Wednesday, 22nd November 2017  

Vijayavani

1. ಉಗ್ರನ ವಿರುದ್ಧ ಕೊಡಲಿಲ್ಲ ಪಾಕ್ ಸಾಕ್ಷ್ಯ – LET ಕ್ರಿಮಿ ಹಫೀಜ್ ಸಯೀದ್​ಗೆ ಕ್ಲೀನ್​ಚಿಟ್ – ಮನೆಯಿಂದ ಹೊರಬರ್ತಾನೆ ಮುಂಬೈ ದಾಳಿ ಮಾಸ್ಟರ್ ಮೈಂಡ್ 2. ಅಲೆಮಾರಿಗಳ ಮನೆ ತೆರವು ವೇಳೆ ಅಮಾನವೀಯ ವರ್ತನೆ – ನಡುರಸ್ತೆಯಲ್ಲಿ ಮಹಿಳೆಗೆ ಹೆರಿಗೆ – ದಿಗ್ವಿಜಯ ನ್ಯೂಸ್​ ವರದಿಗೆ ಡಿಸಿ ಸ್ಪಂದನೆ 3. ಹೆರಿಗೆ ವೇಳೆ ಮೃತಪಟ್ಟಿದ್ದಾಳೆ ಅಂದ್ರು ಡಾಕ್ಟರ್ಸ್​ – ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಲಂತೆ ಬಾಣಂತಿ – ಮನೆಗೆ ತರೋವಷ್ಟರಲ್ಲಿ ಮತ್ತೆ ಸಾವಿನ ದರ್ಶನ 4. ಕೊಪ್ಪಳ ಜಿಲ್ಲಾಪ್ರವಾಸದಲ್ಲಿ ಎಚ್​ಡಿಡಿ – ಗವಿಮಠಕ್ಕೆ ಮಾಜಿ ಪ್ರಧಾನಿ ಭೇಟಿ – ಇಳಿವಯಸ್ಸಿನಲ್ಲೂ ಕಿಂಡಿಯಲ್ಲೆ ತೆರಳಿ ದರ್ಶನ 5. ಯೂರ್ಟನ್​ ವೇಳೆ ಕಾರಿಗೆ ಲಾರಿ ಡಿಕ್ಕಿ – ಡಿಕ್ಕಿ ಹೊಡೆದ ಲಾರಿಗೆ ಟ್ರಕ್ ಡ್ಯಾಶ್ – ಸೌದಿ ಹೈವೇಯಲ್ಲಿ ಹಾರಿಬಲ್ ಆಕ್ಸಿಡೆಂಟ್
Breaking News :

ರೈತರ ನೆರವಿಗೆ ಫಾರ್ಮ್​ ತಾಝಾ

Wednesday, 15.11.2017, 3:04 AM       No Comments

| ಐ.ಎನ್. ಬಾಲಸುಬ್ರಹ್ಮಣ್ಯ

ಅಮೆರಿಕಾದಲ್ಲಿ ಸ್ವಂತ ಉದ್ಯಮಗಳನ್ನು ಸ್ಥಾಪಿಸಿ, ಅವುಗಳನ್ನು ಮಾರಿ, 2014ರಲ್ಲಿ ಸ್ವಂತ ಇಂಜಿನಿಯರಿಂಗ್ ಡಿವೈಸ್ ಸರ್ವೀಸಸ್ ಕಂಪನಿ, ವಿಜ್ಞಾನಿ ಟೆಕ್ನಾಲಜೀಸನ್ನು ಅಮೆರಿಕಾ ಮೂಲದ ಟೆಕ್ನಾಲಜಿ ಕನ್ಸಲ್ಟಿಂಗ್ ಕಂಪನಿಯೊಂದಕ್ಕೆ ಮಾರಾಟ ಮಾಡಿದರು ಭಾರತೀಯ ಕುಮಾರ್ ರಾಮಚಂದ್ರನ್.

ಮುಂದೇನು ಎಂದು ಯೋಚಿಸುತ್ತಿದ್ದಾಗ, ಅಮೆರಿಕಾದಲ್ಲಿದ್ದಾಗ ನೀವು ಸಾಕಷ್ಟು ಹಣ ಸಂಪಾದಿಸಿದ್ದೀರಿ ಇನ್ನು ಸಮಾಜದ ಮೇಲೆ ಪರಿಣಾಮ ಬೀರುವಂತಹ ಯಾವುದಾದರೂ ಉದ್ಯಮ ಆರಂಭಿಸಿ ಎಂಬ ಮಗಳ ಸಲಹೆಯಂತೆ ಭಾರತದ ಗ್ರಾಮೀಣ ಜನತೆಗೆ ನೆರವಾಗುವಂತಹ ಯಾವುದಾದರೂ ಉದ್ಯಮ ಆರಂಭಿಸುವ ಯೋಚನೆ ಮಾಡಿದರು ಕುಮಾರ್.

