Friday, 20th April 2018  

Vijayavani

ಬಿಜೆಪಿ ಅಭ್ಯರ್ಥಿಗಳ 3 ನೇ ಪಟ್ಟಿ ರಿಲೀಸ್​- 59 ಅಭ್ಯರ್ಥಿಗಳ ಹೆಸರು ಪ್ರಕಟ- ವರುಣಾ, ಬಾದಾಮಿ ಇನ್ನೂ ನಿಗೂಢ        ಜೆಡಿಎಸ್​ನಿಂದ ಸೆಕೆಂಡ್​ ಲಿಸ್ಟ್​ ರಿಲೀಸ್​- ಕೈ, ಕಮಲ ರೇಬಲ್​ಗಳಿಗೆ ಮಣೆ- 57 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ        ಎಚ್​ಡಿಕೆ ಆಸ್ತಿ ವಿವರ ಘೋಷಣೆ- ಕುಮಾರಸ್ವಾಮಿ 12 ಕೋಟಿ ಒಡೆಯ- ಗುತ್ತೇದಾರ್​ಗಿಂತ ಪತ್ನಿ ಶ್ರೀಮಂತೆ        ನಟಿ ಉಮಾಶ್ರೀ ಆಸ್ತಿ ವಿವರ ಘೋಷಣೆ- ಸಾಕವ್ವ 1 ಕೆ.ಜಿ ಚಿನ್ನಾಭರಣದ ಒಡತಿ- ಅವಲಂಬಿತರು ಯಾರು ಇಲ್ಲವೆಂದು ಪ್ರಮಾಣಪತ್ರ        ಚಾಮುಂಡೇಶ್ವರಿಯಲ್ಲಿ ಸಿಎಂ, ವರುಣಾದಲ್ಲಿ ಯತೀಂದ್ರ- ಅಪ್ಪ-ಮಗ ನಾಮಪತ್ರ ಸಲ್ಲಿಕೆ- ಭಾರಿ ಬೆಂಬಲಿಗರ ಜತೆ ತೆರಳಿ ನಾಮಿನೇಷನ್​​​​​​        ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ- ಮನೆಗೆ ಹೋಗಲು ವರುಣನ ಅಡ್ಡಿ- ಸಂಜೆಯ ಮಳೆಗೆ ವಾಹನ ಸವಾರರು ಕಂಗಾಲು       
Breaking News

ಲಾಭದಲ್ಲಿದ್ದಾಳೆ ಅಲಮೇಲಮ್ಮ!

Saturday, 20.05.2017, 3:00 AM       No Comments

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಸುನಿ ನಿರ್ದೇಶನದ ‘ಆಪರೇಷನ್ ಅಲಮೇಲಮ್ಮ’ ಇಷ್ಟೊತ್ತಿಗಾಗಲೇ ರಿಲೀಸ್ ಆಗಿರಬೇಕಿತ್ತು. ಆದರೆ ಶ್ರದ್ಧಾ ಶೀನಾಥ್ ಮತ್ತು ರಿಷಿ ನಟನೆಯ ಈ ಚಿತ್ರ ಕಾರಣಾಂತರಗಳಿಂದ ತಡವಾಗುತ್ತಿದೆ. ಸಿನಿಮಾ ಪೂರ್ಣಗೊಂಡಿರುವುದರಿಂದ ಸುನಿ ಕೂಡ ಬೇರೆ ಚಿತ್ರದ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಪ್ರಸ್ತುತ ಅವರು ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್​ನ ‘ಚಮಕ್’ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಶೇ. 50 ಭಾಗ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಮತ್ತು ಇತರೆ ದೃಶ್ಯಗಳ ಶೂಟಿಂಗ್​ಗಾಗಿ ವಿದೇಶಕ್ಕೆ ತೆರಳಲು ಚಿತ್ರತಂಡ ಸಜ್ಜಾಗುತ್ತಿದೆ. ಈ ನಡುವೆ ‘ಅಲಮೇಲಮ್ಮ’ನ ಅಡ್ಡದಿಂದ ಹೊಸ ಸುದ್ದಿಯೊಂದು ಕೇಳಿಬರುತ್ತಿದೆ. ಈ ಚಿತ್ರದ ಬಿಡುಗಡೆಗೂ ಮೊದಲೇ ನಿರ್ವಪಕರು ಲಾಭದ ರುಚಿ ಕಂಡಿದ್ದಾರೆ!

ಬಿಡುಗಡೆಗೂ ಮೊದಲೇ ಆರ್ಭಟಿಸುವುದು ಸುನಿ ಸಿನಿಮಾಗಳ ಸ್ಪೆಷಾಲಿಟಿ. ಅದು ‘ಅಲಮೇಲಮ್ಮ’ ವಿಚಾರದಲ್ಲಿಯೂ ಮರುಕಳಿಸಿತ್ತು. ಟ್ರೇಲರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿದ್ದ ಈ ಚಿತ್ರದ ವಿತರಣೆ ಹಕ್ಕುಗಳು ಮತ್ತು ಕಿರುತೆರೆ ಪ್ರಸಾರ ಹಕ್ಕುಗಳು ಮಾರಾಟವಾಗಿವೆ. ವಿತರಣೆ ಹಕ್ಕುಗಳನ್ನು ‘ಹೊಂಬಾಳೆ ಫಿಲ್ಮ್ಸ್’ನ ಕಾರ್ತಿಕ್ ಗೌಡ ಖರೀದಿ ಮಾಡಿದ್ದಾರೆ. ಇದರಿಂದ ‘ಅಲಮೇಲಮ್ಮ’ನ ನಿರ್ವಪಕರಿಗೆ ಎಷ್ಟು ಆದಾಯ ಬಂದಿದೆ? ಈ ಪ್ರಶ್ನೆಗೆ ಚಿತ್ರತಂಡ ಪಕ್ಕಾ ಲೆಕ್ಕ ಕೊಡುವುದಿಲ್ಲವಾದರೂ ‘ನಿರ್ವಪಕರು ಲಾಭದಲ್ಲಿದ್ದಾರೆ’ ಎನ್ನುತ್ತಿವೆ ಮೂಲಗಳು.

ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮತ್ತು ಅಭಿಷೇಕ್ ಕಾಸರಗೋಡು ಛಾಯಾಗ್ರಹಣದಲ್ಲಿ ‘ಅಲಮೇಲಮ್ಮ’ ಮೂಡಿಬಂದಿದ್ದು, ಸದ್ಯದ ಪ್ಲ್ಯಾನ್ ಪ್ರಕಾರ ಜೂನ್ ಎರಡನೇ ವಾರದ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಬಿಡುಗಡೆಗೂ ಮೊದಲೇ ನಿರ್ವಪಕರಿಗೆ ಲಾಭದ ರುಚಿ ತೋರಿಸಿರುವ ಈ ಚಿತ್ರ ಥಿಯೇಟರ್​ಗಳಲ್ಲಿ ಇನ್ನೆಷ್ಟು ಕಮಾಯಿ ಮಾಡಲಿದೆ ಎಂಬ ಕುತೂಹಲ ಗಾಂಧಿನಗರಿಗರಲ್ಲಿ ಮನೆ ಮಾಡಿದೆ.

 

Leave a Reply

Your email address will not be published. Required fields are marked *

Back To Top