Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ರೂ. 4 ಸಾವಿರ ಕೋಟಿ ಮೌಲ್ಯದ ದಾವೂದ್ ಲಂಡನ್ ಆಸ್ತಿ ಜಪ್ತಿ!

Thursday, 14.09.2017, 3:05 AM       No Comments

ನವದೆಹಲಿ: ಮುಂಬೈ ಸರಣಿ ಸ್ಫೋಟ ಸಹಿತ ಭಾರತದಲ್ಲಿ ಹತ್ತಾರು ಪಾತಕಗಳನ್ನು ಎಸಗಿ ಸದ್ಯ ಪಾಕಿಸ್ತಾನದಲ್ಲಿ ಭೂಗತನಾಗಿ ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಪಾತಕಿ ದಾವೂದ್ ಇಬ್ರಾಹಿಂಗೆ ಬ್ರಿಟನ್ ಸರ್ಕಾರ ಭಾರಿ ಆಘಾತ ನೀಡಿದೆ.

ಬ್ರಿಟನ್ ವ್ಯಾಪ್ತಿಯಲ್ಲಿ ದಾವೂದ್ ಬೇನಾಮಿ ಹೆಸರಲ್ಲಿ ಹೊಂದಿರುವ ಸುಮಾರು 4 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಅಲ್ಲಿನ ಅಧಿಕಾರಿಗಳು ಜಪ್ತಿ ಮಾಡಿರುವುದಾಗಿ ಲಂಡನ್ ಮಾಧ್ಯಮಗಳು ವರದಿ ಮಾಡಿವೆ. ದಾವೂದ್ ಒಡೆತನಕ್ಕೆ ಸೇರಿದ್ದೆನ್ನಲಾದ ಪ್ರತಿಷ್ಠಿತ ಹೋಟೆಲ್ ಹಾಗೂ ಕೆಲ ಮನೆಗಳನ್ನು ಕೂಡ ಬ್ರಿಟನ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಮಾತು ಉಳಿಸಿಕೊಂಡ ಬ್ರಿಟನ್: 61 ವರ್ಷದ ದಾವೂದ್ ಬೆನ್ನತ್ತಿರುವ ನರೇಂದ್ರ ಮೋದಿ ಸರ್ಕಾರ ಆತನಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು 2015ರಲ್ಲೇ ಬ್ರಿಟನ್ ಸರ್ಕಾರಕ್ಕೆ ಹಸ್ತಾಂತರಿಸಿತ್ತು. ಪ್ರಧಾನಿ ಮೋದಿ ಬ್ರಿಟನ್​ಗೆ ಭೇಟಿ ನೀಡಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾಗ ಈ ವಿಚಾರ ಪ್ರಸ್ತಾಪವಾಗಿತ್ತು.

ದಾವೂದ್ ವಿರುದ್ಧ ಕಾರ್ಯಾಚರಣೆಗೆ ಪೂರ್ಣ ಸಹಕಾರ ನೀಡುವುದಾಗಿ ಬ್ರಿಟನ್ ಭರವಸೆ ನೀಡಿತ್ತು. ಲಂಡನ್ ಮತ್ತಿತರ ಮಹಾನಗರಗಳಲ್ಲಿ ರಿಯಲ್ ಎಸ್ಟೇಟ್ ಸಹಿತ ಹಲವು ವಹಿವಾಟುಗಳನ್ನು ಬೇನಾಮಿ ಹೆಸರಲ್ಲಿ ನಡೆಸುತ್ತಿರುವ ದಾವೂದ್ ಇದರಿಂದ ಬರುವ ಆದಾಯವನ್ನು ಉಗ್ರ ಚಟುವಟಿಕೆ, ಅಪರಾಧ ಕೃತ್ಯಗಳಿಗೆ ಬಳಸುತ್ತಾನೆ ಎನ್ನಲಾಗಿದೆ. ಬ್ರಿಟನ್ ಸರ್ಕಾರದ ಈ ದಿಟ್ಟ ನಡೆಯಿಂದಾಗಿ ದಾವೂದ್ ಸಾಮ್ರಾಜ್ಯಕ್ಕೆ ಭಾರಿ ಘಾಸಿ ಆಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

50 ದೇಶಗಳಲ್ಲಿ ವಹಿವಾಟು: ಯುರೋಪ್, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗಳ 50 ದೇಶಗಳಲ್ಲಿ ದಾವೂದ್​ನ ಪಾತಕಲೋಕದ ಬೇರು ವಿಸ್ತರಿಸಿದೆ.

ಮುಂಬೈ ಸ್ಪೋಟದ ಮಾಸ್ಟರ್​ವೆುೖಂಡ್

260 ಜನರನ್ನು ಬಲಿ ಪಡೆದು 700ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಪೋಟದ ರೂಪುರೇಷೆ ಸಿದ್ಧಪಡಿಸಿದ್ದೇ ದಾವೂದ್. ಈ ಪಾತಕ ಕೃತ್ಯದ ಬಳಿಕ ಪಾಕಿಸ್ತಾನಕ್ಕೆ ಹಾರಿ ಕಣ್ಣಾ ಮುಚ್ಚಾಲೆಯಾಡುತ್ತಿರುವ ದಾವೂದ್ ಬಂಧನಕ್ಕೆ ಇಂದಿಗೂ ಭಾರತ ಹರಸಾಹಸಪಡುತ್ತಿವೆ. 2ಜಿ ಹಗರಣ, ಐಪಿಎಲ್ ಸ್ಪಾಟ್ ಫಿಕ್ಸಿಂಗ್​ನಲ್ಲಿಯೂ ದಾವೂದ್ ಹೆಸರು ಕೇಳಿಬಂದಿತ್ತು. ಭಾರತದಲ್ಲಿ ನಕಲಿ ನೋಟು ಜಾಲದ ಕಿಂಗ್​ಪಿನ್ ಈತ.