ಗ್ರಾಮ್ ಸುಚಾನ ಸಲ್ಯೂಷನ್ಸ್ – ಸ್ಥಳೀಯ ಭಾಷೆಯಲ್ಲಿ ಗ್ರಾಮೀಣ ಭಾಗದ ವಿಚಾರಗಳ ಮಾಹಿತಿ ಒದಗಿಸುವ ವೇದಿಕೆ ಹುಟ್ಟು ಹಾಕಿದರು. ನಂತರ 2015ರಲ್ಲಿ ಅದೇ ಕಂಪನಿಯ ಅಡಿಯಲ್ಲಿ ಜಿಎಸ್ ಫಾಮ್ರ್ ತಾಝಾ ಪೊ›ಡ್ಯೂಸ್ ಪ್ರೈ. ಲಿ. ಎಂಬ ತಾಜಾ ಹಣ್ಣು-ತರಕಾರಿಗಳ ಸರಬರಾಜು ಸರಪಳಿ ನಿರ್ವಹಣೆಯ ಬಿಸಿನೆಸ್-ಟು-ಬಿಸಿನೆಸ್(ಬಿ-ಟು-ಬಿ) ಕಂಪನಿ ಆರಂಭಿಸಿದರು. ಮೊದಲಿಗೆ ಸಿಲಿಕಾನ್ ವ್ಯಾಲಿಯ ಕೆಲ ಏಂಜೆಲ್ ಹೂಡಿಕೆದಾರರಿಂದ 1.5 ಮಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಪಡೆದ ಕುಮಾರ್ ಬೆಂಗಳೂರಿನಲ್ಲಿ ಉದ್ಯಮ ಸ್ಥಾಪಿಸಿದರು. ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಕೊಳ್ಳುವ ಫಾಮ್ರ್ ತಾಝಾ, ಅದನ್ನು ಸೂಪರ್ ಮಾರ್ಕೆಟ್​ಗಳು, ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳು ಮತ್ತು ಅಡುಗೆ ಕಂಟ್ರಾಕ್ಟರ್​ಗಳಿಗೆ ಮಾರಾಟ ಮಾಡುತ್ತದೆ.

ತಾಜಾ ಕೃಷಿ ಉತ್ಪನ್ನಗಳ ಸರಬರಾಜು ಮಾರುಕಟ್ಟೆ ಈಗಲೂ ನೂರು ವರ್ಷದ ಹಿಂದೆ ಇದ್ದಂತೆಯೇ ಇದೆ. ಒಂದು ಅಂದಾಜಿನ ಪ್ರಕಾರ ಹಣ್ಣು-ತರಕಾರಿಗಳು ರೈತರಿಂದ ರೀಟೇಲರ್​ಗಳ ಬಳಿಗೆ ತಲುಪುವಷ್ಟರಲ್ಲಿ ಅನೇಕ ಕೈಗಳು ಬದಲಾಗುವುದರಿಂದ ಶೇ.30-40 ಉತ್ಪನ್ನಗಳು ಕೊಳೆತು ಹಾಳಾಗುತ್ತದೆ. ಇದರೊಂದಿಗೆ ರೈತರಿಗೂ ನ್ಯಾಯಯುತವಾದ ಬೆಲೆ ದೊರೆಯುವುದಿಲ್ಲ. ಜತೆಗೆ, ದಲ್ಲಾಳಿಗಳ ಹಾವಳಿಯಿಂದಾಗಿ ಉತ್ಪನ್ನ ಗ್ರಾಹಕರಿಗೆ ದುಬಾರಿಯಾಗುತ್ತದೆ. ಇದನ್ನೆಲ್ಲ ಗಮನಿಸಿದ ಕುಮಾರ್ ಈ ಕ್ಷೇತ್ರಕ್ಕೆ ಸಂಘಟಿತ ರೂಪ ನೀಡುವ ಹಾಗೂ ರೈತರು ಮತ್ತು ರೀಟೇಲರ್​ಗಳಿಗೆ ಅನುಕೂಲವಾಗುವಂತಹ ಈ ಉದ್ಯಮ ಸ್ಥಾಪನೆಗೆ ಮುಂದಾದರು.

