Sunday, 23rd July 2017  

Vijayavani

1. ಕೊಪ್ಪಳದ ಖೋಟಾನೋಟು ಪ್ರಕರಣಕ್ಕೆ ಹೊಸ ಟ್ವಿಸ್ಟ್​- ಐವರಲ್ಲಿ ಮೂವರು ಆರೋಪಿಗಳು ಅರೆಸ್ಟ್- ವೈಯಕ್ತಿಕ ದ್ವೇಷಕ್ಕೆ ಬಲಿಯಾಗಿದ್ದ ಉಪನ್ಯಾಸಕ 2. ಮಳೆಗೆ ಹಾರಂಗಿ ಜಲಾಶಯ ಬಹುತೇಕ ಭರ್ತಿ- ಡ್ಯಾಂನಿಂದ 1,200 ಕ್ಯೂಸೆಕ್ ನೀರು ಬಿಡುಗಡೆ- ನದಿಪಾತ್ರದ ಜನರಿಗೆ ಎಚ್ಚರದಿಂದಿರಲು ಸೂಚನೆ 3. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಸಮಾವೇಶ- ಸಮುದಾಯದಿಂದ ಬಿಎಸ್​ವೈಗೆ ಸನ್ಮಾನ- ಬಿಜೆಪಿ ಹಲವು ಮುಖಂಡರು ಹಾಜರ್‌ 4. ಕಾಂಗ್ರೆಸ್​ ಕದ ತಟ್ಟಿದ ಜೆಡಿಎಸ್​ ರೆಬೆಲ್ಸ್​- ಇನ್ನೆರಡು ತಿಂಗಳಲ್ಲಿ ಸೇರ್ಪಡೆ ಖಚಿತ- ಇನ್ನೂ ಏಳು ಜನ ಬರ್ತಾರೆಂದು ಜಮೀರ್​ ಬಾಂಬ್​ 5. ವನಿತೆಯರ ವಿಶ್ವಕಪ್‌ನಲ್ಲಿ ಇಂಡೋ- ಇಂಗ್ಲೆಂಡ್‌ ಫೈಟ್- ಟಾಸ್‌ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ- ಟೀಂ ಇಂಡಿಯಾಗೆ ದೇಶ ಜನರಿಂದ ಆಲ್​ ದ ಬೆಸ್ಟ್​
Breaking News :

ಲಿಂಗಸುಗೂರಿನಲ್ಲಿ ಲವ್ ಜಿಹಾದ್ ಶಂಕೆ

Tuesday, 21.03.2017, 8:26 AM       No Comments

ರಾಯಚೂರು: ವಯಸ್ಸು, ವಾಸಸ್ಥಳ ಕುರಿತು ಸುಳ್ಳು ದಾಖಲೆ ಸೃಷ್ಟಿಸಿ ಅಪ್ರಾಪ್ತ ಹಿಂದು ಹುಡುಗಿಯನ್ನು ಯುವಕನೊಬ್ಬ ಮದುವೆಯಾಗಲು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ರಾಯಚೂರು ಜಿಲ್ಲೆ ಲಿಂಗಸುಗೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮಾ.6ರಂದು ವಿವಾಹ ನೋಂದಣಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಯುವಕ, ಬಾಲಕಿ ನಾಪತ್ತೆಯಾಗಿದ್ದಾರೆ. ಮೂಲತಃ ಬೀದರ್​ನವರಾದ ಪ್ರೇಮಿಗಳು, ಸ್ನೇಹಿತರ ಸಹಾಯದೊಂದಿಗೆ ಬಾಲಕಿಯನ್ನು ಮೇಜರ್ ಎನ್ನುವ ರೀತಿಯಲ್ಲಿ ದಾಖಲೆ ಸೃಷ್ಟಿಸಿರುವುದು ಕಂಡು ಬಂದಿದೆ.

