Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಲಿವಿಂಗ್ ರೂಮಿಗೆ ಜೀವ ತುಂಬಿ

Saturday, 09.09.2017, 3:00 AM       No Comments

ಬೆಳಗಾಗುತ್ತಿದ್ದಂತೆ ಪೇಪರ್ ಓದುತ್ತ ಕೂರುವ ಅಪ್ಪ, ಅಪರೂಪಕ್ಕೆ ಬರುವ ನೆಂಟರಿಷ್ಟರು, ಸಂಜೆ ಒಟ್ಟಾಗಿ ಕುಳಿತು ಟಿವಿಯಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡುವ ಮನೆಮಂದಿ, ಎಲ್ಲರೂ ಮಲಗಿದಮೇಲೆ ಪಿಸುಗುಡುತ್ತ ಸೋಫಾದಲ್ಲಿ ಕುಳಿತು ಮೊಬೈಲ್​ನಲ್ಲಿ ಹರಟುವ ಮಕ್ಕಳು ಎಲ್ಲರಿಗೂ ಮುಖ್ಯ ಸ್ಥಳವೇ ಲಿವಿಂಗ್ ರೂಂ. ಅದು ಕೇವಲ ದೊಡ್ಡ ಹಾಲ್ ಅಲ್ಲ. ಅಲ್ಲಿ ದಿನನಿತ್ಯದ ಬಹುತೇಕ ಚಟುವಟಿಕೆಗಳು ನಡೆಯುತ್ತವೆ. ಹಾಗಾಗಿಯೇ, ಮನೆಯ ಕೇಂದ್ರಭಾಗವಾಗಿರುವ ಲಿವಿಂಗ್​ರೂಂ ಆಕರ್ಷಕವಾಗಿದ್ದರೆ, ಮನಸಿಗೆ ಮುದ ನೀಡುವಂತಿದ್ದರೆ ಎಲ್ಲರಿಗೂ ಖುಷಿ.

| ಸುಷ್ಮಾ ಎನ್. ಚಕ್ರೆ ಬೆಂಗಳೂರು

ಮನೆ ಎಷ್ಟೇ ಚಿಕ್ಕದಾಗಿರಲಿ ಅಥವಾ ದೊಡ್ಡದೇ ಇರಲಿ. ಮನೆಯವರೆಲ್ಲ ಸೇರುವ ಜಾಗವೆಂದರೆ ಅದು ಲಿವಿಂಗ್ ರೂಂ. ಮನೆ ಹೊರಗಿನಿಂದ ನೋಡಲು ಎಷ್ಟು ಸುಂದರವಾಗಿರಬೇಕೋ ಒಳಾಂಗಣವೂ ಅಷ್ಟೇ ಸುಂದರವಾಗಿದ್ದು, ಮನಸೆಳೆಯುವಂತಿದ್ದರೆ ಎಲ್ಲರೂ ವಾವ್! ಎನ್ನುತ್ತಾರೆ. ವಿಶಾಲವಾದ ಲಿವಿಂಗ್ ರೂಂ, ಅದಕ್ಕೊಪು್ಪವ ಪೇಂಟಿಂಗ್, ಫರ್ನಿಚರ್ ಎಲ್ಲವೂ ಇದ್ದರೆ ಇನ್ನಷ್ಟು ಕಳೆಗಟ್ಟುತ್ತದೆ. ಮನೆಗೆ ಬಂದವರು ಮೊದಲು ನೋಡುವುದೇ ಲಿವಿಂಗ್ ರೂಂ ಆದ್ದರಿಂದ ಅದನ್ನು ಒಪ್ಪವಾಗಿಟ್ಟರೆ ಫಸ್ಟ್ ಇಂಪ್ರೆಷನ್ ಬೆಸ್ಟ್ ಎನಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಲಿವಿಂಗ್ ರೂಮಿನ ವಿನ್ಯಾಸದ ಜತೆಗೆ ಗೋಡೆಯ ಬಣ್ಣ, ಅಲ್ಲಿಡುವ ವಸ್ತುಗಳು, ಪೀಠೋಪಕರಣಗಳ ಬಗ್ಗೆ ಹೆಚ್ಚು ಆದ್ಯತೆ ನೀಡಿದರೆ ಉತ್ತಮ. ಗೋಡೆಗಳಿಗೆ ಯಾವ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವ ವಿಧ ಹಾಗೂ ಬಣ್ಣದ ಸೋಫಾ ಸೆಟ್ ಇರಿಸಿಕೊಳ್ಳಬೇಕು. ಕಲಾಕೃತಿಗಳ ಜೋಡಣೆ, ಫೋಟೋ ಫ್ರೇಮ್ ಕರ್ಟನ್​ಗಳ ಆಯ್ಕೆಯ ಬಗ್ಗೆ ಸೂಕ್ತ ಮಾಹಿತಿ ಪಡೆದುಕೊಂಡರೆ ಮನೆಯ ಲಿವಿಂಗ್ ರೂಂ ಆಕರ್ಷಕವಾಗಿ ಕಾಣುತ್ತದೆ.

