Tuesday, 25th September 2018  

Vijayavani

ಬಗರ್​ಹುಕುಂ ಭೂಮಿ ಪರಭಾರೆ ಆರೋಪ- ಮಾಜಿ ಡಿಸಿಎಂ ಆರ್. ಅಶೋಕ್​​ ಅರ್ಜಿ ವಜಾ, ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು        ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ- ಕಾಂಗ್ರೆಸ್ ಗುರಿಯಾಗಿಸಿ ನಾನು ಹೇಳಿಲ್ಲ- ಎನ್​​.ಮಹೇಶ್ ತಿರುಗೇಟು        ಶಸ್ತ್ರಚಿಕಿತ್ಸೆ ಬಳಿಕ ದರ್ಶನ್ ಮೊದಲ ದರ್ಶನ- ಆಕ್ಸಿಡೆಂಟ್​ ಕೇಸಲ್ಲಿ ಬಲಿಪಶುವಾದ್ರಾ ಆಂಥೋಣಿ..?- ಅಪಘಾತಕ್ಕೂ ಮುನ್ನ ಪಾರ್ಟಿ        ಹಾಸನದಲ್ಲಿ ಮುಸ್ಲಿಂ ಯುವತಿ ಪ್ರೇಮ - ನಿನಗಿಷ್ಟ ಬಂದವರ ಕಡೆ ಹೋಗುವಂತೆ ಕೋರ್ಟ್​ ತೀರ್ಪು- ಹುಡುಗನ ಬಳಿ ಕಳಿಸದೆ ಹೈಡ್ರಾಮಾ        ನವೆಂಬರ್​​ನಲ್ಲಿ ಮತ್ತೆ ಸನ್ನಿ ಶೋಗೆ ಸಿದ್ಧತೆ- ಕನ್ನಡಪರ ಸಂಘಟನೆಗಳಿಂದ ವಿರೋಧ- ಬೆಂಗಳೂರಿಗೆ ಬರದಂತೆ ಪ್ರತಿಭಟನೆಗೆ ನಿರ್ಧಾರ        ಹ್ಯಾರೀಸ್ ಪುತ್ರ ನಲಪಾಡ್ ಈಗ ಬಾಸ್- ಎರಡು ಮುಕ್ಕಾಲು ಲಕ್ಷ ಕೊಟ್ಟು 8055 ನಂಬರ್ ಖರೀದಿ-  ದಿಗ್ವಿಜಯ ನ್ಯೂಸ್ ಎಕ್ಸ್​ಕ್ಲೂಸಿವ್       
Breaking News

ರೋಗಿಗಳಿಗೂ ಸಿಗಲಿದೆ ಸ್ಮಾರ್ಟ್ ಕಾರ್ಡ್

Tuesday, 26.12.2017, 3:05 AM       No Comments

| ಅಭಿಷೇಕ ಡಿ. ಪುಂಡಿತ್ತೂರು ಬೆಂಗಳೂರು

ವೈದ್ಯಕೀಯ ಚಿಕಿತ್ಸೆಯ ಫೈಲ್ ಹಿಡಿದು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ರೋಗಿಗಳ ತಲೆಬಿಸಿಗಿನ್ನು ಪೂರ್ಣ ವಿರಾಮ ಬೀಳಲಿದೆ. ಎಲ್ಲ ರೋಗಿಗಳಿಗೂ ಸ್ಮಾರ್ಟ್ ಕಾರ್ಡ್ ವಿತರಿಸುವ ವ್ಯವಸ್ಥೆ ಜಾರಿಗೆ ಯೋಜನೆಯೊಂದು ಸಿದ್ಧವಾಗಿದೆ.

ರೋಗಿಗಳ ಕಾಯಿಲೆ, ಪಡೆದಿರುವ ಚಿಕಿತ್ಸೆಗಳ ವಿವರಗಳನ್ನು ಎಲ್ಲ ಆಸ್ಪತ್ರೆಗಳಲ್ಲಿ ಸುಲಭವಾಗಿ ತಿಳಿದುಕೊಳ್ಳಲು ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್(ಇಎಂಆರ್)ಯೋಜನೆ ಸಿದ್ಧವಾಗಿದೆ. ಕೆಲ ಅವಧಿಯಲ್ಲಿ ಖಾಸಗಿ ವಲಯದಲ್ಲಿ ಇದು ಜಾರಿಯಾಗಲಿದ್ದು, ಸ್ಮಾರ್ಟ್ ಕಾರ್ಡ್ ಮೂಲಕ ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ರೋಗಿಗಳ ವೈದ್ಯಕೀಯ ವಿವರ ತಿಳಿಯಲು ಸಾಧ್ಯವಾಗಲಿದೆ. ಕರ್ನಾಟಕ ಸಾರ್ವಜನಿಕ ಆರೋಗ್ಯ ನೀತಿಯಡಿ ರಚಿಸಲಾದ ವಿಶೇಷ ಕಾರ್ಯಪಡೆ, ಈ ಯೋಜನೆಯನ್ನು ಜಾರಿಗೆ ತರುತ್ತಿದೆ.

