Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ರೆಡ್​ಗೆ ಇಂದ್ರಜಿತ್ ಶತಕದಾಸರೆ

Thursday, 14.09.2017, 3:00 AM       No Comments

ಕಾನ್ಪುರ: ಬಾಬಾ ಇಂದ್ರಜಿತ್ (120*ರನ್, 181ಎಸೆತ, 12 ಬೌಂಡರಿ, 2 ಸಿಕ್ಸರ್) ಶತಕದಾಟದ ನೆರವಿನಿಂದ ಇಂಡಿಯಾ ರೆಡ್ ತಂಡ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ತನ್ನ 2ನೇ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಸುರೇಶ್ ರೈನಾ ಸಾರಥ್ಯದ ಇಂಡಿಯಾ ಬ್ಲೂ ತಂಡದ ವಿರುದ್ಧ ಗೌರವಯುತ ಮೊತ್ತ ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಡಿಯಾ ರೆಡ್ ತಂಡ ಆರಂಭಿಕ ಕುಸಿತ ಕಂಡರೂ ನಂತರ ಬಾಬಾ ಇಂದ್ರಜಿತ್ ತೋರಿದ ಏಕಾಂಗಿ ಹೋರಾಟದ ನೆರವಿನಿಂದ ಮೊದಲ ದಿನದಂತ್ಯಕ್ಕೆ 9 ವಿಕೆಟ್​ಗೆ 291 ರನ್ ದಾಖಲಿಸಿತು. ಇದಕ್ಕೂ ಮುನ್ನ ಇಂಡಿಯಾ ಬ್ಲೂ ತಂಡದ ವೇಗಿ ಅಂಕಿತ್ ಸಿಂಗ್ ರಜಪೂತ್(44ಕ್ಕೆ 3) ದಾಳಿಗೆ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತ್ತು. ಕಳೆದ ಪಂದ್ಯದ ಗೆಲುವಿನ ರೂವಾರಿ ಹಾಗೂ ಅವಳಿ ಶತಕವೀರ ಪ್ರಿಯಾಂಕ್ ಪಾಂಚಾಲ್(36) ವೈಫಲ್ಯ ಕಂಡಿದ್ದರಿಂದ ರೆಡ್ ತಂಡ 205 ರನ್​ಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇಂಡಿಯಾ ರೆಡ್: 84 ಓವರ್​ಗಳಲ್ಲಿ 9 ವಿಕೆಟ್​ಗೆ 291 (ಬಾಬಾ ಇಂದ್ರಜಿತ್ 120*, ಪಾಂಚಾಲ್ 36, ರಿಷಭ್ ಪಂತ್ 15, ರಜಪೂತ್ 44ಕ್ಕೆ 3, ಜೈದೇವ್ ಉನಾದ್ಕತ್ 64ಕ್ಕೆ 2).

Leave a Reply

Your email address will not be published. Required fields are marked *

Back To Top