Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ರೆಪೋ ದರ ಬದಲಿಲ್ಲ

Thursday, 05.10.2017, 3:02 AM       No Comments

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ನಾಲ್ಕನೇ ದ್ವೈಮಾಸಿಕ ವಿತ್ತ ನೀತಿ ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ದೇಶದ ಬೆಳವಣಿಗೆ ದರದ ನಿರೀಕ್ಷೆಯನ್ನು ಪ್ರಸಕ್ತ ವರ್ಷಕ್ಕೆ ಅನ್ವಯವಾಗುವಂತೆ ಶೇಕಡ 7.3ರಿಂದ ಶೇ. 6.7ಕ್ಕೆ ಇಳಿಸಿದೆ. ಅರ್ಥ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಮಾಡುವ ನಿಟ್ಟಿನಲ್ಲಿ ಬ್ಯಾಂಕುಗಳಿಗೆ 55,000 ಕೋಟಿ ರೂ. ನೆರವು ನೀಡಲು ಮುಂದಾಗಿದೆ.

ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಆರು ಸದಸ್ಯರ ಮಾನಿಟರಿ ಪಾಲಿಸಿ ಕಮಿಟಿ(ಎಂಪಿಸಿ)ಯ ಐವರು ಸದಸ್ಯರು ರೆಪೋ ದರ ಹಾಗೇ ಉಳಿಸುವಂತೆ ಮತ ಚಲಾಯಿಸಿದರು. ಪರಿಣಾಮ ರೆಪೋ ದರ ಶೇ.6 ಮತ್ತು ರಿವರ್ಸ್ ರೆಪೋದರ ಶೇ.5.75 ಉಳಿದುಕೊಂಡಿದೆ. ಹಾಗೆಯೇ, ಈ ಹಣಕಾಸು ವರ್ಷಕ್ಕೆ ಸಂಬಂಧಿಸಿ ಹಣದುಬ್ಬರ ಶೇ. 4ರಿಂದ 4.5 ಇರಬಹುದೆಂದು ಅಂದಾಜಿಸಲಾ ಗಿತ್ತಾದರೂ, ಅದೀಗ ಶೇ. 4.2ರಿಂದ 4.6ರ ತನಕ ಆಗಬಹುದೆಂದು ನಿರೀಕ್ಷಿಸಲಾಗಿದೆ. ಆರ್​ಬಿಐ ಘೋಷಿಸಿದ ಈ ನೀತಿ ಅಕ್ಟೋಬರ್ 14ರಿಂದ ಜಾರಿಗೆ ಬರಲಿದೆ. ಮುಂದಿನ ಎಂಪಿಸಿ ಸಭೆ ಡಿಸೆಂಬರ್ 5-6ರಂದು ನಡೆಯಲಿದೆ.

ಷೇರುಪೇಟೆ ಸಂಭ್ರಮ

ರೆಪೋದರ ಬದಲಾಯಿಸದ ಆರ್​ಬಿಐ ನೀತಿಯನ್ನು ಷೇರುಪೇಟೆ ಸ್ವಾಗತಿಸಿದೆ. ಬಿಎಸ್​ಇ ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ ಗರಿಷ್ಠ 31752.16 ಅಂಶಕ್ಕೇರಿದ್ದಲ್ಲದೆ, 230 ಅಂಶಗಳ ಏರಿಕೆ ದಾಖಲಿಸಿತು. ಹಾಗೆಯೇ ಎನ್​ಎಸ್​ಇ ನಿಫ್ಟಿ 79 ಅಂಶ ಏರಿಕೆಯೊಂದಿಗೆ ದಿನದ ಗರಿಷ್ಠ ಮಟ್ಟ 9938.3 ಅಂಶ ದಾಖಲಿಸಿದೆ. ದಿನದ ವಹಿವಾಟು ಮುಕ್ತಾಯವಾದಾಗ ಸೆನ್ಸೆಕ್ಸ್ 174.33 ಅಂಶಗಳ ಏರಿಕೆಯೊಂದಿಗೆ 31671.71 ಅಂಶ ತಲುಪಿತ್ತು. ನಿಫ್ಟಿ ಸೂಚ್ಯಂಕ 55.40 ಅಂಶದ ಏರಿಕೆಯೊಂದಿಗೆ 9914.90 ಅಂಶದೊಂದಿಗೆ ದಿನದ ವಹಿವಾಟು ಕೊನೆಗೊಳಿಸಿದೆ.

ಚಿನ್ನದ ಬೆಲೆ ಕುಸಿತ

ಜಾಗತಿಕ ವಿದ್ಯಮಾನಗಳ ಕಾರಣದಿಂದಾಗಿ ದೀಪಾವಳಿ ಹಬ್ಬ ಹತ್ತಿರ ಬಂದರೂ ಚಿನ್ನದ ಬೆಲೆ ಇಳಿಮುಖವಾಗಿದೆ. ಮಂಗಳವಾರ ಏಳು ವಾರಗಳ ಕನಿಷ್ಠ ಮಟ್ಟ ತಲುಪಿದ್ದ ಚಿನ್ನದ ಬೆಲೆ ಪ್ರಾದೇಶಿಕ ಮಾರುಕಟ್ಟೆಯಲ್ಲಿ 29,000 ರೂಪಾಯಿ ಆಸುಪಾಸಿಗೆ ತಲುಪಿದೆ. ಡಿಸೆಂಬರ್ ವೇಳೆಗೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆಯ ನಿರೀಕ್ಷೆ ಮತ್ತು ಷೇರುಪೇಟೆ ಚೇತರಿಸಿಕೊಂಡ ಬೆನ್ನಲ್ಲೇ ಚಿನ್ನದ ಬೆಲೆ ಕುಸಿತ ಉಂಟಾಗಿದೆ. ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಯಿಂದ ಆಗುತ್ತಿರುವ ಜಾಗತಿಕ ಒತ್ತಡದ ಪರಿಣಾಮ ಹಳದಿ ಲೋಹದ ಬೆಲೆ ಔನ್ಸ್(28.35 ಗ್ರಾಂ)ಗೆ 1274.9 ಡಾಲರ್(82908.40 ರೂಪಾಯಿ)ಗೆ ಸೋಮವಾರ ತಲುಪಿತ್ತು. ಇದು ಇನ್ನಷ್ಟು ಕುಸಿಯುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

Back To Top