ಬಣ್ಣಗಳ ಆಯ್ಕೆಯಲ್ಲಿ ಚೂಸಿಯಾಗಿ

ಮನೆಯ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಲ್ಪನೆಗಳಿರುತ್ತವೆ. ಬಹುತೇಕರು ಅದಕ್ಕೆ ಬಳಸುವ ಬಣ್ಣಗಳ ವಿಷಯದಲ್ಲಿ ಹೆಚ್ಚು ಗಮನಹರಿಸುತ್ತಾರೆ. ಅದರಂತೆ ಒಂದೊಂದು ಕೋಣೆಗೆ ಒಂದೊಂದು ರೀತಿಯ ಬಣ್ಣಗಳನ್ನು ಹಚ್ಚಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಇದೆ. ಅದರಂತೆ ಲಿವಿಂಗ್ ರೂಮಿಗೆ ಕೆಂಪು ಬಣ್ಣ ಬೆಸ್ಟ್ ಎಂದು ಹೇಳಲಾಗುತ್ತದೆ. ಕೆಂಪು ಖುಷಿಯ ಬಣ್ಣವಾದ್ದರಿಂದ ಸಂಭ್ರಮಗಳಲ್ಲಿ, ಸಮಾರಂಭಗಳಲ್ಲಿ, ಹಬ್ಬಗಳಲ್ಲಿ ಹೆಚ್ಚಾಗಿ ಕೆಂಪು ಬಣ್ಣವನ್ನೇ ಬಳಸಲಾಗುತ್ತದೆ. ಲಿವಿಂಗ್ ರೂಂ ಗೋಡೆಗಳಿಗೆ ಕೆಂಪು ಬಣ್ಣ ಇದ್ದರೆ ಮನಸ್ಸಿನಲ್ಲಿ ಹಬ್ಬದ ವಾತಾವರಣ ಮೂಡುತ್ತದೆ. ಇಡೀ ಕುಟುಂಬ ಅಥವಾ ಅತಿಥಿಗಳ ಜತೆ ಕುಳಿತು ಹರಟುವ ಸ್ಥಳ ಸಂತಸವನ್ನು ಸೂಸುತ್ತಿರಬೇಕು ಎನ್ನುವ ಉದ್ದೇಶದಿಂದ ಈ ಬಣ್ಣ ಬೆಸ್ಟ್ ಎನ್ನಲಾಗುತ್ತದೆ. ಹಾಗಾಗಿ, ಲಿವಿಂಗ್ ರೂಮಿಗೆ ಬಳಸುವ ಬಣ್ಣಗಳಲ್ಲಿ ಕೆಂಪಿಗೂ ಆದ್ಯತೆ ನೀಡಿದರೆ ಕಲರ್​ಫುಲ್ ಆಗೂ ಇರುತ್ತದೆ, ವೈಜ್ಞಾನಿಕವಾಗಿಯೂ ಒಳ್ಳೆಯದು. ಕೆಂಪು ಬಣ್ಣದ ಜತೆಗೆ ನೀಲಿ, ಹಳದಿ, ಬಿಳಿ ಬಣ್ಣಗಳನ್ನು ಮಿಕ್ಸ್ ಮಾಡಬಹುದು. ಹಾಗೇ, ಅಲ್ಲಲ್ಲಿ ವಾಲ್ ಹ್ಯಾಂಗಿಂಗ್ ತೂಗುಬಿಟ್ಟರೆ ಕಲಾತ್ಮಕವಾಗಿ ಕಾಣುತ್ತದೆ.

ಪ್ಲ್ಯಾನಿಂಗ್ ಬೇಕು

ಲಿವಿಂಗ್ ರೂಂ ಜಾಗದ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು. ಯಾವ ಜಾಗದಲ್ಲಿ ಯಾವುದನ್ನು ಇರಿಸಬೇಕು ಎಂಬುದರ ಬಗ್ಗೆ ಮೊದಲೇ ಯೋಚಿಸಿ ತಯಾರಿ ನಡೆಸಿಕೊಳ್ಳಿ. ಚಿಕ್ಕ ಜಾಗವಿದ್ದರೆ ಹೆಚ್ಚಿನ ಪೀಠೋಪಕರಣಗಳ ಬಳಕೆ ಸಾಧ್ಯವಾಗುವುದಿಲ್ಲ. ಹಾಗಾಗಿ, ಜಾಗ ವಿಶಾಲವಾಗಿ ಕಾಣುವಂತೆ ವಿನ್ಯಾಸಗೊಳಿಸಿ.

