Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ರಿಷಭಪ್ರಿಯಾ ಸೂಪರ್ ಹಿಟ್ 

Thursday, 14.09.2017, 3:00 AM       No Comments

ಬೆಂಗಳೂರು: ಕಿರುಚಿತ್ರ ಮಾಡಿದವರೆಲ್ಲ ಒಂದಷ್ಟು ಫಿಲ್ಮ್ ಫೆಸ್ಟಿವಲ್​ಗಳಲ್ಲಿ ಪ್ರದರ್ಶನ ಮಾಡಿ, ನಂತರ ಯೂ-ಟ್ಯೂಬ್​ಗೆ ಹರಿಬಿಟ್ಟು ಸಮಾಧಾನ ಪಟ್ಟುಕೊಳ್ಳುವುದೇ ಹೆಚ್ಚು. ಅದರಿಂದ ಆದಾಯ ನಿರೀಕ್ಷಿಸುವುದು ಕಷ್ಟಸಾಧ್ಯ. ಆದರೆ ನಟಿ ರಚಿತಾ ರಾಮ್ ನಿರ್ವಿುಸಿರುವ, ಆರ್​ಜೆ ಮಯೂರ್ ನಿರ್ದೇಶನದ ‘ರಿಷಭಪ್ರಿಯಾ’ ಕಿರುಚಿತ್ರ ಲಾಭದ ರುಚಿ ಕಾಣುತ್ತಿದೆ. ಅದು ಕೂಡ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ಮೂಲಕ ಎಂಬುದು ವಿಶೇಷ! ರಾಗಿಣಿ ಚಂದ್ರನ್ ಮತ್ತು ಶ್ರೀಮಹಾದೇವ್ ನಟಿಸಿರುವ ‘ರಿಷಭಪ್ರಿಯಾ’, ಬಿಡುಗಡೆ ಆಗುವ ಮುನ್ನವೇ ಹೈಪ್ ಸೃಷ್ಟಿ ಮಾಡಿದ್ದರಿಂದ ಮಲ್ಟಿಪ್ಲೆಕ್ಸ್​ನಲ್ಲಿ ಎರಡು ಪೇಯ್ಡ್​ ಪ್ರಿಮಿಯರ್ ಏರ್ಪಡಿಸಲಾಗಿತ್ತು.

ಆ ಎರಡೂ ಶೋಗಳು ಹೌಸ್​ಫುಲ್ ಆಗಿರುವುದು ಚಿತ್ರತಂಡದ ಖುಷಿಗೆ ಕಾರಣವಾಗಿದೆ. ‘ಕಿರುಚಿತ್ರಗಳಿಗೆ ಟಿಕೆಟ್ ಇಟ್ಟು ಯಾರೂ ರಿಲೀಸ್ ಮಾಡುವುದಿಲ್ಲ. ಅಂಥದ್ದರಲ್ಲಿ ನಮ್ಮ ಚಿತ್ರಕ್ಕೆ 200 ರೂ. ಟಿಕೆಟ್ ದರ ನಿಗದಿ ಮಾಡಿದ್ದೆವು. ಹಾಗಿದ್ದರೂ 225 ಆಸನಗಳಿರುವ ಎರಡು ಶೋಗಳು ಹೌಸ್​ಫುಲ್ ಆಗಿರುವುದು ನಮ್ಮ ಉತ್ಸಾಹವನ್ನು ಹೆಚ್ಚಿಸಿದೆ’ ಎನ್ನುತ್ತಾರೆ ನಿರ್ದೇಶಕ ಮಯೂರ್. ಇನ್ನೂ ಅನೇಕರು ‘ರಿಷಭಪ್ರಿಯ’ ನೋಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರಂತೆ. ಹಾಗಾಗಿ ಶೀಘ್ರದಲ್ಲೇ ಇನ್ನೂ ಎರಡು ಶೋ ಆಯೋಜಿಸಬೇಕೆಂಬ ಪ್ಲ್ಯಾನ್ ಸಿದ್ಧಗೊಳ್ಳುತ್ತಿದೆ. ಜತೆಗೆ ಮುಂಬೈ ಮತ್ತು ಕೋಲ್ಕತದಲ್ಲೂ ಪ್ರದರ್ಶನ ಮಾಡುವಂತೆ ಅನೇಕರು ಮನವಿ ಮಾಡಿಕೊಂಡಿದ್ದಾರಂತೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ, ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ‘ರಿಷಭಪ್ರಿಯ’ ನೋಡಲು ಆಸಕ್ತಿ ತೋರಿರುವುದು ತಂಡದ ಖುಷಿಯನ್ನು ಹೆಚ್ಚಿಸಿದೆ. ಹಾಗಾಗಿ, ಅವರನ್ನೂ ಒಳಗೊಂಡು ಕನ್ನಡ ಚಿತ್ರರಂಗದ ಅನೇಕರಿಗಾಗಿ ಒಂದು ಸೆಲೆಬ್ರಿಟಿ ಶೋ ಏರ್ಪಡಿಸುವ ಬಗ್ಗೆಯೂ ನಿರ್ದೇಶಕರು ಆಲೋಚಿಸುತ್ತಿದ್ದಾರೆ. ಈ ಕಿರುಚಿತ್ರ ಸಂಗೀತಕ್ಕೆ ಸಂಬಂಧಿಸಿದ್ದಾಗಿದ್ದರೂ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದೆಯಂತೆ. ಇನ್ನೂ ಒಂದಷ್ಟು ಪ್ರದರ್ಶನಗಳನ್ನು ಏರ್ಪಡಿಸಿದ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುವ ಉದ್ದೇಶ ಚಿತ್ರತಂಡದ್ದು. ಒಟ್ಟಿನಲ್ಲಿ ಕನ್ನಡದ ಕಿರುಚಿತ್ರಗಳಿಗೂ ‘ರಿಷಭಪ್ರಿಯಾ’ ಮೂಲಕ ಹೊಸ ಮಾರುಕಟ್ಟೆ ಸೃಷ್ಟಿ ಆದಂತಾಗಿದೆ.

 

Leave a Reply

Your email address will not be published. Required fields are marked *

Back To Top