Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ರೇಪಿಸ್ಟ್‌ ಬಾಬಾಗೆ ಕೈದಿ ನಂಬರ್‌ ಸಿಕ್ತು

Saturday, 26.08.2017, 3:04 PM       No Comments

ನವದೆಹಲಿ: ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್‌ ರಾಮ್ ರಹೀಮ್‌ ಸಿಂಗ್‌ ಅಪರಾಧಿ ಎಂದು ಘೋಷಣೆಯಾಗುತ್ತಿದ್ದಂತೆ ಆತನ ಅನುಯಾಯಿಗಳು ಹರಿಯಾಣ ಮತ್ತು ಪಂಜಾಬ್‌ನಲ್ಲಿ ಹಿಂಸಾಚಾರ ನಡೆಸಿದ್ದರು.

ಇಷ್ಟೆಲ್ಲಾ ಅವಾಂತರಗಳಿಗೆ ಕಾರಣನಾದ ರೇಪಿಸ್ಟ್‌ ಬಾಬಾನಿಗೆ ಜೈಲಿನಲ್ಲಿ 1997ನೇ ಕೈದಿ ನಂಬರ್‌ ದೊರಕಿದೆ. ಏನೇ ನಂಬರ್‌ ಸಿಕ್ಕಿದರೂ ಪುಣ್ಯಾತ್ಮ ಬಾಬಾ ಆರಾಮಾಗಿ ಜೈಲಿನಲ್ಲಿ ಕಾಲತಳ್ಳುತ್ತಿದ್ದಾನೆ.

ಘಟನೆಯಲ್ಲಿ ಪಂಚಕುಲದಲ್ಲಿ 28 ಜನ ಮತ್ತು ಸಿರ್ಸಾದಲ್ಲಿ ಮೂವರು ಸೇರಿ ಒಟ್ಟು 31 ಜನ ಸಾವಿಗೀಡಾಗಿದ್ದರು. 300ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದವು. ಕಾರು, ದ್ವಿಚಕ್ರ ವಾಹನ, 5 ಓಬಿ ವಾಹನ ಸೇರಿ ಒಟ್ಟು 150 ವಾಹನಗಳಿಗೆ ಹಾನಿಯುಂಟಾಗಿತ್ತು. ಅಲ್ಲದೆ ಮೂರು ಸರ್ಕಾರಿ ಕಟ್ಟಡ ಸೇರಿ ಸಾರ್ವಜನಿಕ ಆಸ್ತಿಗಳನ್ನು ಹಾಳುಮಾಡಿದ್ದರು. ಈ ನಷ್ಟವನ್ನು ತುಂಬಿ ಕೊಡಲು ಡೇರಾದ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವಂತೆ ಹೈಕೋರ್ಟ್‌ ಆದೇಶ ನೀಡಿತ್ತು.

ಅತ್ಯಾಚಾರಿ ಗುರ್ಮೀತ್​​ ರಾಮ್​ ರಹೀಂ ಸಿಂಗ್‌ನ 36 ಆಶ್ರಮಗಳಿಗೆ ಮಿಲಿಟರಿ ಪಡೆ ಬೀಗ ಜಡಿದಿದ್ದು, ಆಶ್ರಮದಲ್ಲಿ ಎಕೆ 47, ಪಿಸ್ತೂಲು, ಗನ್‌ ಸೇರಿದಂತೆ ಭಾರಿ ಶಸ್ತ್ರಾಸ್ತ್ರ ಪತ್ತೆಯಾಗಿದೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top