Wednesday, 21st March 2018  

Vijayavani

ಮುಂದಿನ ಚುನಾವಣೆಯಲ್ಲಿ ಮೋದಿ ಸೋಲ್ತಾರೆ- ಇಂದಿರಾಗಾಂಧಿಯಂತೆ ನಮ್ಮನ್ನೂ ಗೆಲ್ಲಿಸಿ- ಚಿಕ್ಕಮಗಳೂರಿನಲ್ಲಿ ರಾಹುಲ್‌ ಟಾಕ್‌ವಾರ್‌        ಕುಡಿದು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ- ಕಾರು, ಬೈಕ್‌ ಮರಕ್ಕೆ ಡಿಕ್ಕಿ ಹೊಡೆಸಿದ- ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ ಅವಾಂತರ        ಜೆಡಿಎಸ್ ಬಂಡಾಯ ಶಾಸಕರ ಅನರ್ಹತೆ ವಿಚಾರ- ಹೈಕೋರ್ಟ್​ಗೆ ಅಭಿಪ್ರಾಯ ತಿಳಿಸಿದ ಸ್ಪೀಕರ್​- ಮುಚ್ಚಿದ ಲಕೋಟೆಯಲ್ಲಿ ಎಜಿ ಮೂಲಕ ರವಾನೆ        5 ಕೋಟಿ ಫೇಸ್​ಬುಕ್‌ಗಳ ಮಾಹಿತಿ ಹ್ಯಾಕ್- ಕಾಂಗ್ರೆಸ್‌ ವಿರುದ್ಧ ಬಿಜೆಪಿ ಗಂಭೀರ ಆರೋಪ- ರವಿಶಂಕರ್‌ ಆರೋಪಕ್ಕೆ ಕೈತಿರುಗೇಟು        ಬೈಕ್ ಸವಾರನ ಮೇಲೆ ಬಿದ್ದ ಬೃಹತ್ ಮರ- ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರು- ಹೆಲ್ಮೆಟ್​ ಪುಡಿಪುಡಿ ತಲೆ ಸೇಫ್​       
Breaking News

ಲವ್​ಜಿಹಾದ್​ಗೆ ಯುವತಿ ಮರುಳು?

Wednesday, 20.12.2017, 3:02 AM       No Comments

ಶಿವಮೊಗ್ಗ/ಮೈಸೂರು: ಮಂಗಳೂರಿನಲ್ಲಿ ಲವ್​ಜಿಹಾದ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೊಂದು ಪ್ರಕರಣ ಸುದ್ದಿಯಾಗಿದೆ. ಅಲ್ಲದೆ ಅನುಷಾ ಹೇಳಿಕೆಗಳು ಪ್ರಕರಣಕ್ಕೆ ತಿರುವು ನೀಡುತ್ತಿವೆ.

ಶಿವಮೊಗ್ಗ ಮೂಲದ ಅನುಷಾ ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದು, ಅದೇ ಊರಿನ ಜಾವೇದ್ ಖಾನ್ ಎಂಬ ಉದ್ಯಮಿ ಯನ್ನು ಮದುವೆಯಾಗಿದ್ದಾರೆ. ಆದರೆ, ಜಾವೇದ್ ಖಾನ್​ಗೆ ಈಗಾಗಲೇ ಇಬ್ಬರ ಜತೆ ಮದುವೆಯಾಗಿ, ವಿಚ್ಚೇದನವಾಗಿದೆ. ಫೇಸ್​ಬುಕ್​ನಲ್ಲಿ ಅನುಷಾ-ಜಾವೇದ್ ಪರಿಚಯವಾಗಿ ಮದುವೆಯೂ ಆಗಿದ್ದಾರೆ. ಆದರೆ, ಅನುಷಾ ಒಮ್ಮೆ ಮೋಸ ಹೋಗಿದ್ದೇನೆಂದು, ಇನ್ನೊಮ್ಮೆ ಆತನೊಂದಿಗೆ ಬಾಳುತ್ತೇನೆಂದು ಹೇಳುತ್ತಿರುವುದು ಪಾಲಕರನ್ನು ಚಿಂತೆಗೀಡು ಮಾಡಿದೆ. ಈಗ ಶಿವಮೊಗ್ಗದ ಪಾಲಕರ ಮನೆಯಲ್ಲಿದ್ದ ಅನುಷಾಳನ್ನು ಜಾವೇದ್​ಖಾನ್ ಮೈಸೂರಿಗೆ ಕರೆದೊಯ್ದಿದ್ದು, ಪಾಲಕರು ಶಿವಮೊಗ್ಗದಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಅನುಷಾ ಕುಟುಂಬಸ್ಥರಿಂದ ಜೀವ ಬೆದರಿಕೆ ಇದೆ ಎಂದು ಜಾವೇದ್ ಮೈಸೂರಿನಲ್ಲಿ ಕೇಸ್ ನೀಡಿದ್ದಾರೆ.

