Monday, 22nd October 2018  

Vijayavani

ರಾಮನಗರ ಅಖಾಡ ಜಯಿಸಲು ರಣತಂತ್ರ - ದೋಸ್ತಿಗಳ ಮಿಡ್​​​ನೈಟ್​​​ ಮೀಟಿಂಗ್​ - ಸಿಎಂ ಎಚ್​ಡಿಕೆ, ಡಿಕೆಶಿ ನೇತೃತ್ವದಲ್ಲಿ ರಣತಂತ್ರ        ಮಲೆನಾಡ ರಣಕಣದಲ್ಲಿ ಬಿಜೆಪಿ ಅಬ್ಬರ-ಮಧು ಬಂಗಾರಪ್ಪ ಪರ ದಿಗ್ಗಜರ ಪ್ರಚಾರ - ಮಂಡ್ಯದಲ್ಲಿ ಕೈಗೆ ತಲ್ಲಣ ತಂದಿಟ್ಟ ಪರಾಜಿತರು        ಗಣಿನಾಡಿನಲ್ಲಿಂದು ‘ಕೈ’ ದಿಗ್ಗಜರ ದಂಡು - ಸಿದ್ದು, ಡಿಕೆಶಿ, ಜಾರಕಿಹೊಳಿ ಬ್ರದರ್ಸ್​​​​​​ ಕ್ಯಾಂಪೇನ್​ - ಮಾತನಾಡ್ತಾರಾ ನಾಯಕರು..?        ಆದೇಶವಿದ್ರೂ ಮುಚ್ಚಲಿಲ್ಲ ಘಟಕಗಳು - ಹೈಕೋರ್ಟ್​​​​ ಆದೇಶ ಮೀರಿ ನಡೆಯುತ್ತಿವೆ  ಶುದ್ಧ ನೀರಿನ ಘಟಕದ ಹೆಸರಲ್ಲಿ ದಂಧೆ        ವಾಣಿವಿಲಾಸ್​ ಆಸ್ಪತ್ರೆಯಲ್ಲಿ ಲೇಡಿ ಡಾನ್ಸ್​ - ಹಣ ಕೊಟ್ರೆ ಮಾತ್ರ ಒಳಗೆ ಪರ್ಮಿಷನ್​ - ಲಂಚ ಕೊಡದಿದ್ರೆ ಇಲ್ಲಿ ಏನೂ ನಡಿಯಲ್ಲ..!        20 ಜನರ ಉಳಿಸಿ, ಜೀವ ತೊರೆದ ಯೋಧ - ಹುತಾತ್ಮ ಉಮೇಶ್​ ದೇಹ ಇಂದು ರಾಜ್ಯಕ್ಕೆ - ಗೋಕಾಕ್​ ಪಟ್ಟಣದಲ್ಲಿ ಅಂತ್ಯಕ್ರಿಯೆ       
Breaking News

ರೆಬೆಲ್​ಸ್ಟಾರ್, ರಮ್ಯಾ ಮಂಡ್ಯ ರಾಜಕೀಯ ಚಟುವಟಿಕೆ ಶುರು

Sunday, 12.11.2017, 3:03 AM       No Comments

| ಮಾದರಹಳ್ಳಿ ರಾಜು

ಮಂಡ್ಯ: ಕ್ಷೇತ್ರದಿಂದ ಬಹುತೇಕ ದೂರ ಉಳಿದಿದ್ದ ಶಾಸಕ ಅಂಬರೀಶ್ ಹಾಗೂ ಮಾಜಿ ಸಂಸದೆ ರಮ್ಯಾ ತಮ್ಮರಾಜಕೀಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.