ಇಎಂಆರ್ ಜಾರಿ ಅಗತ್ಯ: ಕರ್ನಾಟಕ ಜ್ಞಾನ ಆಯೋಗ ಸರ್ಕಾರಿ ಆಸ್ಪತ್ರೆಗಳ ಕುಂದುಕೊರತೆಗಳ ಬಗ್ಗೆ ವರದಿ ನೀಡಿ, ಕೆಲ ಶಿಫಾರಸುಗಳನ್ನು ನೀಡಿತ್ತು.

ಕರ್ನಾಟಕ ಸಾರ್ವಜನಿಕ ಆರೋಗ್ಯ ನೀತಿಯಡಿ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ, ಇಎಂಆರ್ ಯೋಜನೆ ಅನುಷ್ಠಾನ ಸಂಬಂಧ ಇಂಗಿತ ವ್ಯಕ್ತಪಡಿಸಿದ್ದಾರೆ.

ಒಎಫ್​ಸಿ ಬಳಕೆ: ಡಾಟಾ ರವಾನೆಗಾಗಿ ಆಪ್ಟಿಕಲ್ ಫೈಬರ್ ಕೇಬಲ್(ಒಎಫ್​ಸಿ) ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ. ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಒಎಫ್​ಸಿ ಲಭ್ಯವಿರುವ ಹಿನ್ನೆಲೆಯಲ್ಲಿ ಸುಲಭದಲ್ಲಿ ಸಂಪರ್ಕ ಸಾಧ್ಯ ಎಂದು ವೈದ್ಯಕೀಯ ವಲಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಸಂಪರ್ಕ ದುಸ್ತರ: ಜಿಲ್ಲಾಸ್ಪತ್ರೆ ಹಾಗೂ ನಗರಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಎಂಆರ್ ವ್ಯವಸ್ಥೆ ಜಾರಿಗೊಳಿಸುವ ಅವಕಾಶಗಳಿವೆ. ಆದರೆ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳನ್ನೂ ಸಂರ್ಪಸುವುದು ಕಷ್ಟ ಎಂಬ ಅಭಿಪ್ರಾಯವನ್ನು ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲದಿರುವುದು ಹಾಗೂ ಸಿಬ್ಬಂದಿ ಕೊರತೆಯಿಂದ ವ್ಯವಸ್ಥೆ ಜಾರಿಗೊಳಿಸುವುದು ಕಷ್ಟಕರ ಎಂದು ಕಾರ್ಯಪಡೆಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಅನುಕೂಲವೇನು?

ತುರ್ತು ಸಂದರ್ಭಗಳಲ್ಲಿ ರೋಗಿಗೆ ಚಿಕಿತ್ಸೆ ನೀಡುವುದು, ರೋಗಿಯ ವೈದ್ಯಕೀಯ ವಿವರ ಅರಿಯುವುದು ಸುಲಭವಾಗುತ್ತದೆ. ಚಿಕಿತ್ಸಾ ಕ್ರಮಗಳ ಪುನರಾವರ್ತನೆ ತಪು್ಪತ್ತದೆ. ರೋಗಿಗೆ ನೀಡಲಾದ ಚಿಕಿತ್ಸೆಯ ಸ್ಪಷ್ಟ ಚಿತ್ರಣ ಎಲ್ಲ ಆಸ್ಪತ್ರೆಗಳಲ್ಲೂ ಲಭ್ಯವಾಗುತ್ತದೆ. ಪೇಪರ್ ಫ್ರೀ, ಫೈಲ್​ಗಳಲ್ಲಿ ದಾಖಲೆ ತೆಗೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ರೋಗಿಯನ್ನು ಅರಿಯದೇ, ತಪು್ಪ ಔಷಧ ನೀಡುವ ಪ್ರಮೇಯ ಗಣನೀಯ ಇಳಿಕೆ ಸಾಧ್ಯತೆ