ಬೀದರ್​ನ ಮುನಿಯಾರ್ ತಾಲೀಮ್ ಬಡಾವಣೆಯ ಶೇಖ್ ಜಮೀಲ್ ಮತ್ತು ರೇಣುಕಾ ಕಾಲೇಜಿನಲ್ಲಿ ಪಿಯು ಮೊದಲ ವರ್ಷ ಓದುತ್ತಿರುವ ಬಾಲಕಿ ಪರಾರಿಯಾಗಿರುವ ಪ್ರೇಮಿಗಳು. ಮಾ.2ರಿಂದ ಇಬ್ಬರು ನಾಪತ್ತೆಯಾಗಿದ್ದು, ತಲೆ ಮರೆಸಿಕೊಂಡಿದ್ದಾರೆ.

ಬಾಲಕಿಯ ಆಧಾರ್ ಕಾರ್ಡ್ ಮತ್ತು ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ಪ್ರಕಾರ ಜನ್ಮದಿನಾಂಕ 12.06.2001. ಈ ಪ್ರಕಾರ ಬಾಲಕಿಗೆ 16 ವರ್ಷ. ಈ ಕಾರಣಕ್ಕಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಮೆದಕಿನಾಳ ಗ್ರಾಮ ಪಂಚಾಯಿತಿಯಲ್ಲಿ ಬಾಲಕಿಯ ವಾಸಸ್ಥಳ ಪ್ರಮಾಣ ಪತ್ರ ಪಡೆಯುವುದರ ಜತೆಗೆ ತಾಲೂಕು ವೈದ್ಯಾಧಿಕಾರಿಯಿಂದಲೂ 18 ವರ್ಷಗಳು ಪೂರ್ತಿಗೊಂಡಿವೆ ಎನ್ನುವ ರೀತಿಯಲ್ಲಿ ನಕಲಿ ಪ್ರಮಾಣ ಪತ್ರ ಪಡೆಯಲಾಗಿದೆ. ಮತದಾರರ ಪಟ್ಟಿಯಲ್ಲಿ ಸೇರಿಸಲು ಅರ್ಜಿ ಸಲ್ಲಿಸಲಾಗಿದೆ. ಈ ದಾಖಲೆಗಳನ್ನು ಇಟ್ಟುಕೊಂಡು ಮಾ.6ರಂದು ಲಿಂಗಸುಗೂರಿನ ಉಪನೋಂದಣಿ ಕಚೇರಿಗೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿ ಸಲ್ಲಿಸಿದ ನಂತರ ಪರಾರಿಯಾಗಿದ್ದಾರೆ. ಅರ್ಜಿಗೆ ಶೇಖ್ ಜಮೀಲ್​ನ ತಾಯಿ ಮೆಹರುನ್ನಿಸಾ ಬೇಗಂ, ಬೀದರ್​ನ ಅಲಿ ಮಹ್ಮದ್ ಖಾನ್, ಮಸ್ಕಿಯ ಅಲ್ಲಾವುದ್ದೀನ್ ಸಾಕ್ಷಿದಾರರಾಗಿ ಸಹಿ ಹಾಕಿದ್ದು, ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ಬಾಲಕಿಯನ್ನು ಅಪಹರಿಸಲಾಗಿದೆ ಎಂದು ಬೀದರ್​ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಾ.18ರಂದು ದೂರು ದಾಖಲಾಗಿದೆ.

ಬಾಲಕಿಯನ್ನು ಅಪಹರಿಸಲಾಗಿದ್ದು, ಇದೊಂದು ಲವ್ ಜಿಹಾದ್ ಪ್ರಕರಣವಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮದುವೆಯಾಗಲು ಪ್ರಯತ್ನ ನಡೆಸಲಾಗಿದೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

| ಪುಟ್ಟಾ ಪಾಟೀಲ್ ನ್ಯಾಯವಾದಿ, ಬೀದರ್

Leave a Reply

Your email address will not be published. Required fields are marked *

eleven + five =

Back To Top