ಫಾಮ್ರ್ ತಾಝಾ, ತನ್ನ ಗ್ರಾಹಕ ರೀಟೇಲರ್​ಗಳು, ಹೋಟೆಲ್ ಹಾಗೂ ರೆಸ್ಟೋರೆಂಟ್​ಗಳ ಬೇಡಿಕೆ ಅಂದಾಜಿಸಿ ರೈತರಿಗೆ ಏಳೆಂಟು ದಿನ ಮುಂಚಿತವಾಗಿಯೇ ಅಗತ್ಯವಿರುವ ಹಣ್ಣು – ತರಕಾರಿಗಳ ಮಾಹಿತಿ ನೀಡುತ್ತದೆ. ರೈತರಿಗೆ ಮಾರುಕಟ್ಟೆ ದರ ನೀಡಿ ಅವರಿಂದ ಖರೀದಿಸಿ ಅದನ್ನು ಸೂಪರ್ ಮಾರ್ಕೆಟ್​ಗಳು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಿಗೆ ವಿತರಿಸುತ್ತದೆ. ಇದರೊಂದಿಗೆ ರೈತರಿಗೆ ಇಳುವರಿ ಹೆಚ್ಚಿಸಲು ಹಾಗೂ ಕಾರ್ಯಕ್ಷಮತೆ ವೃದ್ಧಿಸಿಕೊಳ್ಳಲು ಅನೇಕ ಸಲಹೆ ಸೂಚನೆಗಳನ್ನು ಕಂಪನಿ ಒದಗಿಸುತ್ತದೆ. ರೀಟೇಲರ್​ಗಳಿಗೆ ಉತ್ಪನ್ನ ಆರ್ಡರ್ ಮಾಡಲು ಹಾಗೂ ಅದರ ಮೇಲೆ ನಿಗಾ ಇಡಲು ಫಾಮ್ರ್ ತಾಝಾ ಮೊಬೈಲ್ ಅಪ್ಲಿಕೇಷನ್ ಒಂದನ್ನೂ ಬಿಡುಗಡೆ ಮಾಡಿದೆ. ವೇದಿಕೆಯಲ್ಲಿ ಸುಮಾರು 1400 ನೋಂದಾಯಿತ ರೈತರಿದ್ದು ಅವರಿಂದ ಸುಮಾರು 150 ಬಗೆಯ ಹಣ್ಣು-ತರಕಾರಿಗಳನ್ನು ಸಂಗ್ರಹಿಸುತ್ತದೆ. 350ಕ್ಕೂ ಅಧಿಕ ಗ್ರಾಹಕ ಔಟ್​ಲೆಟ್​ಗಳಿಗೆ ಅದನ್ನು ಪೂರೈಸುತ್ತಿದೆ. ಚಿಕ್ಕಬಳ್ಳಾಪುರ, ಊಟಿ, ಕೃಷ್ಣಗಿರಿ, ಒಳಕೂರು, ಮೇಟ್ಟುಪಾಳ್ಯಂ ಹಾಗೂ ಪಾಲಕಾಡ್​ಗಳಿಂದ ಹಣ್ಣು-ತರಕಾರಿಗಳನ್ನು ಸಂಗ್ರಹಿಸುವ ಫಾಮ್ರ್ ತಾಝಾ, ಬೆಂಗಳೂರು, ಮಂಗಳೂರು, ಚೆನ್ನೈ, ಹೈದರಾಬಾದ್ ನಗರಗಳ ಖರೀದಿದಾರರಿಗೆ ಪೂರೈಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 20 ಕೋಟಿ ರೂ. ವ್ಯವಹಾರ ನಡೆಸಿರುವ ಕಂಪನಿ ಈ ಆರ್ಥಿಕ ವರ್ಷ 40 ಕೋಟಿ ರೂ. ತಲುಪಲಿದ್ದು ನಷ್ಟರಹಿತ ಉದ್ಯಮವಾಗುವ ಭರವಸೆ ಹೊಂದಿದೆ.

ಸದ್ಯದಲ್ಲೇ ಕೊಚ್ಚಿ, ವಿಜಯವಾಡ, ಕ್ಯಾಲಿಕಟ್ ಹಾಗೂ ತಿರುವನಂತಪುರ ನಗರಗಳಿಗೆ ತನ್ನ ಉದ್ಯಮ ವಿಸ್ತರಿಸುವ ಗುರಿ ಹೊಂದಿದೆ. ಇನ್ನು ಮೂರು ವರ್ಷಗಳ ಅವಧಿಯಲ್ಲಿ ಸುಮಾರು 10,000 ರೈತರಿಗೆ ನೆರವಾಗುವ ಉದ್ದೇಶ ಕಂಪನಿಗಿದೆ.

ದೇಶದಲ್ಲಿ ಸುಮಾರು 20 ಬಿಲಿಯನ್​ನಷ್ಟಿರುವ ತಾಜಾ ಹಣ್ಣು-ತರಕಾರಿಗಳ ಸರಬರಾಜು ಮಾರುಕಟ್ಟೆಯಲ್ಲಿ ಇಂತಹ ತಂತ್ರಜ್ಞಾನ ಆಧರಿತ ಉದ್ಯಮಗಳಿಗೆ ಸಾಕಷ್ಟು ಫಲ ದೊರೆಯುವುದರಲ್ಲಿ ಅನುಮಾನವಿಲ್ಲ!

ಲೇಖಕರು: ಸ್ಟಾರ್ಟಪ್​ಗಳ ವಿಷಯದಲ್ಲಿ ಸಂವಹನ ಸಲಹೆಗಾರರು

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top