕೆ ವಿವಾದ ಎಲ್ಲಿಗೆ ತಲುಪುತ್ತೋ ಎಂಬ ಕುತೂಹಲದಿಂದ ನೋಡುವಂತಾಗಿದೆ ಸ್ಯಾಂಡಲ್​ವುಡ್.

Leave a Reply

Your email address will not be published. Required fields are marked *

Back To Top