ರಮ್ಯಾ ಮಂಡ್ಯದಲ್ಲಿ ಬಾಡಿಗೆಗೆ ಮಾಡಿದ್ದ ಮನೆಯನ್ನೇ ಖರೀದಿಸಿ ತಮ್ಮ ಜನ್ಮದಿನವಾದ ನ.29ರಿಂದ ವಾಸ್ತವ್ಯ ಹೂಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಇತ್ತ ಅಂಬರೀಶ್ ಸಹ ಶುಕ್ರವಾರ ಸಂಜೆ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ಮನೆಗೆ ಆಗಮಿಸಿ, ಮಾಜಿ ಸಂಸದ ಜಿ.ಮಾದೇಗೌಡರನ್ನು ಕರೆಸಿಕೊಂಡು ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಆರಂಭದಲ್ಲಿ ಅಂಬರೀಶ್, ಗೌಡರ ಸಲಹೆ, ಸಹಕಾರ ಕೇಳಲು ಬಂದಿದ್ದೇನೆ ಎಂದಾಗ ಮಾದೇಗೌಡರು ನನಗೆ ವಯಸ್ಸಾಗಿದೆ. ನಾನೇನು ಸಲಹೆ ನೀಡಲಿ. ನೀನೆ ಸಲಹೆ ಕೊಡು ಎಂದರು. ಇಬ್ಬರ ನಡುವೆ ಕೆಲಕಾಲ ಹಾಸ್ಯದ ಧಾಟಿಯಲ್ಲಿ ಮಾತುಕತೆ ನಡೆಯಿತು.

ಮಾಧ್ಯಮದವರ ಜತೆ ಮಾತನಾಡಿದ ಅಂಬರೀಶ್, ನನ್ನದು ಮತ್ತು ಮಾದೇಗೌಡರದು ತಂದೆ ಮಗನ ಪ್ರೀತಿ. ಮಗನನ್ನು ನೋಡಬೇಕೆಂದು ಇಲ್ಲಿಗೆ ಬಂದಿದ್ದಾರೆ. ಟಿಕೆಟ್ ಯಾರಿಗೆ ಕೊಡಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ. ಕೆಪಿಸಿಸಿ ಅಧ್ಯಕ್ಷರೇ ‘ಸೋನಿಯಾಗಾಂಧಿ ನನಗೆ ಟಿಕೆಟ್ ನೀಡಿದರೆ ಕೊರಟಗೆರೆಯಿಂದ ನಿಲ್ಲುತ್ತೇನೆ’ ಎಂದಿದ್ದಾರೆ. ಆದ್ದರಿಂದ ಟಿಕೆಟ್ ಯಾರಿಗೆ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಮ್ಯಾ ಸ್ಪರ್ಧೆ ಮಾಡಿದರೆ ಸಂತೋಷ ಎಂದು ಪ್ರತಿಕ್ರಿಯಿಸಿದರು.

ಜಿಎಂ ಭೇಟಿಯೂ ಕುತೂಹಲ

ಅಂಬರೀಶ್ ಇದ್ದಲ್ಲಿಗೆ ಹೋಗಿ ಮಾಜಿ ಸಂಸದ ಜಿ.ಮಾದೇಗೌಡರು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ. ಹಿಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಮಧು ಜಿ.ಮಾದೇಗೌಡರಿಗೆ ಬಿ ಫಾರಂ ಸಿಗಲು ಅಂಬರೀಶ್ ಕಾರಣರಾಗಿದ್ದರು. ಈಗ ಮತ್ತೆ ಮಧು ಆಕಾಂಕ್ಷಿಯಾಗಿದ್ದಾರೆ. ಇವರಲ್ಲದೆ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಎಸ್.ಎಂ.ಕೃಷ್ಣರ ಸಹೊದರನ ಪುತ್ರ ಗುರುಚರಣ್, ಮಾಜಿ ಶಾಸಕ ಮಹೇಶ್​ಚಂದ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಗೌಡರು ಹಾಗೂ ಅಂಬಿ ಭೇಟಿಯಿಂದ ಮತ್ತೆ ಮಧು ಅವರಿಗೆ ಟಿಕೆಟ್ ಸಿಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಸ್ವಂತದ್ದಾದ ಮನೆ