ಸರ್ಕಾರಿ ಆಸ್ಪತ್ರೆಗಳನ್ನು ಬಲಗೊಳಿಸುವ ಹಿನ್ನೆಲೆಯಲ್ಲಿ ಹಲವಾರು ವಿಚಾರಗಳ ಪ್ರಸ್ತಾವನೆ ಇದೆ. ರೋಗಿಗಳಿಗೆ ಸ್ಮಾರ್ಟ್​ಕಾರ್ಡ್ ಒದಗಿಸಿ, ಅವರ ವೈದ್ಯಕೀಯ ದಾಖಲೆಗಳು ಎಲ್ಲ ಆಸ್ಪತ್ರೆಗಳಲ್ಲಿ ಸಿಗುವಂತೆ ಮಾಡುವ ವ್ಯವಸ್ಥೆಗೆ ಸಾಕಷ್ಟು ಸವಾಲುಗಳಿವೆ. ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ.

| ಅಜಯ್ ಸೇಠ್ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ

ಎಲ್ಲ ಆಸ್ಪತ್ರೆಗಳಿಗೂ ಲಿಂಕ್

ರೋಗಿಗಳಿಗೆ ಸ್ಮಾರ್ಟ್​ಕಾರ್ಡ್ ನೀಡುವ ಮೂಲಕ ಮೆಡಿಕಲ್ ಹಿಸ್ಟರಿ ದಾಖಲೀಕರಣಗೊಳಿಸಲಾಗುತ್ತದೆ. ಎಲ್ಲ ಆಸ್ಪತ್ರೆಗಳಿಗೂ ಸಾಫ್ಟ್​ವೇರ್ ಇಂಟರ್ ಲಿಂಕ್ ಮಾಡುವ ಮುಖಾಂತರ ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಬೇಕಾದರೂ ಆ ರೋಗಿಯ ಸಂಪೂರ್ಣ ವಿವರ ಸಿಗುತ್ತದೆ. ಸದ್ಯ ಖಾಸಗಿ ಆಸ್ಪತ್ರೆಗಳ ಪೈಕಿ ಸಮೂಹ ಸಂಸ್ಥೆಯ ಆಸ್ಪತ್ರೆಗಳಲ್ಲಿ ಮಾತ್ರ ಇ- ದಾಖಲೀಕರಣ ವ್ಯವಸ್ಥೆ ಇದೆ. ಆಸ್ಪತ್ರೆ ನಿರ್ವಹಣೆ ಸಾಫ್ಟ್​ವೇರ್ ಮೂಲಕ ರೋಗಿಯ ದಾಖಲೆಗಳನ್ನು ಸಂರಕ್ಷಿಸಲಾಗುತ್ತಿದೆ. ಆದರೆ, ಸದ್ಯಕ್ಕೆ ಒಂದು ಆಸ್ಪತ್ರೆಯಲ್ಲಿರುವ ದಾಖಲೆಗಳನ್ನು ಬೇರೊಂದು ಆಸ್ಪತ್ರೆಯಲ್ಲಿ ನೋಡಲು ಸಾಧ್ಯವಿಲ್ಲ. ಮುಂದಿನ ಕೆಲ ದಿನಗಳಲ್ಲಿ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ರೋಗಿಗಳ ವೈದ್ಯಕೀಯ ವಿವರಗಳನ್ನು ಸ್ಮಾರ್ಟ್​ಕಾರ್ಡ್ ಮೂಲಕ ಪರಸ್ಪರ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಯಾಗಲಿದೆ. ಕ್ರಮೇಣ ಇದನ್ನು ಮೆಡಿಕಲ್ ಸ್ಟೋರ್​ಗಳಿಗೂ ವಿಸ್ತರಿಸಿದಲ್ಲಿ, ರೋಗಿಗಳು ಚಿಕಿತ್ಸೆ ಬಳಿಕ ತೆಗೆದುಕೊಳ್ಳುವ ಔಷಧಗಳ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ಸ್ಮಾರ್ಟ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಬಗ್ಗೆಯೂ ಯೋಜನೆ ರೂಪಿಸಲಾಗಿದೆ.

Leave a Reply

Your email address will not be published. Required fields are marked *

Back To Top