ಪೀಠೋಪಕರಣಗಳ ಆಯ್ಕೆ

ವಿಸ್ತಾರವಾದ ಲಿವಿಂಗ್ ರೂಮನ್ನು ಯಾವ ರೀತಿಯ ಪೀಠೋಪಕರಣಗಳಿಂದ ಅಲಂಕರಿಸುತ್ತೀರಿ ಎಂಬುದು ನಿಮ್ಮ ಅಭಿರುಚಿಗೆ ಬಿಟ್ಟ ವಿಚಾರ. ಹಾಗೇ, ನೀವು ಆಯ್ಕೆ ಮಾಡುವ ಪೀಠೋಪಕರಣಗಳು ಆ ಕೊಠಡಿಯ ಸೌಂದರ್ಯವನ್ನು ನಿರ್ಧರಿಸಬಲ್ಲವು ಎಂಬುದನ್ನು ಕೂಡ ನೀವು ಮರೆಯುವಂತಿಲ್ಲ. ಮರದ ಪೀಠೋಪಕರಣಗಳನ್ನು ಬಳಸಿದರೆ ಸಾಂಪ್ರದಾಯಿಕ ಲುಕ್ ಬರುತ್ತದೆ. ಲಿನನ್ ಹೊದಿಕೆ ಇರುವ ಬೆಲ್ಜಿಯನ್ ಬರ್ಜೀಸ್ ಕುರ್ಚಿ, ಫ್ರೆಂಚ್ ಗಿಲ್ಟ್ ಸೋಫಾ, ವಿಭಿನ್ನ ವಿನ್ಯಾಸದ ಸ್ಟೂಲ್​ಗಳು ಕೂಡ ಅಂದವಾದ ಲುಕ್ ನೀಡುತ್ತವೆ.

ಕರ್ಟನ್​ಗಳು

ಲಿವಿಂಗ್ ರೂಮಿನಲ್ಲಿ ವಿಶಾಲವಾದ ಕಿಟಕಿಗಳಿದ್ದರೆ ಬೆಳಕು ಚೆನ್ನಾಗಿ ಬರುತ್ತದೆ. ಹಗಲು ಹೊತ್ತಿನಲ್ಲಿ ಕಿಟಕಿ ತೆರೆದಿಟ್ಟರೆ ಫ್ಯಾನ್​ನ ಅಗತ್ಯವೂ ಇರುವುದಿಲ್ಲ. ಆ ಕಿಟಕಿಗಳ ಕಂಬಿ, ಬಾಗಿಲು ಸುಂದರವಾಗಿದ್ದರೆ ಸಾಲದು. ಅದಕ್ಕೆ ಹಾಕುವ ಕರ್ಟನ್​ಗಳು ಕೂಡ ಚೆನ್ನಾಗಿರಬೇಕು. ಗೋಡೆಯ ಬಣ್ಣಕ್ಕೆ ಹೊಂದುವ ಬಣ್ಣದ ಕಾಂಬಿನೇಷನ್​ನ, ವಿಂಟೇಜ್ ಲುಕ್​ನ ಕರ್ಟನ್​ಗಳು ಆಕರ್ಷಕವಾಗಿ ಕಾಣುತ್ತದೆ.

ಲೈಟಿಂಗ್ಸ್

ಮನೆಗೆ ಸಾಂಪ್ರದಾಯಿಕ ಲುಕ್ ಬೇಕೆಂದು ಅನಿಸಿದರೆ ಬೆಲ್ಜಿಯನ್ ಕ್ರಿಸ್ಟಲ್​ಗಳಿರುವ ಗೊಂಚಲಿನಾಕಾರದ ತೂಗುದೀಪಗಳನ್ನು ಅಳವಡಿಸಬಹುದು. ಮಾಡರ್ನ್ ಲುಕ್ ಬೇಕಾದರೆ ಮನೆಗೆ ಒಪ್ಪುವ ವಿವಿಧ ಆಕೃತಿಯ ಮಾಡರ್ನ್ ದೀಪಗಳನ್ನು ಸೂಕ್ತ ಜಾಗದಲ್ಲಿ ಇರಿಸಬೇಕು. ಟ್ರೆಡಿಷನಲ್ ಲುಕ್ ಇಷ್ಟವಾದರೆ ಅಲ್ಲಲ್ಲಿ ಲಾಟೀನ್​ಗಳನ್ನು, ಗೂಡುದೀಪಗಳನ್ನು, ಕ್ಯಾಂಡಲ್​ಗಳನ್ನು ಇಟ್ಟು ಅಲಂಕರಿಸುವುದು ಉತ್ತಮ.

Leave a Reply

Your email address will not be published. Required fields are marked *

Back To Top