ಪತಿಯ ವಿರುದ್ಧವೇ ದೂರು

ಜಾವೇದ್​ನನ್ನು ಮದುವೆಯಾದ ಬಳಿಕವೇ ಅನುಷಾಗೆ ಆತ ಈಗಾಗಲೇ 2 ಮದುವೆಯಾಗಿರುವುದು ಗೊತ್ತಾಗಿದೆ. ಹೀಗಿದ್ದರೂ ಆತ ಅನುಷಾಗೆ ಕಿರುಕುಳ ನೀಡುತ್ತಿದ್ದರಿಂದ ಪತಿ ವಿರುದ್ಧವೇ ಮೈಸೂರು ಪೊಲೀಸ್ ಕಮಿಷನರ್​ಗೆ ದೂರು ಸಲ್ಲಿಸಿದ್ದಳು. ಸ್ವ ಇಚ್ಛೆಯಿಂದ ಪಾಲಕರೊಂದಿಗೆ ಹೋಗುತ್ತೇನೆ ಎಂದು ಲಿಖಿತ ಹೇಳಿಕೆ ನೀಡಿದ್ದಳು. ಡಿ.5ರಂದು ಪಾಲಕರು ಅನುಷಾಳನ್ನು ಶಿವಮೊಗ್ಗದ ಮನೆಗೆ ಕರೆದೊಯ್ದಿದ್ದರು.

ಉಲ್ಟಾ ಹೊಡೆದ ಅನುಷಾ

ಮೊದಲು ಪತಿಯ ವಿರುದ್ಧವೇ ದೂರು ದಾಖಲಿಸಿದ್ದ ಅನುಷಾ ಈಗ ಉಲ್ಟಾ ಹೊಡೆದಿದ್ದು, ‘ನಾನೇ ಇಷ್ಟ ಪಟ್ಟು ಮದುವೆಯಾಗಿ ಮತಾಂತರಗೊಂಡಿದ್ದೇನೆ. ಜಾವೇದ್​ಗೆ ಮೊದಲೇ ಮದುವೆಯಾಗಿ ವಿಚ್ಛೇದನ ನೀಡಿರುವುದು ತಿಳಿದಿತ್ತು’ ಎಂದು ತಿಳಿಸಿದ್ದಾರೆ. ಪ್ರೀತಿಸಿ ವರ್ಷದ ಹಿಂದೆಯೇ ಮದುವೆಯಾಗಿದ್ದೇವೆ. ಸುಮ್ಮನಿದ್ದ ಪಾಲಕರು ಈಗ ಬೇರೆಯವರ ಮಾತುಕೇಳಿ ವಿವಾದ ಸೃಷ್ಟಿತ್ತಿದ್ದಾರೆ ಎಂದು ಜಾವೇದ್ ತಿಳಿಸಿದ್ದು, ಪ್ರಕರಣ ಹೊಸ ರೂಪ ಪಡೆದಿದೆ.

Leave a Reply

Your email address will not be published. Required fields are marked *

Back To Top