ಮತ್ತೊಂದೆಡೆ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಬಾಡಿಗೆ ಮನೆಯನ್ನು ಖಾಲಿ ಮಾಡಿ ಕ್ಷೇತ್ರದಿಂದ ನಾಪತ್ತೆಯಾಗಿದ್ದ ರಮ್ಯಾ, ಕೆಲದಿನಗಳ ನಂತರ ಕ್ಷೇತ್ರದೊಳಗೆ ಕಾಣಿಸಿಕೊಂಡ ಬಳಿಕ ದೆಹಲಿ ರಾಜಕಾರಣದತ್ತ ಮುಖ ಮಾಡಿದ್ದರು. ಕಾಂಗ್ರೆಸ್​ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾದ ರಮ್ಯಾ, ಬಾಡಿಗೆಗೆ ಪಡೆದಿದ್ದ ಸಾದತ್ ಆಲಿಖಾನ್ ಅವರ ಮನೆಯನ್ನು 4.40 ಕೋಟಿ ರೂ.ಗೆ ಖರೀದಿಸಿದ್ದಾರೆ. ನವೀಕರಣ ಮಾಡಿಸುತ್ತಿದ್ದು, ನ.29ರಂದು ತಮ್ಮ ಜನ್ಮ ದಿನದಿಂದ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇಬ್ಬರದ್ದು ವಿರುದ್ಧ ದಿಕ್ಕು

ಅಂಬರೀಶ್ ಹಾಗೂ ರಮ್ಯಾ ಒಂದೇ ಪಕ್ಷದಲ್ಲಿ ಇದ್ದರೂ ಇಬ್ಬರು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂಬುದು ಗುಟ್ಟಿನ ಸಂಗತಿಯೇನಲ್ಲ. ಲೋಕಸಭಾ ಉಪ ಚುನಾವಣೆಯಲ್ಲಿ ರಮ್ಯಾ ಪರ ಪ್ರಚಾರ ಮಾಡಿದ್ದ ಅಂಬರೀಶ್, 2013ರ ಸಾರ್ವತ್ರಿಕ ಚುನಾವಣೆಗೂ ಮುನ್ನ ತೀವ್ರ ಅಸ್ವಸ್ಥರಾಗಿದ್ದರು. ಮಲೇಷಿಯಾದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಗ ಅವರ ದೇಹದಿಂದ ಲೀಟರ್​ಗಟ್ಟಲೇ ನೀರು ತೆಗೆಯಲಾಗಿದೆ ಎಂದು ರಮ್ಯಾ ಹೇಳಿಕೆಯಿಂದ ಅಂಬಿ ಅಭಿಮಾನಿಗಳು ಗರಂ ಆಗಿದ್ದರು. ಅಂಬರೀಶ್ ಚೇತರಿಸಿಕೊಂಡು ಚುನಾವಣೆ ಪ್ರಚಾರಕ್ಕಾಗಿ ಮಂಡ್ಯಕ್ಕೆ ಆಗಮಿಸಿದಾಗ ರಮ್ಯಾ ದೀಪ ಬೆಳಗಿ ಸ್ವಾಗತಿಸಿದ್ದರು. ಆದರೆ, ಅಂಬಿ ಬೆಂಬಲಿಗರು ರಮ್ಯಾ ‘ಕೈ’ ಹಿಡಿಯಲಿಲ್ಲ ಎಂಬ ಆರೋಪಗಳು ವ್ಯಾಪಕವಾಗಿದ್ದವು. ಅದಕ್ಕೆ ಸಾಕ್ಷಿ ಎಂಬಂತೆ ರಮ್ಯಾ 5 ಸಾವಿರ ಮತಗಳ ಅಂತರದಿಂದ ಪರಾಜಿತರಾದರು. ತರುವಾಯ ಇಬ್ಬರ ನಡುವಿನ ಮುನಿಸು ಉಲ್ಬಣವಾಗಿದೆ ಎಂಬ ಮಾತುಗಳಿವೆ.

Leave a Reply

Your email address will not be published. Required fields are marked *

Back To Top