ಜಾಗತಿಕ ಉಗ್ರ: ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐಸಿಸ್ ಮತ್ತು ಅಲ್​ಖೈದಾ ನಿರ್ಬಂಧ ಸಮಿತಿಯಿಂದ ಘೋಷಣೆ.

ಹೀಗಿತ್ತು ಮೋದಿ ಸ್ಕೆಚ್

  • 2 ವರ್ಷಗಳ ಹಿಂದಿನ (ನ.12-15, 2015) ಬ್ರಿಟನ್ ಪ್ರವಾಸದಲ್ಲಿ ಮೋದಿ, ಅಂದಿನ ಪ್ರಧಾನಿ ಡೇವಿಡ್ ಕ್ಯಾಮರೂನ್​ಗೆ ಭಾರತದ ಮೋಸ್ಟ್ ವಾಂಟೆಡ್ ಪಾತಕಿಗಳ ಪಟ್ಟಿ ನೀಡಿದ್ದರು.
  • ಲಂಡನ್​ನಲ್ಲಿ ದಾವೂದ್​ಗೆ ಸಂಬಂಧಿತ 12ಕ್ಕೂ ಹೆಚ್ಚು ಆಸಿ ್ತಳ (ಬಂಗಲೆಗಳು ಹಾಗೂ ಹೋಟೆಲ್​ಗಳ) ವಿವರ ಪಟ್ಟಿಯಲ್ಲಿತ್ತು.
  • ಆಸ್ತಿಗಳನ್ನು ಗುರುತಿಸಲು ಅದೇ ವರ್ಷ ಮಿಡ್​ಲ್ಯಾಂಡ್​ಗೆ ಭೇಟಿ ನೀಡಿದ್ದ ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳು
  • ಡಾರ್ಟ್​ಫೋರ್ಡ್, ಕೆಂಟ್, ಎಸೆಕ್ಸ್​ನಲ್ಲಿ ದಾವೂದ್ ಒಡೆತನದ ಐಷಾರಾಮಿ ಹೋಟೆಲ್​ಗಳ ಮೇಲೆ ಇ.ಡಿ. ಹದ್ದಿನ ಕಣ್ಣು.
  • ಜ.2017ರಲ್ಲಿ 15 ಸಾವಿರ ಕೋಟಿ ರೂ. ಮೌಲ್ಯದ ದಾವೂದ್ ಆಸ್ತಿ ಯುಎಇ ಸರ್ಕಾರದಿಂದ ಮುಟ್ಟುಗೋಲು ಹಾಕಿಕೊಂಡಿರುವ ವರದಿ.
  • ಆ.2017ರಲ್ಲಿ ಅಂದಿನ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಷಿ ‘ಪಾಕಿಸ್ತಾನದಲ್ಲಿ ದಾವೂದ್ ನೆಲೆಸಿರುವುದು ಖಚಿತ. ಭಾರತಕ್ಕೆ ಬಂಧಿಸಿ ಕರೆತರಲು ಪಾಕ್ ಸರ್ಕಾರ ಅಡ್ಡಿಮಾಡುತ್ತಿದೆ‘ ಎಂದಿದ್ದರು.

ದಾವೂದ್ ವಿಳಾಸ

ಡಿ-13, ವೈಟ್ ಹೌಸ್, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ

ವಿಶ್ವಸಂಸ್ಥೆ ಖಚಿತಪಡಿಸಿರುವ ದಾವೂದ್ ವಿಳಾಸ.

 

ಅಂದುಕೊಂಡಂತೆ ಕೆಲಸಗಳು ಆಗುತ್ತಿವೆ. ಚೀಲದಿಂದ ಬೆಕ್ಕು ಹಾರಿಹೋಗಲು ನಾವು ಬಿಡಬಾರದಲ್ಲವೇ?

| ವಿ.ಕೆ.ಸಿಂಗ್ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ

 

ರೂ. 42, 960 ಕೋಟಿ

ಫೋರ್ಬ್ಸ್ ಸಂಸ್ಥೆ ಪ್ರಕಾರ (2015) ದಾವೂದ್​ನ ಒಟ್ಟಾರೆ ಆಸ್ತಿ ಮೌಲ್ಯ.

50 ಯುರೋಪ್, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾಗಳ 50 ದೇಶಗಳಲ್ಲಿ ದಾವೂದ್​ನ ಪಾತಕಲೋಕದ ಬೇರು ವಿಸ್ತರಿಸಿದೆ.

15 ಶೇಖ್ ದಾವೂದ್ ಹಸನ್, ಅಜೀಜ್ ದಿಲೀಪ್ ಸೇರಿದಂತೆ 15ಕ್ಕೂ ಹೆಚ್ಚು ಹೆಸರುಗಳಲ್ಲಿ ದಾವೂದ್ ಗುರುತಿಸಿಕೊಂಡಿದ್ದಾನೆಂದು ವಿಶ್ವಸಂಸ್ಥೆ ವರದಿ ನೀಡಿದೆ.

ನಂ.2 ವಿಶ್ವದ ಎರಡನೇ ಶ್ರೀಮಂತ ಪಾತಕಿ. ಕೊಲಂಬಿಯಾ ಡ್ರಗ್ಸ್ ದೊರೆ ಪಬ್ಲೊ ಎಸ್ಕೊಬಾರ್​ಗೆ ನಂ.1 ಸ್ಥಾನ.

Leave a Reply

Your email address will not be published. Required fields are marked *

Back To Top